HomeKarnatakaಬ್ಯಾರಕ್ ನಲ್ಲಿ ಮೊಬೈಲ್ ಪತ್ತೆ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ VVIP ಸೆಲ್ ನಿಂದ ಶಿಫ್ಟ್:...

ಬ್ಯಾರಕ್ ನಲ್ಲಿ ಮೊಬೈಲ್ ಪತ್ತೆ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ VVIP ಸೆಲ್ ನಿಂದ ಶಿಫ್ಟ್: ಜನರಲ್ ಸೆಲ್ ಗೆ ಸ್ಥಳಾಂತರ

ಬೆಂಗಳೂರು: ಅತ್ಯಾಚಾರ ಹಾಗೂ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬ್ಯಾರಕ್ ನಲ್ಲಿ ಮೊಬೈಲ್ ಬಳಸುತ್ತಿರುವ ವಿಡಿಯೋ ವೈರಲ್ ಆಗಿದೆ. ಅಲ್ಲದೇ ಸಿಸಿಬಿ ಪೊಲೀಸರು ನಡೆಸಿದ ದಾಳಿ ವೇಳೆ ಪ್ರಜ್ವಲ್ ರೇವಣ್ಣ ಇರುವ ವಿವಿಐಪಿ ಸೆಲ್ ನಲ್ಲಿ ಮೊಬೈಲ್ ಕೂಡ ಪತ್ತೆಯಾಗಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಪ್ರಜ್ವಲ್ ರೇವಣ್ಣ ಬ್ಯಾರಕ್ ನಲ್ಲಿ ಮೊಬೈಲ್ ಪತ್ತೆ ಪ್ರಕರಣದ ತನಿಖೆಗೆ ಡಿಐಜಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಘಟನೆ ಬೆನ್ನಲ್ಲೇ ಪ್ರಜ್ವಲ್ ರೇವಣ್ಣನನ್ನು ವಿವಿಐಪಿ ಸೆಲ್ ನಿಂದ ಸಾಮಾನ್ಯ ಕೈದಿಗಳಿರುವ ಜನರಲ್ ಸೆಲ್ ಗೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

20 ಕೈದಿಗಳಿರುವ ಬ್ಯಾರಕ್‌ಗೆ ಪ್ರಜ್ವಲ್‌ ರೇವಣ್ಣನನ್ನ ಶಿಫ್ಟ್‌ ಮಾಡಲಾಗಿದ್ದು, ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿದೆ. ಪ್ರಜ್ವಲ್ ರೇವಣ್ಣ ಇದ್ದ ಸೆಲ್ ಗೆ ಮೊಬೈಲ್ ಬಂದಿದ್ದು ಹೇಗೆ? ತಂದು ಕೊಟ್ಟಿದ್ದು ಯಾರು? ಎಂಬ ಬಗ್ಗೆ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುತ್ತಿದೆ.

ಪ್ರಜ್ವಲ್ ರೇವಣ್ಣ ಸೆಲ್ ನಲ್ಲಿ ಮೊಬೈಲ್ ಮಾತ್ರವಲ್ಲ ನೋಟ್ ಬುಕ್ ಕೂಡ ಪತ್ತೆಯಾಗಿದೆ. ನೋಟ್ ಬುಕ್ ನಲ್ಲಿ ತಂದೆ, ತಾಯಿ ಹಾಗೂ ತನ್ನ ಗೆಳತಿಯ ಫೋನ್ ನಂಬರ್ ಗಳನ್ನು ಬೇರೆ ಹೆಸರಿನಲ್ಲಿ ಯಾರುಗೂ ಗೊತಾಗದಂತೆ ಬರೆದಿಟ್ಟಿದ್ದಾರೆ. ತಂದೆಯ ಫೋನ್ ನಂಬರ್ ನ್ನು ಶಿವಪ್ಪ ಹೆಸರಲ್ಲಿ, ತಾಯಿ ಫೋನ್ ನಂಬರ್ ನ್ನು ಪಾರ್ವತಿ ಹೆಸರಿನಲ್ಲಿ ಬರೆದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಪ್ರಜ್ವಲ್ ರೇವಣ್ಣ ಬಳಿ ಸಿಕ್ಕ ಮೊಬೈಲ್‌ನಲ್ಲಿ ಸುಮಾರು 90 ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದೆ. ಪ್ರಜ್ವಲ್ ಪರಿಚಿತರೊಂದಿಗೆ ಮಾತನಾಡಿದ ಆಡೀಯೋ ರೆಕಾರ್ಡ್ ಸಹ ಸಿಕ್ಕಿದೆ. ಜೈಲಿನಲ್ಲಿ ಸಿಕ್ಕ ಮೊಬೈಲ್ ಮೂಲಕ ಪ್ರಜ್ವಲ್ ರೇವಣ್ಣ ಅಪರಿಚಿತ ವ್ಯಕ್ತಿಯೊಂದಿಗಿನ ಸಂಭಾಷಣೆ ಸಿಕ್ಕಿದೆ. ಅಲ್ಲದೇ ಪ್ರಜ್ವಲ್ ರೇವಣ್ಣ ಜೈಲಿನ ಕೊಠಡಿಯೊಳಗೆ ಜೈಲು ಸಮವಸ್ತ್ರ ಬಿಟ್ಟು, ಸಾಮಾನ್ಯ ಜನರಂತೆ ಉಡುಪು ಧರಿಸಿ, ಆರಾಮವಾಗಿ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಯಾವಾಗ, ಯಾರು ಚಿತ್ರೀಕರಿಸಿದ್ದಾರೆ ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular