HomeEntertainmentರಶ್ಮಿಕಾ ಮಂದಣ್ಣ ಹೆಸರಿನ ವಿಶೇಷ ಪೆಂಡೆಂಟ್ ಧರಿಸಿ ವಿಮಾನ ನಿಲ್ದಾಣದಲ್ಲಿ ಮಿಂಚಿದ ನಟ ವಿಜಯ್ ದೇವರಕೊಂಡ

ರಶ್ಮಿಕಾ ಮಂದಣ್ಣ ಹೆಸರಿನ ವಿಶೇಷ ಪೆಂಡೆಂಟ್ ಧರಿಸಿ ವಿಮಾನ ನಿಲ್ದಾಣದಲ್ಲಿ ಮಿಂಚಿದ ನಟ ವಿಜಯ್ ದೇವರಕೊಂಡ

ತೆಲುಗು ಚಿತ್ರರಂಗದ ಸ್ಟಾರ್ ಜೋಡಿಯಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯ ನಂತರವೂ ಸದಾ ಸುದ್ದಿಯಲ್ಲಿರುತ್ತಾರೆ. ಈ ವರ್ಷದ ಫೆಬ್ರವರಿಯಲ್ಲಿ ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದ ಈ ದಂಪತಿ, ಇತ್ತೀಚೆಗೆ ಒಟ್ಟಿಗೆ ವಿಮಾನ ನಿಲ್ದಾಣದಿಂದ ಹೊರಬರುವಾಗ ಕ್ಯಾಮೆರಾ ಕಣ್ಣುಗಳಿಗೆ ಸಿಲುಕಿದ್ದಾರೆ. ಈ ಸಂದರ್ಭದಲ್ಲಿ ನಟ ವಿಜಯ್ ದೇವರಕೊಂಡ ಧರಿಸಿದ್ದ ವಿಶೇಷ ಚೈನ್ ಮತ್ತು ಪೆಂಡೆಂಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸಾಮಾನ್ಯ ಉಡುಪಿನಲ್ಲಿ ಕಾಣಿಸಿಕೊಂಡಿದ್ದ ವಿಜಯ್ ಅವರ ಕುತ್ತಿಗೆಯಲ್ಲಿದ್ದ ಚೈನ್‌ನಲ್ಲಿ ಇಂಗ್ಲಿಷ್ ಅಕ್ಷರ ಆರ್ (R) ಇರುವ ಪೆಂಡೆಂಟ್ ಇರುವುದು ಅಭಿಮಾನಿಗಳ ಗಮನ ಸೆಳೆದಿದೆ. ಈ ಆರ್ ಅಕ್ಷರವು ಅವರ ಪತ್ನಿ ರಶ್ಮಿಕಾ ಮಂದಣ್ಣ ಅವರ ಹೆಸರನ್ನು ಸೂಚಿಸುತ್ತದೆ ಎಂದು ನೆಟ್ಟಿಗರು ಊಹಿಸಿದ್ದಾರೆ. ಹೆಂಡತಿಯ ಮೇಲಿನ ಪ್ರೀತಿಯನ್ನು ತೋರ್ಪಡಿಸಲು ವಿಜಯ್ ಈ ರೀತಿ ಮಾಡಿದ್ದಾರೆ ಎಂದು ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಂತಸ ವ್ಯಕ್ತಪಡಿಸುತ್ತಿದ್ದು, ಕೆಲವರಂತೂ ಇದನ್ನು ತಮಾಷೆಯಾಗಿ ವಿಜಯ್ ದೇವರಕೊಂಡ ಅವರ ಮಂಗಲಸೂತ್ರ ಎಂದು ಕರೆಯುತ್ತಿದ್ದಾರೆ.

ಗೀತಾ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ಈ ಜೋಡಿ, ಇದೀಗ ಮದುವೆಯ ನಂತರ ಮೊದಲ ಬಾರಿಗೆ ರಣಬಾಲಿ ಎಂಬ ಹೊಸ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದೆ. ಕಾಕತಾಳೀಯ ಎಂದರೆ ವಿಜಯ್ ಕುತ್ತಿಗೆಯಲ್ಲಿರುವ ಆರ್ ಪೆಂಡೆಂಟ್ ಅವರ ಮುಂಬರುವ ಚಿತ್ರದ ಹೆಸರಿಗೂ ಹೊಂದಿಕೆಯಾಗುತ್ತಿರುವುದರಿಂದ, ಇದು ಸಿನಿಮಾದ ಪ್ರಚಾರದ ಭಾಗವೂ ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ರಾಹುಲ್ ಸಂಕೃತ್ಯನ್ ನಿರ್ದೇಶನದ ಈ ಐತಿಹಾಸಿಕ ಹಿನ್ನೆಲೆಯುಳ್ಳ ಸಿನಿಮಾ ಇದೇ ಸೆಪ್ಟೆಂಬರ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular