HomeEntertainmentಶರ್ಟ್‌ಲೆಸ್ ಆಗಿ ಟ್ರೋಲರ್‌ಗಳಿಗೆ ಸಲ್ಮಾನ್ ಖಾನ್ ಕೌಂಟರ್: 'ಬಾಡಿ ಶೇಮಿಂಗ್' ವಿಷಯದಲ್ಲಿ ನಟನ ವಿರುದ್ಧ ಸೋಫಿಯಾ...

ಶರ್ಟ್‌ಲೆಸ್ ಆಗಿ ಟ್ರೋಲರ್‌ಗಳಿಗೆ ಸಲ್ಮಾನ್ ಖಾನ್ ಕೌಂಟರ್: ‘ಬಾಡಿ ಶೇಮಿಂಗ್’ ವಿಷಯದಲ್ಲಿ ನಟನ ವಿರುದ್ಧ ಸೋಫಿಯಾ ಹಯಾತ್ ಗರಂ!

ಬ್ರ್ಯಾಂಡ್ ಶೋ ‘ಬಿಗ್ ಬಾಸ್’ ಸೀಸನ್ 7ರ ಸ್ಪರ್ಧಿ ಸೋಫಿಯಾ ಹಯಾತ್, ಬಾಲಿವುಡ್ ನಟ ಹಾಗೂ ಕಾರ್ಯಕ್ರಮದ ನಿರೂಪಕ ಸಲ್ಮಾನ್ ಖಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚಿನ ‘ವೀಕೆಂಡ್ ಕಾ ವಾರ್’ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಶರ್ಟ್‌ಲೆಸ್ ಆಗಿ ಕಾಣಿಸಿಕೊಂಡ ಬೆನ್ನಲ್ಲೇ ಸೋಫಿಯಾ ಈ ಪ್ರತಿಕ್ರಿಯೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಯಸ್ಸು, ಕೇಶವಿನ್ಯಾಸ ಮತ್ತು ತೂಕದ ಕುರಿತು ಟ್ರೋಲ್ ಮಾಡುತ್ತಿದ್ದವರಿಗೆ ತಿರುಗೇಟು ನೀಡಲು ಸಲ್ಮಾನ್ ಖಾನ್ ವೇದಿಕೆಯಲ್ಲೇ ತಮ್ಮ ಶರ್ಟ್ ತೆಗೆದು ಆಕ್ರೋಶ ಹೊರಹಾಕಿದ್ದರು. ಸಲ್ಮಾನ್ ಅವರ ಈ ನಡೆಯನ್ನು ಅನೇಕ ಅಭಿಮಾನಿಗಳು ಮೆಚ್ಚಿಕೊಂಡಿದ್ದರೆ, ಸೋಫಿಯಾ ಹಯಾತ್ ಮಾತ್ರ ಸಲ್ಮಾನ್ ಅವರ ನಡೆ ‘ಪಾಖಂಡಿ’ (Hypocritical) ಎಂದು ಟೀಕಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿರುವ ಸೋಫಿಯಾ, “ನಾನು ಬಿಗ್ ಬಾಸ್ ಮನೆಯಲ್ಲಿದ್ದಾಗ ಸಲ್ಮಾನ್ ಖಾನ್ ನನ್ನ ದೇಹ ಮತ್ತು ಮುಖವನ್ನು ಟೀಕಿಸಿದ್ದರು. ಆದರೆ ಗೌಹರ್ ಖಾನ್ ಅವರ ದೇಹದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ತಾವೇ ಬಾಡಿ ಶೇಮಿಂಗ್ ವಿರುದ್ಧ ಮಾತನಾಡುತ್ತಿರುವುದು ನಗೆಪಾಟಲು” ಎಂದು ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ಸಂಚಿಕೆಯಲ್ಲಿ ಸಲ್ಮಾನ್ ಖಾನ್ ಅವರು ಗರ್ಭಿಣಿಯರು ಮತ್ತು ತಾಯಂದಿರ ಮೇಲಾಗುವ ಬಾಡಿ ಶೇಮಿಂಗ್ ಹಾಗೂ ಟ್ರೋಲ್‌ಗಳ ವಿರುದ್ಧವೂ ಧ್ವನಿ ಎತ್ತಿದ್ದರು. ಇತ್ತೀಚೆಗೆ ನಟಿ ಕತ್ರಿನಾ ಕೈಫ್ ಅವರ ಶರೀರದ ಬದಲಾವಣೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದ್ದ ಟೀಕೆಗಳಿಗೆ ಸಲ್ಮಾನ್ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಗರ್ಭಿಣಿಯಾದಾಗ ತೂಕ ಹೆಚ್ಚಾಗುವುದು ಸಹಜ, ಅವರಿಗೆ ಕುಟುಂಬದೊಂದಿಗೆ ಕಳೆಯಲು ಸಮಯ ನೀಡಬೇಕು. ಚಿತ್ರರಂಗಕ್ಕೆ ಮರಳುವಾಗ ಅವರು ಮತ್ತೆ ಫಿಟ್ ಆಗುತ್ತಾರೆ ಎಂದು ಸಲ್ಮಾನ್ ಹೇಳಿದ್ದರು.

ಆದರೆ, ಒಂದೆಡೆ ಬಾಡಿ ಶೇಮಿಂಗ್ ವಿರುದ್ಧ ಮಾತನಾಡುವ ಸಲ್ಮಾನ್, ಹಿಂದೆ ತಮ್ಮೊಂದಿಗಿನ ನಡವಳಿಕೆಯಲ್ಲಿ ವ್ಯತ್ಯಾಸ ತೋರಿದ್ದರು ಎಂಬುದು ಸೋಫಿಯಾ ಹಯಾತ್ ಅವರ ಆರೋಪವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular