ಹಿಂದೂ ಧರ್ಮದಲ್ಲಿ ಹಣೆಗೆ ತಿಲಕವಿಟ್ಟುಕೊಳ್ಳುವ ಸಂಪ್ರದಾಯವಿದೆ. ಯಾವುದೇ ಶುಭ ಕಾರ್ಯ, ಪೂಜೆ ವೇಳೆ ತಿಲಕವಿಟ್ಟುಕೊಳ್ಳುತ್ತಾರೆ. ದೇವಸ್ಥಾನಕ್ಕೆ ಹೋದ ಭಕ್ತರು ತಿಲಕವಿಟ್ಟುಕೊಳ್ಳುವ ಪದ್ಧತಿಯಿದೆ. ಈ ಪದ್ಧತಿ ಹಿಂದೆ ಧಾರ್ಮಿಕ ಭಾವನೆ ಜೊತೆಗೆ ವೈಜ್ಞಾನಿಕ ಕಾರಣವೂ ಇದೆ.
ಹಣೆಗೆ ತಿಲಕವನ್ನಿಟ್ಟುಕೊಳ್ಳುವುದ್ರಿಂದ ಪಿಟ್ಯೂಟರಿ ಗ್ರಂಥಿ ಸಕ್ರಿಯವಾಗುತ್ತದೆ. ಇದ್ರಿಂದ ಶರೀರದ ಆಲಸ್ಯ ದೂರವಾಗುತ್ತದೆ. ಮೆದುಳಿನ ಶಕ್ತಿ ಹೆಚ್ಚಾಗುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.
ಹಣೆಗೆ ತಿಲಕವನ್ನಿಟ್ಟುಕೊಳ್ಳುವುದ್ರಿಂದ ನರಮಂಡಲದ ಕೆನ್ನೇರಳೆ ಸಕ್ರಿಯವಾಗುತ್ತದೆ. ಇದ್ರಿಂದ ನಿದ್ರಾಹೀನತೆ ಹಾಗೂ ಸೈನಸ್ ನಂತಹ ಸಮಸ್ಯೆ ಕಡಿಮೆಯಾಗುತ್ತದೆ.
ಹಣೆ ಮೇಲೆ ಅರಿಶಿನದ ತಿಲಕವನ್ನಿಟ್ಟುಕೊಳ್ಳುವುದ್ರಿಂದ ಚರ್ಮ ಶುದ್ಧವಾಗುತ್ತದೆ. ಅರಿಶಿನದಲ್ಲಿ ಎಂಟಿ ಬ್ಯಾಕ್ಟೀರಿಯಾ ಇರುವುದ್ರಿಂದ ಇದು ರೋಗಗಳನ್ನು ತಡೆಯುತ್ತದೆ.
ಯೋಗಿಗಳು ಧ್ಯಾನ ಪ್ರಾರಂಭಿಸುವ ಮೊದಲು ಹಣೆಗೆ ತಿಲಕವಿಡುತ್ತಾರೆ. ಇದು ಮೆದುಳಿನಲ್ಲಿ ಶಾಂತಿ ಹಾಗೂ ಮಾನಸಿಕ ಸಾಂದ್ರತೆಯನ್ನು ಹೆಚ್ಚಿಸುತ್ತದೆ.
ಹಣೆಗೆ ತಿಲಕವಿಡುವುದ್ರಿಂದ ಗ್ರಹ ದೋಷ ಕಡಿಮೆಯಾಗುತ್ತದೆ. ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003