HomeKarnatakaರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ರಾಜ್ಯದ ಈ ಆರು ಮಾರ್ಗಗಳ ರೈಲುಗಳು ಈಗ ಇನ್ನಷ್ಟು...

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ರಾಜ್ಯದ ಈ ಆರು ಮಾರ್ಗಗಳ ರೈಲುಗಳು ಈಗ ಇನ್ನಷ್ಟು ಸುರಕ್ಷಿತ ಹಾಗೂ ಆರಾಮದಾಯಕ

ಬೆಂಗಳೂರು: ಕರ್ನಾಟಕದ ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್. ಆರು ಮಾರ್ಗಗಳ ರೈಲು ಸಂಚಾಅರ ಇದೀಗ ಇನ್ನಷ್ಟು ಸುರಕ್ಷಿತ, ಆರಾಮದಾಯಕವಾಗ್ದೆ. ನೈಋತ್ಯ ರೈಲ್ವೆಯು ಅಕ್ಟೋಬರ್ 20 ರಿಂದ 6 ಪ್ರಮುಖ ರೈಲುಗಳಿಗೆ ಅತ್ಯಾಧುನಿಕ ಲಿಂಕೆ ಹಾಫ್‌ಮನ್ ಬುಷ್ (LHB) ಬೋಗಿಗಳನ್ನು ಅಳವಡಿಸುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದು ರೈಲು ಪ್ರಯಾಣಿಕರ ಭದ್ರತೆ, ಸುರಕ್ಷತೆ ಮತ್ತು ಸುಖಕರ ಪ್ರಯಾಣವನ್ನು ಹೆಚ್ಚಿಸುವ ಗುರಿ ಹೊಂದಿದೆ. ಸಾಂಪ್ರದಾಯಿಕ ICF ಬೋಗಿಗಳ ಬದಲಿಗೆ ಈ ಜರ್ಮನ್ ತಂತ್ರಜ್ಞಾನದ LHB ಬೋಗಿಗಳು ಹೆಚ್ಚಿನ ಆರಾಮ ಮತ್ತು ಉತ್ತಮ ಅನುಭವ ನೀಡಲಿವೆ.

LHB ಬೋಗಿಗಳು ಅಳವಡಿಕೆಯಾಗುವ ರೈಲುಗಳು ಹಾಗೂ ಅಳವಡಿಕೆಯಾಗುವ ದಿನಾಂಕ ಈ ಕೆಳಗಿನಂತಿದೆ.

ಮೈಸೂರು – ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್ (ರೈಲು ಸಂ: 16227/16228):

ಮೈಸೂರಿನಿಂದ: ಅಕ್ಟೋಬರ್ 20, 2026 ರಿಂದ

ತಾಳಗುಪ್ಪದಿಂದ: ಅಕ್ಟೋಬರ್ 21, 2026 ರಿಂದ

ತಾಳಗುಪ್ಪ – ಶಿವಮೊಗ್ಗ ಟೌನ್ – ತಾಳಗುಪ್ಪ (ರೈಲು ಸಂ: 56217/56218):

ತಾಳಗುಪ್ಪದಿಂದ: ಅಕ್ಟೋಬರ್ 21, 2026 ರಿಂದ

ಶಿವಮೊಗ್ಗದಿಂದ: ಅಕ್ಟೋಬರ್ 21, 2026 ರಿಂದ

ನಂಜನಗೂಡು ಟೌನ್ – ಮೈಸೂರು – ನಂಜನಗೂಡು ಟೌನ್ (ರೈಲು ಸಂ: 56205/56206):

ನಂಜನಗೂಡಿನಿಂದ: ಅಕ್ಟೋಬರ್ 22, 2026 ರಿಂದ

ಮೈಸೂರಿನಿಂದ: ಅಕ್ಟೋಬರ್ 22, 2026 ರಿಂದ

ಚಾಮರಾಜನಗರ – ಮೈಸೂರು – ಚಾಮರಾಜನಗರ (ರೈಲು ಸಂ: 56203/56204):

ಮೈಸೂರಿನಿಂದ: ಅಕ್ಟೋಬರ್ 22, 2026 ರಿಂದ

ಚಾಮರಾಜನಗರದಿಂದ: ಅಕ್ಟೋಬರ್ 24, 2026 ರಿಂದ

ಚಾಮರಾಜನಗರ – ತಿರುಪತಿ – ಚಾಮರಾಜನಗರ (ರೈಲು ಸಂ: 16219/16220):

ಚಾಮರಾಜನಗರದಿಂದ: ಅಕ್ಟೋಬರ್ 22, 2026 ರಿಂದ

ತಿರುಪತಿಯಿಂದ: ಅಕ್ಟೋಬರ್ 23, 2026 ರಿಂದ

ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ – ತಿರುಪತಿ – ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ (ರೈಲು ಸಂ: 16203/16204):

ತಿರುಪತಿಯಿಂದ: ಅಕ್ಟೋಬರ್ 23, 2026 ರಿಂದ

ಚೆನ್ನೈ ಸೆಂಟ್ರಲ್‌ನಿಂದ: ಅಕ್ಟೋಬರ್ 23, 2026 ರಿಂದ

ಹಳೆಯ ವ್ಯವಸ್ಥೆ (21 ಬೋಗಿಗಳು): 1 ಎಸಿ ಫಸ್ಟ್ ಕ್ಲಾಸ್, 1 ಎಸಿ 2-ಟೈರ್, 2 ಎಸಿ 3-ಟೈರ್, 10 ಸ್ಲೀಪರ್, 5 ಜನರಲ್ ಹಾಗೂ 2 ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಬೋಗಿಗಳು. ನೂತನ ಎಲ್‌ಎಚ್‌ಬಿ ವ್ಯವಸ್ಥೆ (19 ಬೋಗಿಗಳು) ಮಾಡಲಾಗಿದೆ. 1 ಎಸಿ ಫಸ್ಟ್ ಕ್ಲಾಸ್, 1 ಎಸಿ 2-ಟೈರ್, 3 ಎಸಿ 3-ಟೈರ್, 7 ಸ್ಲೀಪರ್, 5 ಜನರಲ್, 1 ದಿವ್ಯಾಂಗ ಸ್ನೇಹಿ ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಬೋಗಿ ಹಾಗೂ 1 ಜನರೇಟರ್ ಕಾರ್ ಬೋಗಿ ಇರಲಿದೆ. ಇನ್ನು ಇಲಾಖೆ ಪ್ರಮುಖ ಸೂಚನೆಯನ್ನು ಕೂಡ ನೀಡಿ ರೈಲು ಸಂಖ್ಯೆ 56217/56218, 56205/56206 ಮತ್ತು 56203/56204 ರ ಎಸಿ ಬೋಗಿಗಳನ್ನು ಅಗತ್ಯವಿದ್ದರೆ ಲಾಕ್ ಮಾಡಿದ ಸ್ಥಿತಿಯಲ್ಲಿ ಕೊಂಡೊಯ್ಯಲಾಗುತ್ತದೆ ಎಂದು ನೈಋತ್ಯ ರೈಲ್ವೆ ಸ್ಪಷ್ಟಪಡಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular