ನವದೆಹಲಿ: ಕಾಂಗೋ, ಉಗಾಂಡಾ, ದಕ್ಷಿಣ ಸುಡಾನ್ ಸೇರಿದಂತೆ ಆಫ್ರಿಕಾ ಖಂಡ ರಾಷ್ಟ್ರಗಳಲ್ಲಿ ಮಹಾಮಾರಿ ಎಬೋಲಾ ವೈರಸ್ ಹೆಚ್ಚುತ್ತಿರುವುದರಿಂದ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಭಾರತದಲ್ಲಿಯೂ ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಿದೆ. ದೇಶದವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಪ್ರಯಾಣಿಕರ ತಪಾಸಣೆಗೆ ಕೇಂದ್ರ ಆರೋಗ್ಯ ಸಚಿವಾಲಯ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಪ್ರಯಾಣಿಕರ ಸುರಕ್ಷತೆ ಹಾಗೂ ಅಂತಾರಾಷ್ಟ್ರೀಯ ಆರೋಗ್ಯ ನಿಯಮಾವಳಿಗಳ ಹಿತದೃಷ್ಟಿಯಿಂದ ಆರೋಗ್ಯ ತಪಾಸಣೆ ಮತ್ತು ಸಾರ್ವಜನಿಕ ಆರೋಗ್ಯ ಕ್ರಮಗಳಿಗೆ ಸಹಕರಿಸಿ ಎಂದು ತಿಳಿಸಲಾಗಿದೆ
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಉಗಾಂಡಾ ಹಾಗೂ ದಕ್ಷಿಣ ಸೂಡಾನ್ನಿಂದ ಭಾರತಕ್ಕೆ ಬರುವ ಅಥವಾ ಆ ದೇಶಗಳ ಮೂಲಕ ಪ್ರಯಾಣಿಸುವವರು ಜ್ವರ, ದೌರ್ಬಲ್ಯ, ತಲೆನೋವು, ಸ್ನಾಯು ನೋವು, ವಾಂತಿ, ಅತಿಸಾರ, ಗಂಟಲು ನೋವು ಹಾಗೂ ಅಸ್ಪಷ್ಟ ರಕ್ತಸ್ರಾವದಂತಹ ಲಕ್ಷಣಗಳು ಕಂಡುಬಂದರೆ ತಪಾಸಣೆಗೂ ಮುನ್ನ ವಿಮಾನ ನಿಲ್ದಾಣದ ಆರೋಗ್ಯಾಧಿಕಾರಿ ಅಥವಾ ಆರೋಗ್ಯ ಡೆಸ್ಕ್ ಅನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಎಬೋಲಾ ಸೋಂಕು ದೃಢಪಟ್ಟ ಅಥವಾ ಶಂಕಿತ ವ್ಯಕ್ತಿಯ ರಕ್ತ ಅಥವಾ ದೇಹದ ದ್ರವಗಳ ಸಂಪರ್ಕಕ್ಕೆ ಬಂದಿರುವ ಇತಿಹಾಸವಿರುವವರೂ ವಿಮಾನ ನಿಲ್ದಾಣದ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಸೂಚಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಸ್ತುತ ಭಾರತದಲ್ಲಿ ಯಾವುದೇ ಎಬೋಲಾ ಪ್ರಕರಣಗಳು ದಾಖಲಾಗಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಈ ಮಧ್ಯೆ ದೆಹಲಿಯಲ್ಲಿ ನಡೆಯಬೇಕಾಗಿದ್ದ ಭಾರತ-ಆಫ್ರಿಕಾ ಒಕ್ಕೂಟದ ಶೃಂಗಸಭೆಯನ್ನೂ ಮುಂದೂಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಶೃಂಗಸಭೆಯನ್ನು ಮುಂದೂಡಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ರಾಜ್ಯ ಆರೋಗ್ಯ ಇಲಾಖೆಗೆ ಮಹತ್ವದ ಸೂಚನೆ:
- ಕ್ವಾರಂಟೈನ್ ಸೆಂಟರ್ ಗುರುತು ಮಾಡಿ
- ಐಸೂಲೇಷನ್ ಸೌಲಭ್ಯ ಇರುವ ಕ್ವಾರಂಟೈನ್ ಸೆಂಟರ್
- ಹೆಲ್ತ್ ಸ್ಕ್ರೀನಿಂಗ್ ಗೆ ಸಿಬ್ಬಂದಿಯನ್ನ ಹೆಚ್ಚಳ ಮಾಡಿಕೊಳ್ಳಿ
- ಶಂಕಿತ ಕೇಸ್ ಗಳಿದ್ದರೆ ಆಸ್ಪತ್ರೆಗೆ ರವಾನಿಸಲು ಅಂಬುಲೆನ್ಸ್ ನಿಯೋಜಿಸಿ
- ಎಬೋಲಾ ಚಿಕಿತ್ಸೆ ಬಗ್ಗೆ ಹೆಲ್ತ್ ವರ್ಕರ್ಸ್ ಅರಿವು ಮೂಡಿಸುವಂತೆ ಸೂಚನೆ
ಏರ್ಪೋರ್ಟ್ಗಳಿಗೆ ಮಾರ್ಗಸೂಚಿ ಪ್ರಕಟ:
- ತ್ರಿಬಲ್ ಲೇಯರ್ ಮಾಸ್ಕ್ ಕಡ್ಡಾಯ
- ಹ್ಯಾಂಡ್ ಗ್ಲೌಸ್ ಹಾಕಬೇಕು
- ಸ್ಯಾನಿಟೇಸರ್ ಅನ್ನು ಇಟ್ಟಿಕೊಳ್ಳಬೇಕು
- ಎಬೋಲಾ ಶಂಕಿತ ಕೇಸ್ ಪತ್ತೆ ಆದರೆಕೂಡಲೇ ರಿಪೋರ್ಟ್ ಮಾಡಬೇಕು
- ಪ್ರಯಾಣಿಕರ ಟ್ರಾವೆಲ್ ಹಿಸ್ಟರಿ ದಾಖಲು ಮಾಡಿಕೊಳ್ಳಬೇಕು
- ಸೆಲ್ಪ್ ಡಿಕ್ಲರೇಷನ್ ಫಾರ್ಮ್ ಬರೆದುಕೊಡಬೇಕು
- ಎಬೋಲಾ ಬಾಧಿತ ದೇಶಗಳಿಂದ ಬಂದರ ಡಿಟೇಲ್ಸ್ ಜೊತೆಗೆ ಸೆಲ್ಪ್ ಡಿಕ್ಲರೇ ಕಡ್ಡಾಯ
ಎಬೋಲಾ ಸೋಂಕಿತ ವ್ಯಕ್ತಿಗೆ ಐಸೋಲೇಷನ್:
- ಸೋಂಕಿತ ವ್ಯಕ್ತಿಯನ್ನು ಪ್ರತ್ಯೇಕ ಕೊಠಡಿಯಲ್ಲಿ ಐಸೂಲೇಟ್ ಮಾಡಬೇಕು
- ಬಾತ್ ರೂಮ್ ಇರುವ ಕೊಠಡಿಯಲ್ಲಿ ಐಸೂಲೇಟ್ ಮಾಡಬೇಕು
- ಕೊಠಡಿ ಪ್ರವೇಶಕ್ಕೆ ಪಿಪಿಇ ಕಿಟ್ ಕಡ್ಡಾಯವಾಗಿ ಧರಿಸಬೇಕು
- ಪ್ರತಿ 2 ಗಂಟೆಗೆ ಒಮ್ಮೆ ಆಕ್ಸಿಜನ್ ರಕ್ತದ ಆಮ್ಲಜನಕ ಪರೀಕ್ಷಿಸಬೇಕು
- 2 ಗಂಟೆಗೆ ಒಮ್ಮೆ ಕಾರ್ಡಿಯಾಕ್ ಟೆಸ್ಟ್ ಆಗಬೇಕು
ಹೈ-ರಿಸ್ಕ್ ದೇಶದಿಂದ ಬಂದವರಿಗೆ ಸೂಚನೆ:
- ಹೈ-ರಿಸ್ಕ್ ದೇಶದಿಂದ ಬಂದು 21 ದಿನಗಳಲ್ಲಿ ರೋಗಲಕ್ಷಣ ಕಾಣಿಸಿಕೊಂಡರೆ ತಿಳಿಸಬೇಕು
- ಯಾವುದೇ ರೋಗ ಲಕ್ಷಣ ಕಾಣಿಸಿಕೊಂಡರೂ ಆರೋಗ್ಯ ಇಲಾಖೆ ಅಧಿಕಾರಿಗಳು ಅಥವಾ ವೈದ್ಯರಿಗೆ ತಿಳಿಸಬೇಕು
- ಪ್ರಯಾಣದ ಹಿನ್ನೆಲೆ ಕಡ್ಡಾಯವಾಗಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನೀಡಬೇಕು
- ವಿಮಾನ ನಿಲ್ದಾಣ ತಪಾಸಣೆ ನಂತರ ರೋಗ ಲಕ್ಷಣ ಕಾಣಿಸಿಕೊಂಡರೆ ಟೆಸ್ಟ್ ಕಡ್ಡಾಯವಾಗಿ ಮಾಡಿಸಬೇಕು

