HomeLatest Newsಬಾಲಿವುಡ್‌ಗೆ ಹಾರಲಿದ್ದಾರಾ ಕಲ್ಯಾಣಿ ಪ್ರಿಯದರ್ಶನ್? ರಣವೀರ್ ಸಿನಿಮಾದಿಂದ ಬಂದಿದೆ ಬಂಪರ್ ಆಫರ್!

ಬಾಲಿವುಡ್‌ಗೆ ಹಾರಲಿದ್ದಾರಾ ಕಲ್ಯಾಣಿ ಪ್ರಿಯದರ್ಶನ್? ರಣವೀರ್ ಸಿನಿಮಾದಿಂದ ಬಂದಿದೆ ಬಂಪರ್ ಆಫರ್!

ಬಾಲಿವುಡ್ ಅಂಗಳದಲ್ಲಿ ಈಗ ಜೊಂಬಿ ಥ್ರಿಲ್ಲರ್ ಕಥಾಹಂದರ ಹೊಂದಿರುವ ಪ್ರಳಯ್ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಜೈ ಮೆಹ್ತಾ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದ್ದು, ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಖ್ಯಾತ ನಟಿ ಕಲ್ಯಾಣಿ ಪ್ರಿಯದರ್ಶನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ.

ಇತ್ತೀಚೆಗೆ ತೆರೆಕಂಡ ಲೋಕಃ ಸಿನಿಮಾದಲ್ಲಿ ಸೂಪರ್‌ಹೀರೋ ಪಾತ್ರದ ಮೂಲಕ ಕಲ್ಯಾಣಿ ಪ್ರಿಯದರ್ಶನ್ ಪ್ರೇಕ್ಷಕರ ಮತ್ತು ವಿಮರ್ಶಕರ ಗಮನ ಸೆಳೆದಿದ್ದರು. ಅವರ ಅಭಿನಯ ಹಾಗೂ ಸ್ಕ್ರೀನ್ ಪ್ರೆಸೆನ್ಸ್ ನೋಡಿ ಮೆಚ್ಚಿರುವ ಪ್ರಳಯ್ ಚಿತ್ರತಂಡ, ಈ ಜೊಂಬಿ ಸರ್ವೈವಲ್ ಸಿನಿಮಾದಲ್ಲಿಯೂ ಅವರಿಗೆ ಪ್ರಬಲ ಪಾತ್ರವನ್ನು ನೀಡಲು ಉತ್ಸುಕವಾಗಿದೆ ಎನ್ನಲಾಗಿದೆ.

ಈ ಮಾತುಕತೆ ಅಂತಿಮಗೊಂಡರೆ ಕಲ್ಯಾಣಿ ಅವರಿಗೆ ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದ ಅವಕಾಶ ಸಿಕ್ಕಂತಾಗಲಿದೆ. ಜೊತೆಗೆ ರಣವೀರ್ ಸಿಂಗ್ ಮತ್ತು ಕಲ್ಯಾಣಿ ಪ್ರಿಯದರ್ಶನ್ ಅವರ ಜೋಡಿಯನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular