ರಾಜಧಾನಿ ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ ಭಾರಿ ಪ್ರಮಾಣದ ಬದಲಾವಣೆ ಕಂಡುಬಂದಿದ್ದು, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸುಮಾರು ಶೇ. 48 ರಷ್ಟು ಮತದಾರರು ASDDO (ಅಬ್ಸೆಂಟ್, ಶಿಫ್ಟೆಡ್, ಡೆಡ್, ಡುಪ್ಲಿಕೇಟ್, ಅನ್ಸ್ಫೆಸಿಫೈಡ್) ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.
ನಗರದ 25 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಪ್ರಮುಖ ಕ್ಷೇತ್ರಗಳಲ್ಲಿ ಅರ್ಧಕ್ಕಿಂತ ಹೆಚ್ಚು (ಶೇ. 50 ಕ್ಕೂ ಅಧಿಕ) ಮತದಾರರು ಪಟ್ಟಿಯಿಂದ ಹೊರಗುಳಿಯುವ ಆತಂಕ ಎದುರಾಗಿದೆ.
ASDDO ಪಟ್ಟಿಗೆ ಸೇರಿದವರ ಅಂಕಿ-ಅಂಶ:
ಜಿಬಿಎ (GBA) ಮುಖ್ಯ ಆಯುಕ್ತ ಮಹೇಶ್ವರ ರಾವ್ ನೀಡಿರುವ ಮಾಹಿತಿಯಂತೆ, ಒಟ್ಟು 46.88 ಲಕ್ಷ ಮತದಾರರು ಈ ಪಟ್ಟಿಗೆ ಸೇರಿದಂತಾಗಿದೆ.
ಶಾಶ್ವತವಾಗಿ ಮನೆ ಖಾಲಿ ಮಾಡಿದವರು: 32.74 ಲಕ್ಷ
ಗೈರುಹಾಜರಾದವರು : 7.27 ಲಕ್ಷ
ಮೃತಪಟ್ಟ ಮತದಾರರು: 3.19 ಲಕ್ಷ
ನಕಲಿ ಮತದಾರರು: 63,000 ಕ್ಕೂ ಹೆಚ್ಚು
ಅತಿ ಹೆಚ್ಚು ಮತದಾರರು ಹೊರಗುಳಿದ ಪ್ರಮುಖ 5 ಕ್ಷೇತ್ರಗಳು:
ಬೆಂಗಳೂರು ದಕ್ಷಿಣ ಭಾಗದಲ್ಲಿ ಅತಿ ಹೆಚ್ಚು ಅಂದರೆ 11.07 ಲಕ್ಷ (ಶೇ. 51.65) ಮತದಾರರು ಈ ಪಟ್ಟಿಯಲ್ಲಿದ್ದಾರೆ. ಕ್ಷೇತ್ರವಾರು ಶೇಕಡಾವಾರು ಮಾಹಿತಿ ಇಲ್ಲಿದೆ:
ಬೊಮ್ಮನಹಳ್ಳಿ: 55.06% (2,67,014 ಮತದಾರರು)
ದಾಸರಹಳ್ಳಿ: 52.88% (2,46,790 ಮತದಾರರು)
ಬಿಟಿಎಂ ಲೇಔಟ್: 51.86% (1,46,273 ಮತದಾರರು)
ವಿಜಯನಗರ: 51.45% (1,65,058 ಮತದಾರರು)
ಸಿ.ವಿ.ರಾಮನ್ ನಗರ: 51.36% (1,40,801 ಮತದಾರರು)
ಹೆಚ್ಚಿನ ಮತದಾರರಿಗೆ ನೋಟಿಸ್:
ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ ಬೆಂಗಳೂರು ನಗರದಲ್ಲೇ ಲಕ್ಷಾಂತರ ಮತದಾರರಿಗೆ ಇಲಾಖೆಯಿಂದ ನೋಟಿಸ್ ಜಾರಿಯಾಗುತ್ತಿದೆ. ನಿಮ್ಮ ಹೆಸರು ಅಥವಾ ಮತದಾರರ ಪಟ್ಟಿಯ ವಿವರಗಳನ್ನು ಪರಿಶೀಲಿಸಲು ಮತ್ತು ಅಧಿಕೃತ ತಿದ್ದುಪಡಿಗಳಿಗೆ ಭಾರತೀಯ ಚುನಾವಣಾ ಆಯೋಗದ National Voters’ Services Portal ಅಥವಾ Chief Electoral Officer, Karnataka ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಬಹುದು.

