HomeIndiaGOOD NEWS : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ನ್ಯೂಸ್‌; ಮೀಶೋದಲ್ಲಿ ಬರೋಬ್ಬರಿ 10 ಲಕ್ಷ ಹುದ್ದೆಗಳ ನೇಮಕಾತಿ!

GOOD NEWS : ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ನ್ಯೂಸ್‌; ಮೀಶೋದಲ್ಲಿ ಬರೋಬ್ಬರಿ 10 ಲಕ್ಷ ಹುದ್ದೆಗಳ ನೇಮಕಾತಿ!

ಹಬ್ಬದ ಸೀಸನ್‌ಗೂ ಮುನ್ನ ಉದ್ಯೋಗಾಕಾಂಕ್ಷಿಗಳಿಗೆ ಮೀಶೋ ಭರ್ಜರಿ ಗುಡ್‌ನ್ಯೂಸ್‌ ನೀಡಿದೆ. ದೇಶಾದ್ಯಂತ ಬರೋಬ್ಬರಿ 10 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮುಂದಾಗಿರುವ ಮೀಶೋ, ಸೇಲ್ಸ್‌, ಡೆಲಿವರಿ, ಲಾಜಿಸ್ಟಿಕ್ಸ್‌, ಪ್ಯಾಕೇಜಿಂಗ್‌ ಸೇರಿದಂತೆ ವಿವಿಧ ವಿಭಾಗಗಳಲ್ಲಿ ನೇಮಕಾತಿ ನಡೆಸಲಿದೆ.

ಪ್ರಮುಖ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಮೀಶೋ (Meesho) ಬರೋಬ್ಬರಿ 10 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಮುಂಬರುವ ಹಬ್ಬದ ಸೀಸನ್‌ ಹಿನ್ನೆಲೆಯಲ್ಲಿ ಸೇಲ್ಸ್‌ ಮತ್ತು ಲಾಜಿಸ್ಟಿಕ್ಸ್‌ ವಿಭಾಗಗಳಲ್ಲಿ ಈ ಉದ್ಯೋಗಗಳನ್ನು ಒದಗಿಸಲಿದೆ.

ಇದರಲ್ಲಿ ಸುಮಾರು 6.5 ಲಕ್ಷ ಉದ್ಯೋಗಗಳು ಸೆಲ್ಲರ್‌ ನೆಟ್‌ವರ್ಕ್‌ ವಿಭಾಗದಲ್ಲಿ, ಮತ್ತೊಂದು 3.75 ಲಕ್ಷ ಉದ್ಯೋಗಗಳು ಲಾಜಿಸ್ಟಿಕ್ಸ್‌ ಆಪರೇಷನ್‌ ವಿಭಾಗದಲ್ಲಿ ಇರಲಿವೆ. ಸುಮಾರು 1.3 ಲಕ್ಷ ಸೀಸನಲ್‌ ವರ್ಕರ್‌ಗಳನ್ನು ಪ್ಯಾಕೇಜಿಂಗ್‌, ಮ್ಯಾನುಫ್ಯಾಕ್ಚರಿಂಗ್‌, ಪ್ರೊಡಕ್ಷನ್‌, ವೇರ್‌ಹೌಸಿಂಗ್‌ ಮತ್ತು ಇನ್‌ವೆಂಟರಿ ಮ್ಯಾನೇಜ್‌ಮೆಂಟ್‌ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಬ್ಬದ ಸೀಸನ್‌ನಲ್ಲಿ ಡೆಲಿವರಿ ಸಾಮರ್ಥ್ಯವನ್ನು ಹೆಚ್ಚಿಸಲು ಮೀಶೋಗೆ ಸೇರಿದ ಸ್ವಂತ ಲಾಜಿಸ್ಟಿಕ್ಸ್‌ ವಿಭಾಗವಾದ ವಾಲ್ಮೋ (Valmo) ತನ್ನ ಥರ್ಡ್‌-ಪಾರ್ಟಿ ಲಾಜಿಸ್ಟಿಕ್ಸ್‌ ಪಾಲುದಾರರೊಂದಿಗೆ ಸೇರಿ ಕಾರ್ಯನಿರ್ವಹಿಸಲಿದೆ.

ಈ ಹಬ್ಬದ ಸೀಸನ್‌ನಲ್ಲಿ ಹೆಚ್ಚಿನ ಪ್ರಮಾಣದ ಪಾರ್ಸೆಲ್‌ಗಳನ್ನು ತಲುಪಿಸಲು ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ ಡೆಲಿವರಿ, ಸೋರ್ಟಿಂಗ್‌, ಹಬ್‌ ಕಾರ್ಯಾಚರಣೆಗಳು ಮತ್ತು ಮೇಲ್ವಿಚಾರಕ ಹುದ್ದೆಗಳಿಗೆ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಈ ಫೆಸ್ಟಿವಲ್‌ ಸೀಸನ್‌ ಮೂಲಕ ಹೆಚ್ಚಿನ ಸಂಖ್ಯೆಯ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶಗಳು ದೊರೆಯಲಿವೆ ಎಂದು ಕಂಪನಿ ತಿಳಿಸಿದೆ.

ಆನ್‌ಲೈನ್‌ ಶಾಪಿಂಗ್‌ ಪ್ಲಾಟ್‌ಫಾರ್ಮ್‌ ಮೀಶೋ ಇತ್ತೀಚೆಗೆ ಐಪಿಒಗೆ ಬಂದಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೀಶೋ ₹5,421.20 ಕೋಟಿ ಸಂಗ್ರಹಿಸಿತ್ತು. ಮೀಶೋ ಲಿಮಿಟೆಡ್‌ ಷೇರುಗಳು 2025ರ ಡಿಸೆಂಬರ್‌ 10ರಂದು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್‌ ಆಗಿದ್ದವು. ಭಾರಿ ಬೇಡಿಕೆಯ ಹಿನ್ನೆಲೆಯಲ್ಲಿ ಷೇರುಗಳು ಐಪಿಒ ಬೆಲೆಗಿಂತ 46%ಕ್ಕೂ ಹೆಚ್ಚು ಪ್ರೀಮಿಯಂನಲ್ಲಿ ವಹಿವಾಟು ಆರಂಭಿಸಿದ್ದವು.

2015ರಲ್ಲಿ ಆರಂಭವಾದ ಮೀಶೋ ಕಂಪನಿ ಬೆಂಗಳೂರನ್ನು ಕೇಂದ್ರವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ. ಕಳೆದ ವರ್ಷ ಕಂಪನಿಯು ತನ್ನ ಪ್ರಧಾನ ಕಚೇರಿಯನ್ನು ಅಮೆರಿಕದಿಂದ ಭಾರತಕ್ಕೆ ಸ್ಥಳಾಂತರಿಸಿತು. ಈ ಸಂಬಂಧ 2025ರಲ್ಲೇ ಸೆಕ್ಯುರಿಟೀಸ್‌ ಆ್ಯಂಡ್‌ ಎಕ್ಸ್‌ಚೇಂಜ್‌ ಬೋರ್ಡ್‌ ಆಫ್‌ ಇಂಡಿಯಾ (SEBI)ಗೆ ಪರಿಷ್ಕೃತ ಐಪಿಒ ದಾಖಲೆಗಳನ್ನು ಸಲ್ಲಿಸಿತ್ತು. ಬಳಿಕ ಡಿಸೆಂಬರ್‌ನಲ್ಲಿ ಸಾರ್ವಜನಿಕ ಲಿಸ್ಟಿಂಗ್‌ಗೆ ಪ್ರವೇಶಿಸಿತು.

2024ರ ಆರ್ಥಿಕ ವರ್ಷದಲ್ಲಿ ಕಂಪನಿಯು ₹7,615 ಕೋಟಿ ಆದಾಯ ದಾಖಲಿಸಿದ್ದರೆ, ₹305 ಕೋಟಿ ನಷ್ಟ ಅನುಭವಿಸಿತ್ತು. ಇದರ ಹಿನ್ನೆಲೆಯಲ್ಲಿ ಕಂಪನಿಯು ತನ್ನ ನೆಲೆಯನ್ನು ಅಮೆರಿಕದ ಡೆಲವೇರ್‌ನಿಂದ ಭಾರತಕ್ಕೆ ಸ್ಥಳಾಂತರಿಸಿತು.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular