HomeIndiaಕಿಕ್ಕಿರಿದ ರೈಲಿನಲ್ಲಿ ಅಪಾಯಕಾರಿ ಪ್ರಯಾಣ: ಬಾಗಿಲಲ್ಲಿ ನೇತಾಡಿದ ಮಹಿಳೆಯರ ವಿಡಿಯೋ ವೈರಲ್

ಕಿಕ್ಕಿರಿದ ರೈಲಿನಲ್ಲಿ ಅಪಾಯಕಾರಿ ಪ್ರಯಾಣ: ಬಾಗಿಲಲ್ಲಿ ನೇತಾಡಿದ ಮಹಿಳೆಯರ ವಿಡಿಯೋ ವೈರಲ್

ಮುಂಬೈನ ಸಬರ್ಬನ್ ಲೋಕಲ್ ರೈಲೊಂದರಲ್ಲಿ ಮಹಿಳೆಯರು ಅತ್ಯಂತ ಅಪಾಯಕಾರಿಯಾಗಿ ಪ್ರಯಾಣಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕ ಸಾರಿಗೆಯ ಸುರಕ್ಷತೆ ಕುರಿತು ದೊಡ್ಡ ಮಟ್ಟದ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಕಿಕ್ಕಿರಿದು ತುಂಬಿದ್ದ ರೈಲಿನ ಬಾಗಿಲಲ್ಲಿ ಮಹಿಳಾ ಪ್ರಯಾಣಿಕರು ಹೊರಭಾಗಕ್ಕೆ ನೇತಾಡಿಕೊಂಡು, ಬಾಗಿಲ ಕಂಬಗಳನ್ನು ಹಿಡಿದು ಸಾಹಸವೆಂಬಂತೆ ಪ್ರಯಾಣಿಸುತ್ತಿರುವ ದೃಶ್ಯ ಈ ವಿಡಿಯೊದಲ್ಲಿದೆ. ಸ್ವಲ್ಪ ಕೈ ಜಾರಿದರೂ ಪ್ರಾಣಕ್ಕೇ ಸಂಚಕಾರ ಬರುವಂತಿದ್ದ ಈ ದೃಶ್ಯ ನೆಟ್ಟಿಗರ ಆತಂಕಕ್ಕೆ ಕಾರಣವಾಗಿದೆ.

https://x.com/pallvika_/status/2091461690978410910

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾರಿ ಶಕ್ತಿ ಶೀರ್ಷಿಕೆಗೆ ಖಂಡನೆ:

ಪಲ್ಲವಿಕಾ ಎಂಬುವವರು ಈ ವಿಡಿಯೊವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡು ನಾರಿ ಶಕ್ತಿ ಎಂದು ಶೀರ್ಷಿಕೆ ನೀಡಿದ್ದರು. ಆದರೆ, ಜಾಲತಾಣಗಳಲ್ಲಿ ಈ ವೈಭವೀಕರಣಕ್ಕೆ ಭಾರಿ ಟೀಕೆ ವ್ಯಕ್ತವಾಗಿದೆ. ಇದು ನಾರಿಯರ ಶಕ್ತಿಯಲ್ಲ, ಸಾರ್ವಜನಿಕ ಸಾರಿಗೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ಅಸಹಾಯಕತೆ” ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.

ಇಂತಹ ಅಪಾಯಕಾರಿ ಪ್ರಯಾಣವನ್ನು ಧೈರ್ಯ ಅಥವಾ ‘ಸಾಹಸ ಎಂದು ಕರೆದು ವೈಭವೀಕರಿಸುವುದು ತಪ್ಪು ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ:

ವಿಡಿಯೊ ನೋಡಿದ ಬಳಕೆದಾರರೊಬ್ಬರು, ಇದು ಧೈರ್ಯವೋ ಅಥವಾ ಮೂರ್ಖತನವೋ ಗೊತ್ತಿಲ್ಲ ಆದರೆ ಜೀವದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ. ಇನ್ನೊಂದು ರೈಲು ಖಂಡಿತ ಸಿಗುತ್ತದೆ, ಆದರೆ ಕಳೆದುಕೊಂಡ ಜೀವ ಮತ್ತೆ ಸಿಗುವುದಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ದೈನಂದಿನ ಪ್ರಯಾಣಕ್ಕಾಗಿ ಲೋಕಲ್ ರೈಲುಗಳನ್ನೇ ನೆಚ್ಚಿಕೊಂಡಿರುವ ಮುಂಬೈ ನಿವಾಸಿಗಳು ಪ್ರತಿದಿನ ಎದುರಿಸುತ್ತಿರುವ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಸವಾಲುಗಳಿಗೆ ಈ ವಿಡಿಯೊ ಮತ್ತೊಮ್ಮೆ ಕನ್ನಡಿ ಹಿಡಿದಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular