HomeIndiaಅಭಿಜಿತ್ ದೀಪ್ಕೆ ಬೆನಲ್ಲೇ AISA ರಾಷ್ಟ್ರೀಯ ಮುಖ್ಯಸ್ಥೆ ನೇಹಾ ಬೋರಾ ಕೂಡ ಪೊಲೀಸ್ ವಶಕ್ಕೆ

ಅಭಿಜಿತ್ ದೀಪ್ಕೆ ಬೆನಲ್ಲೇ AISA ರಾಷ್ಟ್ರೀಯ ಮುಖ್ಯಸ್ಥೆ ನೇಹಾ ಬೋರಾ ಕೂಡ ಪೊಲೀಸ್ ವಶಕ್ಕೆ

ನವದೆಹಲಿ: ಎಸ್ ಐ ಅರ್ ಅಕ್ರಮ ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ತಿರಂಗ ಯಾತ್ರೆಗೆ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕರೆ ನೀಡಿತ್ತು. ದೆಹಲಿಯ ಸೆಂಟ್ರಲ್‌ ಪಾರ್ಕ್‌ನಲ್ಲಿ ತಿರಂಗ ಯಾತ್ರೆ ಆರಂಭವಾಗುತ್ತಿದ್ದಂತೆ ರ್ಯಾಲಿಯಲ್ಲಿ ಭಾಗವಹಿಸಲು ಆಗಮಿಸುತ್ತಿದ್ದ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದೇ ವೇಳೆ ಸಿಜೆಪಿ ತಿರಂಗ ರ್ಯಾಲಿಗೆ ಬೆಂಬಲ ನೀಡಿ ಪ್ರತಿಭಟನೆ ನಡೆಸುತ್ತಿದ್ದ AISA ರಾಷ್ಟ್ರೀಯ ಮುಖ್ಯಸ್ಥೆ ನೇಹಾ ಬೋರಾ ಅವರ್ನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಭಿಜಿತ್ ದೀಪ್ಕೆ ಅವರನ್ನು ವಶಕ್ಕೆ ಪಡೆದು ವಾಹನದಲ್ಲಿ ಕೊಂಡಿಯ್ಯುತ್ತಿದ್ದ ವೇಳೆ ಸಿಜೆಪಿ ಕಾರ್ಯ್ಕರ್ತರು ದೆಹಲಿ ಪೊಲೀಸರ ವಾಹನ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು. ಆದಾಗ್ಯೂ ದೆಹಲಿ ಪೊಲೀಸರು ದೀಪ್ಕೆ ಅವರನ್ನು ಬಿಡದೇ ವಾಹನದಲ್ಲಿ ಕರೆದೊಯ್ದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಿರಂಗ ರ್ಯಾಲಿ ಹಮ್ಮಿಕೊಳ್ಳದಂತೆ ಅಭಿಜಿತ್‌ ದಿಪ್ಕೆ ಅವರಿಗೆ ದೆಹಲಿ ಪೊಲೀಸರಿಂದ ನೋಟೀಸ್‌ ಜಾರಿ ಮಾಡಲಾಗಿತ್ತು. ಅಭಿಜಿತ್‌ ದಿಪ್ಕೆ ಅವರ ಮನೆಗೆ ಬಂದು, ದೆಹಲಿ ಪೊಲೀಸರು ನೋಟೀಸ್‌ ಕೊಟ್ಟಿದ್ದರು. ನೋಟೀಸ್‌ ಹೊರತಾಗಿಯೂ ಅಭಿಜಿತ್‌ ದಿಪ್ಕೆ ಸೆಂಟ್ರಲ್‌ ಪಾರ್ಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸಲು ಮುಂದಾದರು. ಈ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಇನ್ನು ಸಿಜೆಪಿ ಸಂಸ್ಥಾಪಕರಿಗೆ AISA ರಾಷ್ಟ್ರೀಯ ಮುಖ್ಯಸ್ಥೆ ನೇಹಾ ಬೋರಾ ಸಾಥ್‌ ನೀಡಿದರು. ನೇಹಾ ಬೋರಾ ತಿರಂಗಾ ಯಾತ್ರೆಗೆ ತಡೆಯೊಡ್ಡಿದ ಪೊಲೀಸರು, AISA ಅಧ್ಯಕ್ಷೆಗೆ ಮಾಧ್ಯಮಗಳೊಂದಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ತಿರಂಗಾ ಯಾತ್ರೆ ಹಮ್ಮಿಕೊಂಡಿದ್ದ ಅಭಿಜಿತ್‌ ದಿಪ್ಕೆ, ನೇಹಾ ಬೋರಾ ಸೇರಿದಂತೆ ಇತರರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡರು.

ತಮ್ಮನ್ನು ವಶಕ್ಕೆ ಪಡೆಯಲು ಬಂದ ದೆಹಲಿ ಪೊಲೀಸರೊಂದಿಗೆ ಅಭಿಜಿತ್‌ ದಿಪ್ಕೆ ಮತ್ತು ನೇಹಾ ಬೋರಾ ತೀವ್ರ ಮಾತಿನ ಚಕಮಕಿ ನಡೆಸಿದರು.

ಧ್ವಜಸಂಹಿತೆ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ, ಅಭಿಜಿತ್‌ ದಿಪ್ಕೆ ಮತ್ತು ನೇಹಾ ಬೋರಾ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ದೆಹಲಿ ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೀವ್‌ ರಂಜನ್‌ ಸ್ಪಷ್ಟಪಡಿಸಿದ್ದಾರೆ.

ಕನ್ನಾಟ್‌ ಪ್ಲೇಸ್‌ ಸುತ್ತಮುತ್ತ ರ‍್ಯಾಪಿಡ್‌ ಆ್ಯಕ್ಷನ್‌ ಫೋರ್ಸ್‌, ದೆಹಲಿ ಪೊಲೀಸ್‌ ಸೇರಿದಂತೆ ಇತರ ಪಡೆಗಳನ್ನು ಭಾರೀ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿದೆ. ದೇಶದಲ್ಲಿ ರಾಷ್ಟ್ರಧ್ವಜ ಹಾರಿಸುವುದನ್ನೂ ಅಪರಾಧ ಎಂದು ಬಿಂಬಿಸಲಾಗುತ್ತಿದೆ ಎಂದು ಗುಡುಗಿದ ಸಿಜೆಪಿ. ನಾಯಕರ ಬಂಧನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಸಿಜೆಪಿ ತಿರಂಗ ಯಾತ್ರೆ ಆರಂಭ: ರ್ಯಾಲಿಗೂ ಮುನ್ನವೇ ಅಭಿಜಿತ್ ದೀಪ್ಕೆ ಪೊಲೀಸ್ ವಶಕ್ಕೆ

ನವದೆಹಲಿ: ದೆಹಲಿಯ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕರೆ ನೀಡಿರುವ ರಾಷ್ಟ್ರಧ್ವಜ ಕೈಯಲ್ಲಿ ಹಿಡಿದು ಸಾಗುವ ತಿರಂಗ ಯಾತ್ರೆ ಆರಂಭವಾಗಿದೆ. ಸಿಜೆಪಿ ಈ ಯಾತ್ರೆಗೆ ಆಮ್ ಆದ್ಮಿ ಪಕ್ಷ ಕೂಡ ಬೆಂಬಲ ನೀಡಿದೆ.

ದೆಹಲಿಯ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಕಿಕ್ಕಿರಿದ ಜನಸಂದಣಿ ನಡುವೆ ತಿರಂಗ ಯಾತ್ರೆ ಆರಂಭವಾಗಿದ್ದು, ಲಕ್ಷಾಂತರ ಜನರು ಪಾಲ್ಗೊಂಡಿದ್ದಾರೆ. ತಿರಂಗಾ ಯಾತ್ರೆಗೆ ತೆರಳಲು ಸಜ್ಜಾಗಿದ್ದ ಸಿಜೆಪಿ ಮುಖ್ಯಸ್ಥ ಅಭಿಜಿತ್ ದೀಪ್ಕೆಯನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಿರಂಗ ಯಾತ್ರೆ ಆರಂಭವಾಗುವುದಕ್ಕೂ ಮುನ್ನ ಸೆಖ್ಂತ್ರಲ್ ಪಾರ್ಕ್ ಬಳಿಯೇ ಅಭಿಜಿತ್ ದೀಪ್ಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಜೆಪಿಯ ತಿರಂಗ ಯಾತ್ರೆಗೆ ಸ್ಥಳೀಯ ಆಡಳಿತ ಅನುಮತಿ ನೀಡಿಲ್ಲ. ಆದಾಗ್ಯೂ ರ್ಯಾಲಿ ನಡೆಸಲು ಮುಂದಾಗಿದ್ದಕ್ಜೆ ವಶಕ್ಕೆ ಪಡೆಯಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಸಿಜೆಪಿ ತಿರಂಗಾ ಯಾತ್ರೆಗೆ ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ. ಶಾಂತಿಯುತವಾಗಿ ಹೋರಾಟ ನಡೆಸುವುದಾಗಿ ಸಿಜೆಪಿ ಹೈಕೋರ್ಟ್ ಗೆ ಮಾಹಿತಿ ನೀಡಿತ್ತು, ಆದಾಗ್ಯೂ ದೆಹಲಿ ಪೊಲೀಸರು ಹೈಕೋರ್ಟ್ ಆದೇಶ ಉಲ್ಲಂಗ್ಜಿಸಿ ಸಿಜೆಪಿ ನಾಯಕರನ್ನು ವಶಕ್ಕೆ ಪಡೆಯುತ್ತಿದ್ದು, ತಿರಂಗ ಯಾತ್ರೆಗೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಸಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಭಿಜಿತ್ ದೀಪ್ಕೆ ನಿವಾಸಕ್ಕೆ ತೆರಳಿ ನೋಟಿಸ್ ನೀಡಿದ್ದ ಪೊಲೀಸರು:

ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ನಿವಾಸಕ್ಕೆ ಇಂದು ತೆರಳಿದ್ದ ದೆಹಲಿ ಪೊಲೀಸರು, ರ‍್ಯಾಲಿ ನಡೆಸದಂತೆ ಎಚ್ಚರಿಕೆ ನೀಡಿ ನೋಟಿಸ್ ಜಾರಿ ಮಾಡಿದ್ದರು. ಈ ಕುರಿತ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೊಲೀಸರು ನೀಡಿದ ನೋಟಿಸ್ ಪರಿಶೀಲಿಸಿದ ಅಭಿಜಿತ್ ದೀಪ್ಕೆ, “ನೀವು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರನ್ನು ನಿರಂತರವಾಗಿ ಪ್ರಚೋದಿಸುತ್ತಿದ್ದೀರಿ, ಇದು ಕಾನೂನುಬಾಹಿರ” ಎಂಬ ಅಂಶ ಆ ನೋಟಿಸ್​​ನಲ್ಲಿತ್ತು. ಇದನ್ನು ಓದಿ ಆಕ್ರೋಶಗೊಂಡ ದೀಪ್ಕೆ ನನ್ನ ಮೇಲೆ ಇಂಥದ್ದೊಂದು ಆರೋಪವನ್ನು ಹೇಗೆ ಹೊರಿಸಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

“ನೀವೇನು ತಮಾಷೆ ಮಾಡುತ್ತಿದ್ದೀರಾ? ಇದೇನಾ ನೋಟೀಸ್ ನೀಡುವ ರೀತಿ? ನಿಮ್ಮ ಮನಸ್ಸಿಗೆ ಬಂದಿದ್ದನ್ನೆಲ್ಲಾ ಬರೆದುಕೊಂಡು ಬರುತ್ತಿದ್ದೀರಿ. ನೇರವಾಗಿ ನನ್ನನ್ನು ಗಲ್ಲಿಗೇರಿಸಿ ಬಿಡಿ, ಇದ್ಯಾವ ರೀತಿಯ ತಮಾಷೆ?” ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ.

ತಾನು ಸಾರ್ವಜನಿಕರನ್ನು ಹಿಂಸಾಚಾರಕ್ಕೆ ಪ್ರಚೋದಿಸಿರುವ ಕನಿಷ್ಠ ಒಂದು ವಿಡಿಯೋವನ್ನಾದರೂ ತೋರಿಸುವಂತೆ ಪೊಲೀಸರಿಗೆ ದೀಪ್ಕೆ ಸವಾಲು ಹಾಕಿದರು.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಅಭಿಜಿತ್ ದೀಪ್ಕೆ ಬಾಂಡ್ ಸೇರಿದಂತೆ ಕೆಲವು ದಾಖಲೆಗಳಿಗೆ ಸಹಿ ಮಾಡುತ್ತಿರುವುದು ಕಂಡುಬಂದಿದೆ. ದೆಹಲಿ ಪೊಲೀಸ್ ಕಾಯ್ದೆಯ ಸೆಕ್ಷನ್ 29ರ ಅಡಿಯಲ್ಲಿ ಅವರಿಗೆ ನೋಟೀಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸಾರ್ವಜನಿಕರಿಗೆ ನಿರ್ದೇಶನಗಳನ್ನು ನೀಡಲು ಪೊಲೀಸರಿಗೆ ಈ ಸೆಕ್ಷನ್ ಅಡಿಯಲ್ಲಿ ಅಧಿಕಾರವಿದೆ. ಆದರೆ, ಸೆಕ್ಷನ್ 29 ಪೊಲೀಸರಿಗೆ ಪ್ರತಿಭಟನೆಯನ್ನು ಬೇರೆ ಯಾವ ಷರತ್ತುಗಳಿಲ್ಲದೆ ಸಂಪೂರ್ಣವಾಗಿ ನಿಷೇಧಿಸುವ ಅಧಿಕಾರವನ್ನು ನೀಡುವುದಿಲ್ಲ.

ಇಂದು ಸಂಜೆ 5 ಗಂಟೆಗೆ ಕನ್ನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ರಾಷ್ಟ್ರಧ್ವಜದೊಂದಿಗೆ ಜಮಾಯಿಸುವಂತೆ ದೀಪ್ಕೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರು. ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಲಾಗಿದ್ದ ಜಂತರ್ ಮಂತರ್‌ಗೆ ಅಕ್ರಮವಾಗಿ ಪ್ರವೇಶಿಸಿ ರಾಷ್ಟ್ರಧ್ವಜ ಹಾರಿಸಿದ ಆರೋಪದ ಮೇಲೆ ಸಿಜೆಪಿ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕ ಅವರನ್ನು ಬಂಧಿಸಿ 5 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ ಬೆನ್ನಲ್ಲೇ ದೀಪ್ಕೆ ಈ ಕರೆ ನೀಡಿದ್ದರು.

ಸಿಜೆಪಿ ರ‍್ಯಾಲಿಯ ಹಿನ್ನೆಲೆಯಲ್ಲಿ ಕನ್ನಾಟ್ ಪ್ಲೇಸ್ ಸುತ್ತಮುತ್ತ ಸುಮಾರು 6,000ಕ್ಕೂ ಹೆಚ್ಚು ಪೊಲೀಸರು ಹಾಗೂ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದ್ದು, ಪ್ರದೇಶವು ಕೋಟೆಯಾಗಿ ಪರಿವರ್ತನೆಯಾಗಿದೆ. 5 ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಿ 144ರ ಮಾದರಿಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪ್ರತಿಭಟನೆಗೆ ಯಾವುದೇ ಅಧಿಕೃತ ಅನುಮತಿ ನೀಡಿಲ್ಲವಾದರೂ, ಸೂಕ್ತ ಸ್ಥಳದಲ್ಲಿ ರಾಷ್ಟ್ರಧ್ವಜ ಹಿಡಿದು ರಾಷ್ಟ್ರಗೀತೆ ಹಾಡಲು 11 ಜನರ ಆಯ್ಕೆಯಾದ ಗುಂಪಿಗೆ ಮಾತ್ರ ಅನುಮತಿ ನೀಡಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular