HomeInternationalದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾನೆ: ಆತನ ಡಿ-ಕಂಪನಿ ಭಾರತದ್ದು ಎಂದ ಯುಎನ್ ವರದಿಗಾರನಿಗೆ ವಾಸ್ತವದ ಪಾಠ ಮಾಡಿ...

ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿದ್ದಾನೆ: ಆತನ ಡಿ-ಕಂಪನಿ ಭಾರತದ್ದು ಎಂದ ಯುಎನ್ ವರದಿಗಾರನಿಗೆ ವಾಸ್ತವದ ಪಾಠ ಮಾಡಿ ತರಾಟೆಗೆ ತೆಗೆದುಕೊಂಡ ಭಾರತ

ನ್ಯೂಯಾರ್ಕ್: ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ನೇತೃತ್ವದ ʼಡಿ-ಕಂಪನಿಯನ್ನು ಭಾರತ ಮೂಲದ ಕ್ರಿಮಿನಲ್ ಗುಂಪುʼ ಎಂದು ಬಣ್ಣಿಸಿದ್ದ ವಿಶ್ವಸಂಸ್ಥೆಯ ಭಯೋತ್ಪಾದನೆ ನಿಗ್ರಹ ಮತ್ತು ಮಾನವ ಹಕ್ಕುಗಳ ವಿಶೇಷ ವರದಿಗಾರರನ ಹೇಳಿಕೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ.

ಅ.21ರಂದು ಬುಧವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 3ನೇ ಸಮಿತಿ ಸಭೆಯಲ್ಲಿ ದಾವೂದ್‌ ಇಬ್ರಾಹಿಂ ಕುರಿತಂತೆ ಈತನ ನೇತೃತ್ವದ ಡಿ-ಕಂಪನಿ ಎಂಬ ಕ್ರಿಮಿನಲ್‌ ಗುಂಪು ಭಾರತ ಮೂಲದ್ದಾಗಿದೆ ಎಂದು ವಿಶ್ವಸಂಸ್ಥೆಯ ವಿಶೇಷ ವರದಿಗಾರ ಬೆನ್ ಸೌಲ್ ಹೇಳಿಕೆ ನೀಡಿದ್ದರು. ಅವರ ವರದಿಗೆ ಪ್ರತಿಕ್ರಿಯೆ ನೀಡಿದ ಯು ಎನ್ ನಲ್ಲಿನ ಭಾರತದ ಶಾಶ್ವತ ನಿಯೋಗದ ಮೊದಲ ಕಾರ್ಯದರ್ಶಿ ರಘು ಪುರಿ ಬೆನ್‌ ಸೌಲ್‌ರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂತಹ ಹೇಳಿಕೆಯ ಮೂಲಕ ವರದಿಗಾರ ತಪ್ಪು ಮಾಡುತ್ತಿದ್ದು, ಇಂತಹ ಅಸಮರ್ಥತೆಯು ವಿಶ್ವಸಂಸ್ಥೆಗೆ ಅಪಾರ ಹಾನಿಯನ್ನುಂಟುಮಾಡುತ್ತದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪುರಿ, ಈ ವರದಿಯಲ್ಲಿ ಹೇಳುವಂತೆ 2003 ರಲ್ಲಿ ಡಿ-ಕಂಪನಿಯ ಎಂಬ ಕ್ರಿಮಿನಲ್ ಗುಂಪಿನ ನಾಯಕ ಅಲ್‌ಖೈದಾ ಜೊತೆ ಸಂಪರ್ಕ ಹೊಂದಿದ್ದಾನೆ ಎಂದು ಭದ್ರತಾ ಮಂಡಳಿಯು ಪಟ್ಟಿ ಮಾಡಿದೆ. ಆದರೆ, ಇದನ್ನು ಪ್ರತ್ಯೇಕವಾಗಿ ಓದಿದಾಗ ಈ ಸಾಲು ವಾಸ್ತವಕ್ಕಿಂತ ವಿಭಿನ್ನವಾದ ಚಿತ್ರಣ ನೀಡುತ್ತದೆ. ಏಕೆಂದರೆ, ಈ ಸಂಸ್ಥೆ ಮತ್ತು ಅದು ಪಟ್ಟಿ ಮಾಡಲಾದ ನಾಯಕ ದಾವೂದ್ ಇಬ್ರಾಹಿಂ 1993 ರಿಂದ ಭಾರತದಲ್ಲಿ ಭಯೋತ್ಪಾದಕ ದಾಳಿಗಳಿಗಾಗಿ ವಾಟೆಂಡ್‌ ಲಿಸ್ಟ್‌ನಲ್ಲಿದ್ದಾರೆ. ಆದರೆ, ಈ ವಾಸ್ತವವನ್ನು ಉಲ್ಲೇಖಿಸದಿರುವುದು ವಿಷಾದನೀಯವಾಗಿದೆ ಮತ್ತು ವಿಶೇಷ ಜನಾದೇಶ ಹೊಂದಿರುವವರ ಇಂತಹ ಅಸಮರ್ಥತೆಯು ವಿಶ್ವ ಸಂಸ್ಥೆಗೆ ಅಪಾರ ಹಾನಿಯನ್ನುಂಟುಮಾಡುತ್ತದೆ” ಎಂದು ತಿಳಿಸಿದ್ದಾರೆ.

ಅಲ್ಲದೆ, ” ದಾವೂದ್ ಇಬ್ರಾಹಿಂ, 2003ರ ಪಟ್ಟಿಗೆ ಬಹಳ ಹಿಂದೆಯೇ ಭಾರತದಿಂದ ಪಲಾಯನ ಮಾಡಿದ್ದು, ಹೀಗೆ ಭಾರತದಿಂದ ಹೊರಗಿದ್ದ ಈ ಅವಧಿಯಲ್ಲೇ ಈತನನ್ನು ಅಲ್‌ಖೈದಾ ಹಾಗೂ ಒಸಾಮಾ ಬಿನ್ ಲಾಡೆನ್ ಜೊತೆಗಿನ ಸಂಪರ್ಕಕ್ಕಾಗಿ ಪಟ್ಟಿ ಮಾಡಲಾಗಿದೆ. ಅಲ್ಲದೆ, ಈವರೆಗೂ ಸಹ ಆತ ಭಾರತಕ್ಕೆ ವಾಂಟೆಂಟ್‌ ಕ್ರಿಮಿನಲ್‌ ಆಗಿದ್ದಾನೆ ಮತ್ತು ವಿಶ್ವಸಂಸ್ಥೆ ಯ ಪಟ್ಟಿಯ ನಮೂದಿನ ಪ್ರಕಾರ, ಒಸಾಮಾ ಬಿನ್ ಲಾಡೆನ್ ಪತ್ತೆಯಾದ ಮತ್ತು ತಟಸ್ಥಗೊಳಿಸಲ್ಪಟ್ಟ ಅದೇ ದೇಶದಲ್ಲಿ(ಪಾಕಿಸ್ತಾನ) ಈತ ಸಹ ವಾಸಿಸುತ್ತಿದ್ದಾನೆ” ಎಂದು ವಿಶ್ವಸಂಸ್ಥೆ ವಾಸ್ತವವನ್ನು ನೋಡುವಂತೆ ಪಾಠ ಮಾಡಿದ್ದಾರೆ.

ಆದಾಗ್ಯೂ, ವರದಿಯ ವಿವಿಧ ಭಾಗಗಳಲ್ಲಿನ ಸ್ಪಷ್ಟ ಪಕ್ಷಪಾತವನ್ನು ನಾವು ಗಮನಿಸಿದ್ದೇವೆ ಮತ್ತು ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತದ ಅತ್ಯುನ್ನತ ಮಾನದಂಡಗಳನ್ನು ಕಾಪಾಡಿಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ. ಭಯೋತ್ಪಾದನೆಯ ಪ್ರಾಯೋಜಕರು ತಮ್ಮ ದುಷ್ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಮಾನವ ಹಕ್ಕುಗಳು ಮತ್ತು ಭಯೋತ್ಪಾದನಾ ನಿಗ್ರಹದ ಚೌಕಟ್ಟನ್ನು ಬಳಸುವುದು ಫ್ಯಾಷನ್ ಆಗಿ ಮಾರ್ಪಟ್ಟಿದೆ ಎಂದು ಕಾಣುತ್ತಿದೆ. ಮಾನವ ಹಕ್ಕುಗಳ ಚೌಕಟ್ಟು ಭಯೋತ್ಪಾದನೆಯ ಅಪರಾಧಿಗಳು, ಆಮೂಲಾಗ್ರೀಕರಣ ಮತ್ತು ಉಗ್ರವಾದವನ್ನು ಪ್ರಚಾರ ಮಾಡುವವರಿಗೆ ಆಶ್ರಯವಾಗಲು ಸಾಧ್ಯವಿಲ್ಲ. ಅಲ್ಲದೆ, ಭಯೋತ್ಪಾದನೆಯನ್ನು ಎಂದಿಗೂ ಸಮರ್ಥಿಸಲಾಗುವುದಿಲ್ಲ” ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular