HomeKarnatakaಬೆಂಗಳೂರಿಗರೇ ಎಚ್ಚರ: ಸಿಲಿಕಾನ್ ಸಿಟಿಗೆ ಎಂಟ್ರಿಕೊಟ್ಟಿದೆ 'ವಾಂತಿ ಗ್ಯಾಂಗ್'

ಬೆಂಗಳೂರಿಗರೇ ಎಚ್ಚರ: ಸಿಲಿಕಾನ್ ಸಿಟಿಗೆ ಎಂಟ್ರಿಕೊಟ್ಟಿದೆ ‘ವಾಂತಿ ಗ್ಯಾಂಗ್’

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳ್ಳರು, ದರೋಡೆಕೋರರ ಹೊಸ ರೂಪಗಳಿಗೆ ಕಮ್ಮಿಯಿಲ್ಲ. ದಿನಕ್ಕೊಂದು ವೇಷದಲ್ಲಿ ಖದೀಮರ ಗ್ಯಾಂಗ್ ಲಗ್ಗೆಯಿಡುತ್ತದೆ. ಇದೀಗ ವಾಂತಿ ಗ್ಯಾಂಗ್ ಎಂಬ ಹೊಸದೊಂದು ಗ್ಯಾಂಗ್ ಸಿಲಿಕಾನ್​​​ ಸಿಟಿಗೆ ಎಂಟ್ರಿಕೊಟ್ಟಿದ್ದು, ಬೆಂಗಳೂರಿಗರಲ್ಲಿ ಆತಂಕ ಮನೆ ಮಾಡಿದೆ.

ಬಿಎಂಟಿಸಿ ಬಸ್​​ ಪ್ರಯಾಣಿಕರನ್ನೇ ಟಾರ್ಗೆಟ್​​ ಮಾಡಿ ಕಳ್ಳತನ ನಡೆಸುವ ಖದೀಮರ ಗುಂಪೇ ಈ ವಾಂತಿ ಗ್ಯಾಂಗ್. ವಿಂಡೋ ಸೀಟ್ ಪ್ರಯಾಣಿಕರನ್ನ ಟಾರ್ಗೆಟ್ ಮಾಡುವ ಆರೋಪಿಗಳು, ವಾಂತಿ ಬರುತ್ತಿದೆ ಸೀಟ್ ಬಿಡಿ ಎಂದು ಮನವಿ ಮಾಡುತ್ತಾರೆ. ಸೀಟ್​​ ಬಿಟ್ಟುಕೊಡುವ ವೇಳೆ ತಂಡದ ಸದಸ್ಯರು ರಶ್​​ ಇರುವಂತೆ ವರ್ತಿಸಿ ಮೈ ಮೇಲೆ ಬೀಳುತ್ತಾರೆ. ಈ ವೇಳೆ ಪ್ರಯಾಣಿಕರ ಜೇಬಿನಲ್ಲಿರುವ ಪರ್ಸ್​​, ಮೊಬೈಲ್​​ ಫೋನ್​​ಗಳನ್ನು ಎಗರಿಸಲಾಗುತ್ತೆ. ಬಳಿಕ ಅನುಮಾನವೇ ಬಾರದಂತೆ ಆರೋಪಿಗಳು ಅಲ್ಲಿಂದ ಎಸ್ಕೇಪ್​​ ಆಗುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಾಂತಿ ಗ್ಯಾಂಗ್ ಕೈಚಳಕದ ಬಗ್ಗೆ ನಗರದ ಕೇಂದ್ರ ವಿಭಾಗ ಸೇರಿ ಎರಡು ವಿಭಾಗದಲ್ಲಿ ಕೇಸ್ ದಾಖಲಾಗಿದ್ದು, ಪ್ರಕರಣಗಳ ಸಂಬಂಧ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಇಬ್ಬರನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಮುಬಾರಕ್ ಪಾಶಾ ಮತ್ತು ಅನ್ವರ್ ಪಾಶಾ ಬಂಧಿತ ಆರೋಪಿಗಳು.

ಆರೋಪಿಗಳ ವಿರುದ್ಧ ನಗರದ ಹಲವು ಕಡೆ ಇಂತಹ ದೂರುಗಳು ದಾಖಲಾಗಿರೋದು ಗೊತ್ತಾಗಿದ್ದು, ಸದ್ಯ ಎಲ್ಲ ಪ್ರಕರಣಗಳನ್ನ ವಿಧಾನಸೌಧ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಿ ತನಿಖೆ ನಡೆಸಲಾಗುತ್ತಿದೆ. ಎಸ್ಕೇಪ್​​ ಆಗಿರುವ ಉಳಿದ ಮೂವರು ಪ್ರಮುಖ ಆರೋಪಿಗಳಿಗಾಗಿ ಶೋಧ ಮುಂದುವರಿದಿದೆ.

ಇದೇ ವೇಳೆ ಮೈ ಮೇಲೆ ಬೆಡ್‌ಶೀಟ್ ಮತ್ತು ಟವೆಲ್ ಹೊದ್ದು ಬಂದ ಖದೀಮರು ಬೇಗೂರು ಕೊಪ್ಪ, ಮೈಲಸಂದ್ರದಲ್ಲಿ ಮಧ್ಯರಾತ್ರಿ ಕೈಚಳಕ ತೋರಿರುವ ಘಟನೆ ನಡೆದಿದೆ. ‘ಗ್ರೀನ್ ವ್ಯಾಲಿ ಲೇಔಟ್’ ಮನೆಗಳನ್ನ ಟಾರ್ಗೆಟ್ ಮಾಡಿದ್ದ ತಂಡದ ಒಟ್ಟು 8 ಮಂದಿಯ ಓಡಾಟದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular