alex Certify ಎಚ್ಚರ….! ಕಾಲು ನೋವಿನ ಹಿಂದಿರಬಹುದು ಈ ಖಾಯಿಲೆ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ….! ಕಾಲು ನೋವಿನ ಹಿಂದಿರಬಹುದು ಈ ಖಾಯಿಲೆ ಸೂಚನೆ

ವ್ಯಕ್ತಿಯೊಬ್ಬರಿಗೆ ಪ್ರತಿ ದಿನ ವಾಕಿಂಗ್ ಹೋದಾಗ್ಲೂ ಕಾಲಿನ ಸ್ನಾಯುಗಳೆಲ್ಲ ವಿಪರೀತ ನೋಯುತ್ತಿದ್ವು. ವೇಗವಾಗಿ ನಡೆದಷ್ಟು ನೋವು ಹೆಚ್ಚಾಗುತ್ತಿತ್ತು. ಮೊದಮೊದಲು ಇದನ್ನು ಅವರು ಗಂಭೀರವಾಗಿ ಪರಿಗಣಿಸಲೇ ಇಲ್ಲ.

ನಂತರ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡಾಗ ಆ ವ್ಯಕ್ತಿ ಬಾಹ್ಯ ಅಪಧಮನಿ ಖಾಯಿಲೆಯಿಂದ ಬಳಲುತ್ತಿರುವುದು ಬೆಳಕಿಗೆ ಬಂದಿತ್ತು. ಇದನ್ನು PAD ಅಂತಾ ಕರೆಯಲಾಗುತ್ತದೆ. ಊತವಿದ್ರೆ, ದುರ್ಬಲವಾಗಿದ್ದರೆ ಅಥವಾ ಬ್ಲಾಕ್ ಗಳಿದ್ರೆ ಕಾಲುಗಳಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಇದನ್ನು ಲೆಗ್ ಅಟ್ಯಾಕ್ ಅಂತಾ ಕರೆಯಲಾಗುತ್ತದೆ. ಕಾಲುಗಳಲ್ಲಿ ಊತ, ಉರಿ ಕೂಡ ಕಾಣಿಸಿಕೊಳ್ಳಬಹುದು. ಅಷ್ಟೇ ಇಲ್ಲ PADಯಿಂದ ಗ್ಯಾಂಗ್ರಿನ್ ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ. ಮಧುಮೇಹ, ಹೃದಯದ ತೊಂದರೆ, ಹೈಪರ್ ಟೆನ್ಷನ್ ಇದ್ದಲ್ಲಿ ಅಥವಾ ಅತಿಯಾಗಿ ಧೂಮಪಾನ ಮಾಡುವವರಿಗೆ ಈ ಸಮಸ್ಯೆ ಉಂಟಾಗುತ್ತದೆ.

ಇದರಿಂದ ಪಾರಾಗಲು ಪ್ರತಿವರ್ಷ ಕಾಲುಗಳ ಪಲ್ಸ್ ಪರೀಕ್ಷೆ ಮಾಡಿಸಿಕೊಳ್ಳಿ. ABI ಎಂಬ ಟೆಸ್ಟ್ ಗೂ ಒಳಗಾಗಿ. ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡರೆ ಈ ಖಾಯಿಲೆಯಿಂದ ಪಾರಾಗಬಹುದು. ನಡೆದಾಡುವಾಗ ಅಥವಾ ಓಡುವಾಗ ಪಾದ, ತೊಡೆ ಮತ್ತು ಪೃಷ್ಠದ ಭಾಗದಲ್ಲಿ ಈ ರೀತಿ ನೋವು ಕಾಣಿಸಿಕೊಂಡಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...