HomeLatest Newsನೆಹರು ಮೀರಿಸಿ ಅತಿಹೆಚ್ಚು ದಿನಗಳ ಕಾಲ ಪ್ರಧಾನಿಯಾಗಿ ಅಧಿಕಾರ ನಡೆಸಿ ದಾಖಲೆ ಬರೆದ ಮೋದಿಗೆ ಇದೊಂದು...

ನೆಹರು ಮೀರಿಸಿ ಅತಿಹೆಚ್ಚು ದಿನಗಳ ಕಾಲ ಪ್ರಧಾನಿಯಾಗಿ ಅಧಿಕಾರ ನಡೆಸಿ ದಾಖಲೆ ಬರೆದ ಮೋದಿಗೆ ಇದೊಂದು ಕೆಲಸ ಮಾಡುವ ಧೈರ್ಯ ಬರಲೇ ಇಲ್ಲ!

ನಿನ್ನೆ ( ಜೂನ್ 10 ) ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತದ ಅತ್ಯಂತ ದೀರ್ಘಾವಧಿಯ ಚುನಾಯಿತ ಪ್ರಧಾನಿ ಎಂಬ ದಾಖಲೆಯನ್ನು ಬರೆದರು. ಪ್ರಧಾನಿ ಮೋದಿ 4,399 ದಿನಗಳ ಅಧಿಕಾರ ನಡೆಸಿ ಈ ಹಿಂದೆ 4,398 ದಿನಗಳ ಕಾಲ ಪ್ರಧಾನಮಂತ್ರಿಯಾಗಿ ಅಧಿಕಾರ ನಡೆಸಿದ್ದ ಜವಹರಲಾಲ್ ನೆಹರು ಅವರನ್ನು ಹಿಂದಿಕ್ಕಿ ಈ ದಾಖಲೆ ಬರೆದಿದ್ದಾರೆ.

ಹೀಗೆ ಮೋದಿ ಮಾಡಿದ ಈ ಮಹಾ ಸಾಧನೆಗೆ ಬಿಜೆಪಿ ನಾಯಕರು ಸಿಹಿ ಹಂಚಿ ಸಂಭ್ರಮಿಸಿ, ಹಲವೆಡೆ ವಿಶೇಷ ಪೂಜೆ ಸಲ್ಲಿಸಿದರೆ, ಮೋದಿ ಆಡಳಿತ ಒಪ್ಪದ ಮಂದಿ ಆ ವಿಶೇಷ ದಿನದಂದೂ ಸಹ ಮೋದಿ ವಿರುದ್ಧ ಟ್ರೋಲ್ ಬಾಣ ಬಿಟ್ಟಿದ್ದಾರೆ.

ಮೋದಿ ಏನೇ ಮಾಡಿದರೂ ಮೆಚ್ಚುಗೆಯಷ್ಟೇ ಟ್ರೋಲ್‌ಗಳೂ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದುಬರಲಿದ್ದು, ನಿನ್ನೆ ಸಹ ಮೋದಿ ವಿರುದ್ಧ ಟೀಕೆಗಳು ದೊಡ್ಡ ಸಂಖ್ಯೆಯಲ್ಲೇ ವ್ಯಕ್ತವಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಚಾಗಿ ಒಂದೇ ಒಂದು ಪತ್ರಿಕಾಗೋಷ್ಟಿಯನ್ನೂ ಸಹ ನಡೆಸದೇ ಇಷ್ಟು ದಿನಗಳ ಕಾಲ ಆಡಳಿತ ನಡೆಸಿದ ಏಕೈಕ ಪ್ರಧಾನಮಂತ್ರಿ ಎಂದರೆ ಅದು ನರೇಂದ್ರ ಮೋದಿ ಎಂದು ಕಾಲೆಳೆದಿದ್ದಾರೆ.

ಹೌದು, ಮೋದಿ ಪ್ರಧಾನಿಯಾದಾಗಿನಿಂದ ಈ ಹಿಂದಿನ ಪ್ರಧಾನ ಮಂತ್ರಿಗಳು ನಡೆಸುತ್ತಿದ್ದ ಹಾಗೆ ಒಂದೇ ಒಂದು ಬಾರಿಯೂ ಪತ್ರಿಕಾಗೋಷ್ಟಿ ನಡೆಸಿಲ್ಲ. ಇದನ್ನೇ ಅಸ್ತ್ರವಾಗಿಸಿಕೊಂಡ ಮೋದಿ ವಿರೋಧಿಗಳು ಮೋದಿಗೆ ಮಾಧ್ಯಮಗಳು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುವ ಧೈರ್ಯವಿಲ್ಲ, ಹಾಗಾಗಿಯೇ ಹೆದರಿ ಪತ್ರಿಕಾಗೋಷ್ಟಿಗಳಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಅಲ್ಲದೇ ಅತಿಹೆಚ್ಚು ದಿನ ಅಧಿಕಾರ ನಡೆಸಿದ ನಿಮ್ಮ ಪ್ರಧಾನಮಂತ್ರಿ ಮೊದಲ ಪತ್ರಿಕಾಗೋಷ್ಟಿಯನ್ನು ಯಾವಾಗ ನಡೆಸಲಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular