HomeKarnatakaಬೆಳಗಾವಿಯಲ್ಲಿ ಮಾಂಜಾ ದಾರಕ್ಕೆ ಬೈಕ್ ಸವಾರ ಬಲಿ: ಗಾಳಿಪಟದ ಹರಿತವಾದ ದಾರ ಕುತ್ತಿಗೆಗೆ ಸಿಲುಕಿ 19...

ಬೆಳಗಾವಿಯಲ್ಲಿ ಮಾಂಜಾ ದಾರಕ್ಕೆ ಬೈಕ್ ಸವಾರ ಬಲಿ: ಗಾಳಿಪಟದ ಹರಿತವಾದ ದಾರ ಕುತ್ತಿಗೆಗೆ ಸಿಲುಕಿ 19 ವರ್ಷದ ಯುವಕ ಸಾವು

ಬೆಳಗಾವಿ: ಗಾಳಿಪಟ ಹಾರಿಸಲು ಬಳಸುವ ಹರಿತವಾದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ಬೈಕ್ ಸವಾರನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಬೆಳಗಾವಿ ನಗರದ ಗಾಂಧಿನಗರದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಮೃತ ಯುವಕನನ್ನು ಮಹಾಂತೇಶನಗರದ ಧ್ರುವ ಸಂತೋಷ ಕರ್ಜಗಿ (19) ಎಂದು ಗುರುತಿಸಲಾಗಿದೆ. ಧ್ರುವ ಅವರು ಬೈಕ್‌ ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಗಾಳಿಪಟದ ಮಾಂಜಾ ದಾರ ಅವರ ಕುತ್ತಿಗೆಗೆ ಸಿಲುಕಿಕೊಂಡಿದೆ. ದಾರ ಕುತ್ತಿಗೆಗೆ ಬಿಗಿಯಾಗಿ ಸಿಲುಕಿದ್ದರಿಂದ ಗಂಭೀರ ಗಾಯ ಹಾಗೂ ತೀವ್ರ ರಕ್ತಸ್ರಾವ ಸಂಭವಿಸಿದ್ದು, ಯುವಕ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ಘಟನೆ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಗಾಂಧಿನಗರ ಪ್ರದೇಶವು ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವುದರಿಂದ ಅಲ್ಲಿನ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಾಳಿಪಟದ ಮಾಂಜಾ ದಾರದಿಂದ ಸಾರ್ವಜನಿಕರ ಜೀವಕ್ಕೆ ಅಪಾಯ ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಇಂತಹ ಅಪಾಯಕಾರಿ ದಾರದ ಮಾರಾಟ ಮತ್ತು ಬಳಕೆಯನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

ಪರೀಕ್ಷೆ ಮುಗಿಸಿ ಮನೆಗೆ ತೆರಳುತ್ತಿದ್ದಾಗ ದುರಂತ

ಕುತ್ತಿಗೆಗೆ ಹರಿತವಾದ ಗಾಳಿಪಟದ ದಾರ ಸಿಲುಕಿದ ಪರಿಣಾಮ ತೀವ್ರ ರಕ್ತಸ್ರಾವದಿಂದ 19 ವರ್ಷದ ಧ್ರುವ ಸಂತೋಷ ಕರಜಗಿ ಸಾವು ಕಂಡಿದ್ದಾರೆ.

ಬೆಳಗಾವಿ ನಗರದ ಗಾಂಧೀನಗರದ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಬಳಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಯುವಕನ ಕುತ್ತಿಗೆಗೆ ಮಾಂಜಾ ದಾರ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾರೆ. ಧ್ರುವ ಅವರು ನಗರದ ಖಾಸಗಿ ಕಾಲೇಜಿನಲ್ಲಿ ಐಟಿಐ ವ್ಯಾಸಂಗ ಮಾಡುತ್ತಿದ್ದರು. ಗುರುವಾರ ಪರೀಕ್ಷೆ ಬರೆಯಲು ಸಂಬಂಧಿಕರ ಬೈಕ್ ಪಡೆದುಕೊಂಡು ಕಾಲೇಜಿಗೆ ತೆರಳಿದ್ದರು. ಪರೀಕ್ಷೆ ಮುಗಿಸಿಕೊಂಡು ಬೈಕ್‌ ನಲ್ಲಿ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಗಾಂಧೀನಗರದ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಬಳಿ ಈ ದುರ್ಘಟನೆ ಸಂಭವಿಸಿದೆ.

ಕುತ್ತಿಗೆಗೆ ಬಿಗಿಯಾಗಿ ಸಿಲುಕಿದ ಮಾಂಜಾ

ಧ್ರುವ ಬೈಕ್‌ನಲ್ಲಿ ತೆರಳುತ್ತಿದ್ದಾಗ ಏಕಾಏಕಿ ಗಾಳಿಪಟದ ಮಾಂಜಾ ದಾರ ಅವರ ಕುತ್ತಿಗೆಗೆ ಸಿಲುಕಿದೆ. ಹರಿತವಾದ ದಾರ ಕುತ್ತಿಗೆಗೆ ಬಿಗಿಯಾಗಿ ಸಿಲುಕಿದ ಪರಿಣಾಮ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವ ಸಂಭವಿಸಿದೆ. ದಾರವು ಕುತ್ತಿಗೆಗೆ ಸಿಲುಕಿದ ಬಳಿಕ ವಾಹನದ ನಿಯಂತ್ರಣ ತಪ್ಪಿ ಅವರು ಕೆಳಗೆ ಬಿದ್ದಿದ್ದಾರೆ.

ತನಿಖೆ ಆರಂಭ

ಘಟನೆ ಕುರಿತು ಬೆಳಗಾವಿ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗಾಂಧೀನಗರದ ರಾಷ್ಟ್ರೀಯ ಹೆದ್ದಾರಿ ಪ್ರದೇಶ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ತನಿಖೆಯ ಮುಂದಿನ ಕ್ರಮವನ್ನು ಅಲ್ಲಿನ ಪೊಲೀಸರು ಕೈಗೊಂಡಿದ್ದಾರೆನ್ನಲಾಗಿದೆ.

ಮಾಂಜಾ ಮಾರಾಟದ ವಿರುದ್ಧ ಕ್ರಮಕ್ಕೆ ಆಗ್ರಹ

ಈ ಘಟನೆ ಬೆನ್ನಲ್ಲೇ ಅಪಾಯಕಾರಿ ಮಾಂಜಾ ದಾರದ ಮಾರಾಟ ಮತ್ತು ಬಳಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ. ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಪ್ರೀತಿ ಕಾಮಕರ್ ಅವರು ಮಾಂಜಾ ದಾರ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅಂಗಡಿಗಳಲ್ಲಿ ತಪಾಸಣೆ ನಡೆಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸುವುದಾಗಿಯೂ ಹೇಳಿದ್ದಾರೆ.

ಗಾಳಿಪಟದ ಸಂಭ್ರಮಕ್ಕೆ ಬಳಸುವ ಮಾಂಜಾ ದಾರ ಮನುಷ್ಯರು, ದ್ವಿಚಕ್ರ ವಾಹನ ಸವಾರರು ಹಾಗೂ ಪಕ್ಷಿಗಳಿಗೆ ಮಾರಕವಾಗುವ ಸಾಧ್ಯತೆ ಹೊಂದಿರುವುದರಿಂದ, ಅದರ ಮಾರಾಟ ಮತ್ತು ಬಳಕೆಯ ಮೇಲಿನ ನಿಯಂತ್ರಣವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ತೋರಿಸಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular