HomeLatest NewsRent Rules : ಮನೆ ಮಾಲೀಕರು ಏಕಾಏಕಿ ಮನೆ ಖಾಲಿ ಮಾಡಲು ಹೇಳಿದ್ದಾರಾ..? ಹೀಗೆ...

Rent Rules : ಮನೆ ಮಾಲೀಕರು ಏಕಾಏಕಿ ಮನೆ ಖಾಲಿ ಮಾಡಲು ಹೇಳಿದ್ದಾರಾ..? ಹೀಗೆ ಮಾಡಿದರೆ ನೀವು ಸುರಕ್ಷಿತ

ನಗರಗಳು ಹಾಗೂ ಪಟ್ಟಣಗಳಲ್ಲಿ ಹೆಚ್ಚಿನವರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ಬಾಡಿಗೆ ಹೆಚ್ಚಳ ಅಥವಾ ಮನೆ ಖಾಲಿ ಮಾಡುವ ವಿಚಾರದಲ್ಲಿ ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಆಗಾಗ್ಗೆ ವಿವಾದಗಳು ಉಂಟಾಗುತ್ತವೆ. ಕೆಲವೊಮ್ಮೆ ಇವು ಪೊಲೀಸ್ ಠಾಣೆ ಅಥವಾ ನ್ಯಾಯಾಲಯದವರೆಗೂ ತಲುಪುವ ಸಾಧ್ಯತೆಯೂ ಇರುತ್ತದೆ. ಕೆಲವು ಮನೆ ಮಾಲೀಕರು ಯಾವುದೇ ಪೂರ್ವ ಸೂಚನೆ ನೀಡದೇ ಏಕಾಏಕಿ ಬಾಡಿಗೆ ಹೆಚ್ಚಿಸುವುದು ಅಥವಾ ತಕ್ಷಣವೇ ಮನೆ ಖಾಲಿ ಮಾಡುವಂತೆ ಒತ್ತಾಯಿಸುವುದು ಕಂಡುಬರುತ್ತದೆ.

ಇಂತಹ ಸಂದರ್ಭಗಳಲ್ಲಿ ಮನೆ ಮಾಲೀಕರಿಗೆ ಕಾನೂನುಬದ್ಧ ಹಕ್ಕು ಇದೆ ಎಂದು ಭಾವಿಸಿ ಅನೇಕ ಬಾಡಿಗೆದಾರರು ಮೌನವಾಗಿಯೇ ಮನೆ ಖಾಲಿ ಮಾಡುತ್ತಾರೆ. ಆದರೆ ಜಾರಿಯಲ್ಲಿರುವ ಕಾನೂನುಗಳ ಪ್ರಕಾರ ಮನೆ ಮಾಲೀಕರು ತಮ್ಮ ಇಷ್ಟದಂತೆ ಏಕಾಏಕಿ ಬಾಡಿಗೆ ಹೆಚ್ಚಿಸಲು ಅಥವಾ ತಕ್ಷಣ ಮನೆ ಖಾಲಿ ಮಾಡಿಸಲು ಸಾಧ್ಯವಿಲ್ಲ.

ತಕ್ಷಣ ಮನೆ ಖಾಲಿ ಮಾಡಿಸುವ ಹಕ್ಕು ಇದೆಯೇ?

ಮನೆ ಖಾಲಿ ಮಾಡುವ ಅಥವಾ ಬಾಡಿಗೆ ಹೆಚ್ಚಿಸುವ ವಿಚಾರಗಳು ರೆಂಟಲ್ ಅಗ್ರಿಮೆಂಟ್ (ಬಾಡಿಗೆ ಒಪ್ಪಂದ), ರಾಜ್ಯದ ಬಾಡಿಗೆ ಕಾನೂನುಗಳು, ನೋಟಿಸ್ ಅವಧಿ ಹಾಗೂ ಮಾಲೀಕ-ಬಾಡಿಗೆದಾರರ ನಡುವಿನ ಒಪ್ಪಂದದ ಷರತ್ತುಗಳ ಮೇಲೆ ಅವಲಂಬಿತವಾಗಿರುತ್ತವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತದಲ್ಲಿ ಜಾರಿಯಲ್ಲಿರುವ ಬಾಡಿಗೆ ನಿಯಂತ್ರಣ ಕಾನೂನುಗಳ ಪ್ರಕಾರ ಮನೆ ಮಾಲೀಕರು ಏಕಾಏಕಿ ಬಾಡಿಗೆ ಹೆಚ್ಚಿಸಲು ಅಥವಾ ಬಾಡಿಗೆದಾರರನ್ನು ತಕ್ಷಣ ಮನೆ ಖಾಲಿ ಮಾಡಿಸಲು ಸಾಧ್ಯವಿಲ್ಲ. ಬಾಡಿಗೆ ಹೆಚ್ಚಳವೂ ಪರಸ್ಪರ ಒಪ್ಪಿಗೆಯೊಂದಿಗೆ ಹಾಗೂ ಸ್ಥಳೀಯ ಕಾನೂನುಗಳಿಗೆ ಅನುಗುಣವಾಗಿ ಮಾತ್ರ ನಡೆಯಬೇಕು.

ಹಾಗೆಯೇ ಮನೆ ಖಾಲಿ ಮಾಡಿಸುವ ಸಂದರ್ಭದಲ್ಲೂ ರೆಂಟಲ್ ಅಗ್ರಿಮೆಂಟ್ ಹಾಗೂ ರಾಜ್ಯದ ಕಾನೂನುಗಳ ಪ್ರಕಾರ ನೋಟಿಸ್ ನೀಡುವುದು ಕಡ್ಡಾಯ. ನೋಟಿಸ್ ಅವಧಿ ಪೂರ್ಣಗೊಂಡ ನಂತರವೇ ಮುಂದಿನ ಕ್ರಮ ಕೈಗೊಳ್ಳಬೇಕು.

ಬಾಡಿಗೆಯನ್ನು ಏಕಾಏಕಿ ಹೆಚ್ಚಿಸಬಹುದೇ?

ಬಾಡಿಗೆ ಮನೆಗೆ ಸೇರುವಾಗ ಮಾಡಿಕೊಳ್ಳುವ ರೆಂಟಲ್ ಅಗ್ರಿಮೆಂಟ್ ಅತ್ಯಂತ ಪ್ರಮುಖ ದಾಖಲೆ. ಇದರಲ್ಲಿ ಬಾಡಿಗೆ ಮೊತ್ತ, ಭದ್ರತಾ ಠೇವಣಿ (ಸೆಕ್ಯುರಿಟಿ ಡೆಪಾಸಿಟ್), ಬಾಡಿಗೆ ಹೆಚ್ಚಳದ ನಿಯಮಗಳು ಹಾಗೂ ಇತರೆ ಷರತ್ತುಗಳು ಸ್ಪಷ್ಟವಾಗಿ ಉಲ್ಲೇಖಗೊಂಡಿರುತ್ತವೆ.

ಬಾಡಿಗೆ ಪಾವತಿಯ ರಸೀದಿಗಳು, ಬ್ಯಾಂಕ್ ವ್ಯವಹಾರಗಳ ದಾಖಲೆಗಳು ಹಾಗೂ ಮನೆ ಮಾಲೀಕರೊಂದಿಗೆ ನಡೆದ ಸಂಭಾಷಣೆಯ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಉತ್ತಮ. ಯಾವುದೇ ವಿವಾದ ಉಂಟಾದರೆ ಇವು ಸಾಕ್ಷ್ಯವಾಗಿ ಉಪಯೋಗವಾಗುತ್ತವೆ.

ಆದರೆ, ಬಾಡಿಗೆದಾರರು ಸಮಯಕ್ಕೆ ಸರಿಯಾಗಿ ಬಾಡಿಗೆ ಪಾವತಿಸದಿದ್ದರೆ, ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿದರೆ, ಆಸ್ತಿಯನ್ನು ದುರುಪಯೋಗಪಡಿಸಿಕೊಂಡರೆ ಅಥವಾ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಸಿದರೆ, ಮನೆ ಮಾಲೀಕರು ಕಾನೂನುಬದ್ಧವಾಗಿ ಮನೆ ಖಾಲಿ ಮಾಡಿಸುವ ಪ್ರಕ್ರಿಯೆ ಆರಂಭಿಸಬಹುದು. ಆದರೆ ಅದಕ್ಕೂ ಮೊದಲು ನಿಗದಿತ ವಿಧಾನದಲ್ಲಿ ನೋಟಿಸ್ ನೀಡುವುದು ಕಡ್ಡಾಯ.

ತಜ್ಞರ ಪ್ರಕಾರ, ಬಾಡಿಗೆ ಹೆಚ್ಚಳವನ್ನು ಬಾಡಿಗೆದಾರರು ಒಪ್ಪಲಿಲ್ಲ ಎಂಬ ಕಾರಣಕ್ಕೆ ಮಾತ್ರ ಮನೆ ಮಾಲೀಕರು ಅವರನ್ನು ತಕ್ಷಣ ಮನೆ ಖಾಲಿ ಮಾಡಲು ಬಲವಂತಪಡಿಸಲು ಸಾಧ್ಯವಿಲ್ಲ. ಕಾನೂನು ಹಾಗೂ ರೆಂಟಲ್ ಅಗ್ರಿಮೆಂಟ್‌ನಲ್ಲಿರುವ ನಿಯಮಗಳನ್ನು ಪಾಲಿಸಲೇಬೇಕು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular