HomeKarnatakaಬೆಂಗಳೂರಿನ ಅಕ್ರಮ ಕಟ್ಟಡಗಳ ಮಾಫಿಯಾಕ್ಕೆ ಬಿಗ್ ಶಾಕ್ ನಕ್ಷೆ ಉಲ್ಲಂಘನೆಗೆ ಸಾಥ್ ಕೊಟ್ಟ ಬಿಬಿಎಂಪಿ-ಬಿಡಿಎನ 8...

ಬೆಂಗಳೂರಿನ ಅಕ್ರಮ ಕಟ್ಟಡಗಳ ಮಾಫಿಯಾಕ್ಕೆ ಬಿಗ್ ಶಾಕ್ ನಕ್ಷೆ ಉಲ್ಲಂಘನೆಗೆ ಸಾಥ್ ಕೊಟ್ಟ ಬಿಬಿಎಂಪಿ-ಬಿಡಿಎನ 8 ಅಧಿಕಾರಿಗಳಿಗೆ ನಿವೃತ್ತ ಜಡ್ಜ್ ತನಿಖೆಯ ಉರುಳು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಕ್ಷೆ ಮಂಜೂರಾತಿ (Plan Sanction) ನಿಯಮಗಳನ್ನು ಗಾಳಿಗೆ ತೂರಿ, ಎಗ್ಗಿಲ್ಲದೆ ತಲೆ ಎತ್ತುತ್ತಿರುವ ಅನಧಿಕೃತ ಕಟ್ಟಡಗಳ ದಂಧೆಗೆ ಕೊನೆಗೂ ನಗರಾಭಿವೃದ್ಧಿ ಇಲಾಖೆ ಭರ್ಜರಿ ಬ್ರೇಕ್ ಹಾಕಿದೆ ಕಟ್ಟಡ ಮಾಲೀಕರೊಂದಿಗೆ ಕೈಜೋಡಿಸಿ ಕೋಟ್ಯಂತರ ರೂಪಾಯಿ ಲೂಟಿಗೆ ಸಹಕರಿಸಿದ ಬಿಬಿಎಂಪಿ (BBMP) ಮತ್ತು ಬಿಡಿಎ (BDA) ಅಧಿಕಾರಿಗಳ ವಿರುದ್ಧ ತನಿಖೆಯ ಉರುಳು ಸಖತ್ ಬಿಗಿಯಾಗಿದೆ.

ನಕ್ಷೆ ಉಲ್ಲಂಘನೆಗೆ ರಾಜಾರೋಷವಾಗಿ ಅನುವು ಮಾಡಿಕೊಟ್ಟಿರುವ 8 ಮಂದಿ ಪ್ರಭಾವಿ ಅಧಿಕಾರಿಗಳ ವಿರುದ್ಧ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಇಲಾಖಾ ತನಿಖೆಗೆ ಅದೇಶಿಸಿದ್ದು, ವಿಚಾರಣೆಗಾಗಿ ನಿವೃತ್ತ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶರಾದ ವೆಂಕಟೇಶ್‌ ವೋರ್ಸ್‌ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ

ಕಣ್ಣೊರೆಸುವ ತಂತ್ರಕ್ಕೆ ಬ್ರೇಕ್:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಾನಗರದ ಯಾವುದೇ ವಾರ್ಡ್‌ನಲ್ಲಿ ಅಧಿಕಾರಿಗಳ ಕಣ್ಣು ಮತ್ತು ಜೇಬು ತುಂಬಿಸದೆ ಒಂದು ಸಣ್ಣ ಇಟ್ಟಿಗೆ ಇಡಲು ಸಾಧ್ಯವಿಲ್ಲ ಎಂಬುದು ಜಗಜ್ಜಾಹೀರು. ಆದರೆ, ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟುವಾಗ ಅವು ಕುಸಿದು ಬಿದ್ದು ಅಮಾಯಕ ಕಾರ್ಮಿಕರು ಬಲಿಯಾದಾಗ ಮಾತ್ರ ಎಚ್ಚರಗೊಳ್ಳುವ ಅಧಿಕಾರಿಗಳು, ಕೇವಲ ನೋಟಿಸ್ ನೀಡಿ ಜನರ ಕಣ್ಣೊರೆಸುವ ತಂತ್ರ ಮಾಡುತ್ತಿದ್ದರು. ಆದರೆ ಈ ಬಾರಿ ಅಕ್ರಮ ಎಸಗಿದ ಅಧಿಕಾರಿಗಳ ಹೆಡೆಮುರಿ ಕಟ್ಟಲು ಸರ್ಕಾರ ಮುಂದಾಗಿದೆ.

ಜಿಬಿಎ (GBA) ಗೆ ಕೋಟಿ ಕೋಟಿ ನಷ್ಟ: ನಕ್ಷೆ ಪಡೆಯದೆ ಹಾಗೂ ಸೆಟ್‌ಬ್ಯಾಕ್‌ ಬಿಡದೆ ಕಿಷ್ಕಿಂಧೆಯಂತಹ ರಸ್ತೆಗಳಲ್ಲಿ 4-5 ಅಂತಸ್ತಿನ ಬಿಲ್ಡಿಂಗ್ ಕಟ್ಟುತ್ತಿರುವುದರಿಂದ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯ ನಗರ ಪಾಲಿಕೆಗಳಿಗೆ ಕೋಟ್ಯಂತರ ರೂ. ಆದಾಯ ಖೋತಾ ಆಗುತ್ತಿದೆ. ಜೊತೆಗೆ ಗಾಳಿ-ಬೆಳಕಿಲ್ಲದೆ, ಅಗ್ನಿ ಅವಘಡ ಸಂಭವಿಸಿದರೆ ಅಗ್ನಿಶಾಮಕ ವಾಹನಗಳೂ ಒಳಗೆ ಹೋಗಲಾರದಷ್ಟು ಭೀಕರ ಪರಿಸ್ಥಿತಿ ಸೃಷ್ಟಿಯಾಗಿದೆ. ಪ್ರತಿ ವರ್ಷ ಆಡಿಟ್ ರಿಪೋರ್ಟ್‌ನಲ್ಲಿ ನಗರ ಯೋಜನೆ (Town Planning) ವಿಭಾಗದ್ದೇ ಸಿಂಹಪಾಲು ಹಗರಣಗಳು ಬೆಳಕಿಗೆ ಬರುತ್ತಿವೆ.

ಯಾವೆಲ್ಲಾ ಸ್ವತ್ತುಗಳಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ:

ಬಿಳೇಕಹಳ್ಳಿ ಗ್ರಾಮ: ಖಾತಾ ಸಂಖ್ಯೆ 3604/50/1.50/2.52/1.58.59/1 ಮತ್ತು 61/1 ‘ಎ’ ಸ್ವತ್ತಿನಲ್ಲಿ ನಕ್ಷೆಗೆ ವ್ಯತಿರಿಕ್ತವಾಗಿ ಕಟ್ಟಡ ನಿರ್ಮಾಣಕ್ಕೆ ಸಾಥ್.

ಬೇಗೂರು ಹೋಬಳಿ (ನ್ಯಾನಪ್ಪನಹಳ್ಳಿ): ಸರ್ವೆ ನಂ. 10/3 ರಲ್ಲಿ ಕೆ.ಜೆ.ವೀವನ್‌ ಎಂಬ ಭೂ ಮಾಲೀಕನಿಗೆ ನಕ್ಷೆ ಉಲ್ಲಂಘಿಸಿ ಬಿಲ್ಡಿಂಗ್ ಕಟ್ಟಲು ಮಂಜೂರಾತಿ ನೀಡಿ ಕರ್ತವ್ಯ ಲೋಪ ಎಸಗಿರುವುದು ಪಕ್ಕಾ ಸಾಬೀತಾಗಿದೆ.

ಅಂತಿಮ ನೋಟಿಸ್ ಜಾರಿ: ಜುಲೈ 9ಕ್ಕೆ ವಿಚಾರಣೆ ಫಿಕ್ಸ್

ಅಕ್ರಮಕ್ಕೆ ಹಸಿರು ನಿಶಾನೆ ತೋರಿದ ಒಟ್ಟು 8 ಮಂದಿ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಡೆಡ್‌ಲೈನ್ ನೋಟಿಸ್ ನೀಡಲಾಗಿದೆ. ಇದರಲ್ಲಿ 5 ಮಂದಿ ಅಧಿಕಾರಿಗಳು ಈಗಾಗಲೇ ಸೇವೆಯಿಂದ ನಿವೃತ್ತರಾಗಿದ್ದರೂ ಕಾನೂನಿನ ಉರುಳಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ!

ವಿಚಾರಣೆಯ ಕಂಪ್ಲೀಟ್ ಡೀಟೇಲ್ಸ್: ಆರೋಪಿತ ಅಧಿಕಾರಿಗಳು ಜುಲೈ 9ರಂದು ಬೆಳಗ್ಗೆ 11.30 ಗಂಟೆಗೆ ಜಿಬಿಎ ಕೌನ್ಸಿಲ್‌ ಕಟ್ಟಡದ 1ನೇ ಮಹಡಿಯಲ್ಲಿ ವಿಚಾರಣಾಧಿಕಾರಿಗಳ ಮುಂದೆ ಕಡ್ಡಾಯವಾಗಿ ಹಾಜರಾಗಬೇಕು. ಒಂದು ವೇಳೆ ಗೈರಾದರೆ ಕಾನೂನು ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.

ತನಿಖೆ ಎದುರಿಸಲಿರುವ ಆ 8 ಅಧಿಕಾರಿಗಳ ಕಪ್ಪು ಪಟ್ಟಿ

ಎಂ.ಎನ್‌.ಶಂಕರ್‌ ಭಟ್‌ – ಕಾನೂನು ಅಧಿಕಾರಿ (ನಿವೃತ್ತ), ಬಿಡಿಎ

ಡಿ.ಸತ್ಯನಾರಾಯಣ – ಇಎಂ (ನಿವೃತ್ತ), ಬಿಡಿಎ

ಜೆ.ಜೆ.ನಾಯಕ್‌ – ಟಿಪಿಎಂ (ನಿವೃತ್ತ), ಬಿಡಿಎ

* ಬಿ.ಟಿ.ಮೋಹನ್‌ ಕೃಷ್ಣ, ಇಇ (ನಿವೃತ್ತ) –ಬಿಬಿಎಂಪಿ

ಎಸ್‌.ಸಿ.ಕರಿಗೌಡ – ಟಿಪಿಎಂ (ನಿವೃತ್ತ), ಬಿಡಿಎ

ಮೊಹಮ್ಮದ್‌ ಅಬ್ದುಲ್‌ ಅಜೀಮ್‌ – ಎಇಇ

ಗುರುಮೂರ್ತಿ – ಎಇಇ, ಪಿಡಬ್ಲ್ಯೂಡಿ (PWD)

ಮೃತ್ಯುಂಜಯ – ಅಧೀಕ್ಷಕ ಎಂಜಿನಿಯರ್‌, ಪಿಡಬ್ಲ್ಯೂಡಿ (PWD)

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular