HomeEntertainment'ಜೈಲರ್ 2' ಹಂಗಾಮ ಶುರು: ಅಭಿಮಾನಿಗಳಿಗೆ ಸಾಲು ಸಾಲು ಬಿಗ್ ಅಪ್ಡೇಟ್ ನೀಡಲು ಸಜ್ಜಾದ ಸೂಪರ್‌ಸ್ಟಾರ್!

‘ಜೈಲರ್ 2’ ಹಂಗಾಮ ಶುರು: ಅಭಿಮಾನಿಗಳಿಗೆ ಸಾಲು ಸಾಲು ಬಿಗ್ ಅಪ್ಡೇಟ್ ನೀಡಲು ಸಜ್ಜಾದ ಸೂಪರ್‌ಸ್ಟಾರ್!

ಚೆನ್ನೈ: ದಕ್ಷಿಣ ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲೊಂದಾದ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್ 2’ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಸೀಕ್ವೆಲ್ ಚಿತ್ರವು ಈ ದಸರಾ ಹಬ್ಬದ ಸಂಭ್ರಮದಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸೂಪರ್‌ಸ್ಟಾರ್ ಅಭಿಮಾನಿಗಳಿಗೆ ಬೃಹತ್ ಸರ್ಪ್ರೈಸ್ ಒಂದನ್ನು ನೀಡಲು ಮುಂದಾಗಿದೆ.

ನಿರ್ಮಾಣ ಸಂಸ್ಥೆಯು ಅಧಿಕೃತವಾಗಿ ತಿಳಿಸಿರುವಂತೆ, ಸೆಪ್ಟೆಂಬರ್ 18ರಿಂದ ಸರಣಿ ರೂಪದಲ್ಲಿ ಸಿನಿಮಾದ ಪ್ರಮುಖ ಅಪ್ಡೇಟ್‌ಗಳು ಹೊರಬೀಳಲಿವೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಆಕ್ಷನ್ ಎಂಟರ್ಟೈನರ್ ಸಿನಿಮಾ, ಅಕ್ಟೋಬರ್ 15ರಂದು ಜಾಗತಿಕ ಮಟ್ಟದಲ್ಲಿ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ಸಿನಿಮಾ ಮೇಲಿರುವ ವಿಪರೀತ ಕ್ರೇಜ್‌ನಿಂದಾಗಿ ಇದರ ಥಿಯೇಟ್ರಿಕಲ್ ಹಕ್ಕುಗಳಿಗೆ ಭಾರೀ ಬೇಡಿಕೆ ಮತ್ತು ಬೆಲೆ ವ್ಯಕ್ತವಾಗಿದೆ. ಸಾಲು ಸಾಲು ಅಪ್ಡೇಟ್‌ಗಳು ಹೊರಬರಲಿರುವುದರಿಂದ ರಜನಿಕಾಂತ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular