HomeKarnatakaBIG NEWS : ಶತಕದ ಸನಿಹ ತಲುಪಿದ ಈರುಳ್ಳಿ ದರ; ಕೆಜಿಗೆ ₹60ರಿಂದ ₹75ಕ್ಕೆ ಏರಿಕೆ!

BIG NEWS : ಶತಕದ ಸನಿಹ ತಲುಪಿದ ಈರುಳ್ಳಿ ದರ; ಕೆಜಿಗೆ ₹60ರಿಂದ ₹75ಕ್ಕೆ ಏರಿಕೆ!

ದಿನನಿತ್ಯದ ಅಡುಗೆಯಲ್ಲಿ ಪ್ರಮುಖವಾಗಿ ಬಳಸುವ ಈರುಳ್ಳಿ ಬೆಲೆ ಇದೀಗ ಗ್ರಾಹಕರಿಗೆ ಶಾಕ್ ನೀಡುತ್ತಿದೆ. ಕರ್ನಾಟಕದಲ್ಲಿ ಈರುಳ್ಳಿ ದರ ದಿಢೀರ್ ಏರಿಕೆಯಾಗಿದ್ದು, ಸದ್ಯ ಕೆಜಿಗೆ ₹60ರಿಂದ ₹75ರ ವರೆಗೆ ಮಾರಾಟವಾಗುತ್ತಿದೆ. ಗುಣಮಟ್ಟದ ಈರುಳ್ಳಿ ಕೆಲವು ಮಳಿಗೆಗಳಲ್ಲಿ ₹70-75ರ ದರ ತಲುಪಿದೆ.

ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಈ ಬಾರಿ ಈರುಳ್ಳಿ ಇಳುವರಿ ಗಣನೀಯವಾಗಿ ಕುಸಿದಿದೆ. ವರದಿಗಳ ಪ್ರಕಾರ, ಇಳುವರಿ ಸುಮಾರು ಶೇ.70ರಷ್ಟು ಕಡಿಮೆಯಾಗಿರುವುದು ಮಾರುಕಟ್ಟೆಯಲ್ಲಿ ಪೂರೈಕೆ ಕೊರತೆಗೆ ಕಾರಣವಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಈರುಳ್ಳಿ ಮಾತ್ರ ಪ್ರಮುಖವಾಗಿ ಮಾರುಕಟ್ಟೆಗೆ ಬರುತ್ತಿದ್ದು, ಹೊರಗಿನಿಂದ ಆಮದು ಕಡಿಮೆಯಾಗಿರುವುದೂ ಬೆಲೆ ಏರಿಕೆಗೆ ಕಾರಣವಾಗಿದೆ.

ಸದ್ಯ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ಕೆಜಿಗೆ ಸುಮಾರು ₹50ರಿಂದ ₹60ರ ದರದಲ್ಲಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಗುಣಮಟ್ಟ ಹಾಗೂ ಪ್ರದೇಶಕ್ಕೆ ಅನುಗುಣವಾಗಿ ₹60ರಿಂದ ₹75ರವರೆಗೆ ದರ ಇದೆ. ಕೆಲವು ಮಾರುಕಟ್ಟೆಗಳಲ್ಲಿ ಸಣ್ಣ ಗಾತ್ರದ ಈರುಳ್ಳಿಯ ಚಿಲ್ಲರೆ ದರವೂ ₹75ರ ಆಸುಪಾಸಿನಲ್ಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಬೆಲೆ ಏರಿಕೆ ಮುಂದಿನ ಕೆಲವು ವಾರಗಳ ಕಾಲ ಮುಂದುವರಿಯುವ ಸಾಧ್ಯತೆಯಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದರೆ ಈರುಳ್ಳಿ ಕೆಜಿಗೆ ₹100 ತಲುಪುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ಮೂಲಗಳು ಅಂದಾಜಿಸಿವೆ.

ಈರುಳ್ಳಿ ಬೆಲೆ ಏರಿಕೆಯಿಂದ ಸಾಮಾನ್ಯ ಕುಟುಂಬಗಳ ಅಡುಗೆ ಮನೆಯ ಬಜೆಟ್ ಮೇಲೂ ಪರಿಣಾಮ ಬೀರುತ್ತಿದೆ. ಬೆಲೆ ಏರಿಕೆಯನ್ನು ನಿಯಂತ್ರಿಸಲು ಸರ್ಕಾರ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಪೂರೈಸಬೇಕು ಹಾಗೂ ಅಗತ್ಯವಿದ್ದರೆ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡಬೇಕು ಎಂಬುದು ಗ್ರಾಹಕರ ಆಗ್ರಹವಾಗಿದೆ.

ಇತ್ತ ದೇಶದಾದ್ಯಂತ ಈರುಳ್ಳಿ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬಫರ್ ಸ್ಟಾಕ್‌ನಿಂದ ಈರುಳ್ಳಿ ಬಿಡುಗಡೆ ಮಾಡುವ ಜೊತೆಗೆ ‘ಕಾಂಡಾ ಎಕ್ಸ್‌ಪ್ರೆಸ್’ ಮೂಲಕ ಪ್ರಮುಖ ನಗರಗಳಿಗೆ ಈರುಳ್ಳಿ ಸಾಗಿಸಲು ಮುಂದಾಗಿದೆ.

ವಿವಿಧ ಪ್ರದೇಶಗಳಲ್ಲಿ ಈರುಳ್ಳಿ ಬೆಲೆ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ತನ್ನ ಬಫರ್‌ ದಾಸ್ತಾನಿನಲ್ಲಿರುವ ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ. ಶನಿವಾರ ಈ ಪ್ರಮುಖ ಅಡುಗೆ ಮನೆಯ ಅಗತ್ಯ ವಸ್ತುವಿನ ಸರಾಸರಿ ಬೆಲೆ ಕೆಜಿಗೆ ₹42ಕ್ಕೆ ಏರಿಕೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.45ರಷ್ಟು ಹಾಗೂ ಕಳೆದ ತಿಂಗಳಿಗೆ ಹೋಲಿಸಿದರೆ ಶೇ.19ರಷ್ಟು ಹೆಚ್ಚಾಗಿದೆ.

ಈರುಳ್ಳಿ ಬೆಲೆ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿರುವ ದೆಹಲಿ, ಚೆನ್ನೈ, ಕೊಚ್ಚಿ ಮತ್ತು ಗುವಾಹಟಿಗೆ ನಾಸಿಕ್‌ನಿಂದ ಈರುಳ್ಳಿ ಸಾಗಿಸುವ ‘ಕಾಂಡಾ  ಎಕ್ಸ್‌ಪ್ರೆಸ್‌’ ರೈಲುಗಳನ್ನು ಸೋಮವಾರದಿಂದ ಕೇಂದ್ರ ಸರ್ಕಾರ ಕಾರ್ಯಾಚರಣೆಗೆ ಇಳಿಸಲಿದೆ.

ಗ್ರಾಹಕ ವ್ಯವಹಾರಗಳ ಇಲಾಖೆಯ ಅಂಕಿಅಂಶಗಳ ಪ್ರಕಾರ, ದೆಹಲಿಯಲ್ಲಿ ಈರುಳ್ಳಿ ಚಿಲ್ಲರೆ ಬೆಲೆ ಕೆಜಿಗೆ ₹65ಕ್ಕೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೆಜಿಗೆ ₹35 ಇತ್ತು. ಚೆನ್ನೈನಲ್ಲಿ ಈರುಳ್ಳಿ ಕೆಜಿಗೆ ₹58ಕ್ಕೆ ಮಾರಾಟವಾಗುತ್ತಿದ್ದು, ಕಳೆದ ವರ್ಷ ₹33 ಇತ್ತು. ಕೇರಳ ಮತ್ತು ಅಸ್ಸಾಂನ ಕೆಲವು ಭಾಗಗಳಲ್ಲೂ ಈರುಳ್ಳಿ ಬೆಲೆ ಹೆಚ್ಚಾಗಿದೆ.

ಇದೇ ವೇಳೆ ಸಕ್ಕರೆ ಚಿಲ್ಲರೆ ಬೆಲೆಯೂ ನಿರಂತರವಾಗಿ ಏರಿಕೆಯಾಗುತ್ತಿದೆ. ಶನಿವಾರ ಸಕ್ಕರೆ ಕೆಜಿಗೆ ₹62.50ಕ್ಕೆ ಮಾರಾಟವಾಗಿದ್ದು, ಒಂದು ತಿಂಗಳ ಹಿಂದೆ ₹46 ಇತ್ತು. ದೆಹಲಿ ಮತ್ತು ಮುಂಬೈನಲ್ಲಿ ಸಕ್ಕರೆ ಬೆಲೆ ಕ್ರಮವಾಗಿ ಕೆಜಿಗೆ ₹65 ಮತ್ತು ₹69ಕ್ಕೆ ತಲುಪಿದೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular