HomeKarnatakaಆಸ್ತಿ ಖರೀದಿ, ಮಾರಾಟಗಾರರಿಗೆ ಗುಡ್ ನ್ಯೂಸ್: ಭೌತಿಕ ಉಪಸ್ಥಿತಿ ಇಲ್ಲದೆಯೂ ನೋಂದಣಿ ಮಸೂದೆಗೆ ಅಂಗೀಕಾರ

ಆಸ್ತಿ ಖರೀದಿ, ಮಾರಾಟಗಾರರಿಗೆ ಗುಡ್ ನ್ಯೂಸ್: ಭೌತಿಕ ಉಪಸ್ಥಿತಿ ಇಲ್ಲದೆಯೂ ನೋಂದಣಿ ಮಸೂದೆಗೆ ಅಂಗೀಕಾರ

ಬೆಂಗಳೂರು: ಆಸ್ತಿ ನೋಂದಣಿಯ ವೇಳೆ ಇನ್ನೂ ಸ್ಥಳದಲ್ಲಿ ಇರಲೇಬೇಕೆಂದೇನಿಲ್ಲ. ಭೌತಿಕ ಉಪಸ್ಥಿತಿ ಇಲ್ಲದೆಯೂ ನೋಂದಣಿಗೆ ಅಸ್ತು ಎನ್ನಲಾಗಿದ್ದು, ಈ ನೋಂದಣಿ ಬಿಲ್ ಗೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಅಂಗೀಕಾರ ದೊರೆತಿದೆ.

ರಾಜ್ಯಾದ್ಯಂತ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ವ್ಯಕ್ತಿಯ ಭೌತಿಕ ಉಪಸ್ಥಿತಿ ಇಲ್ಲದೆ ಇ- ನೋಂದಣಿ ಮೂಲಕ ದಸ್ತಾವೇಜುಗಳ ನೋಂದಣಿಗೆ ಅವಕಾಶ ಕಲ್ಪಿಸುವ ರಾಜ್ಯ ಸರ್ಕಾರದ ನೋಂದಣಿ ಕರ್ನಾಟಕ (ತಿದ್ದುಪಡಿ) ಮಸೂದೆಗೆ ಉಭಯ ಸದನಗಳಲ್ಲಿ ಸೋಮವಾರ ಚರ್ಚೆಯೇ ಇಲ್ಲದೆ ಅಂಗೀಕಾರ ನೀಡಲಾಗಿದೆ.

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ವಿಧಾನಸಭೆಯಲ್ಲಿ ವಿಧೇಯಕವನ್ನು ಪರ್ಯಾಯಲೋಚನೆಗೆ ಮಂಡಿಸಿ ನೋಂದಣಿ ಪ್ರಕ್ರಿಯೆ ಸರಳಗೊಳಿಸುವ ಉದ್ದೇಶದೊಂದಿಗೆ ಈ ಮಸೂದೆ ಸಿದ್ಧಪಡಿಸಲಾಗಿದೆ. ಆಸ್ತಿ ನೋಂದಣಿ ಸಮಯದಲ್ಲಿ ಉಪ ನೋಂದಣಾಧಿಕಾರಿಗಳು ಸೂಕ್ತ ಪರಿಶೀಲನೆ ಖಚಿತ ಪಡಿಸಿಕೊಳ್ಳಲು, ನಗರ ಪ್ರದೇಶಗಳಲ್ಲಿ ಅಕ್ರಮ ನೋಂದಣಿ ತಡೆ, ಆಸ್ತಿ ನೋಂದಣಿ ಸರಳೀಕರಣಕ್ಕೆ ಆಸ್ತಿ ತಂತ್ರಾಂಶ ಸಂಯೋಜಿಸುವ ಅಂಶ ಮಸೂದೆಯಲ್ಲಿ ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಖರೀದಿದಾರರು ಮತ್ತು ಮಾರಾಟಗಾರರ ಭೌತಿಕ ಉಪಸ್ಥಿತಿ ಇಲ್ಲದೆ ಕಡ್ಡಾಯವಾಗಿ ನೋಂದಾಯಿಸಬಹುದಾದ ಕೆಲವು ದಾಖಲೆಗಳ ಮೂಲಕ ಇ- ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಈ ಮೂಲಕ ಖರೀದಿದಾರ ಅಥವಾ ಮಾರಾಟಗಾರ ಉಪ ನೋಂದಣಿ ಕಚೇರಿಗೆ ಹೋಗಬೇಕಿಲ್ಲ. ತಾವಿರುವ ಸ್ಥಳದಿಂದಲೇ ಇ-ಖಾತಾ ಸಹಿತ ಸೂಕ್ತ ದಾಖಲೆಗಳೊಂದಿಗೆ ಆನ್ಲೈನ್ ಮೂಲಕ ದಾಖಲೆಗಳನ್ನು ಮಾಡಬಹುದಾಗಿದೆ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.

ಆನ್ಲೈನ್ ಮೂಲಕ ಸಲ್ಲಿಕೆಯ ವೇಳೆಯಲ್ಲಿ ದಾಖಲೆ ಎಂಡೋರ್ಸ್ಮೆಂಟ್ ಸಹಿ, ಮೊಹರು ಹಾಕುವ ವಿಧಾನ ನೋಂದಣಿ ಶುಲ್ಕ ಮತ್ತು ಇತರೆ ಶುಲ್ಕಗಳ ಪಾವತಿಯ ವಿಧಾನ ಹಾಗೂ ಇತರ ಪ್ರಕ್ರಿಯೆಗಳನ್ನು ವಿವರಿಸಲಾಗುವುದು ಎನ್ನಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular