HomeEntertainmentಜಾಗತಿಕ ವೇದಿಕೆಯಲ್ಲಿ ಸದ್ದು ಮಾಡ್ತಿದೆ ಭಾರತೀಯ ದುಪಟ್ಟಾ ಶೈಲಿ: ಬ್ಲೂ ಚಿಫಾನ್ ಸೀರೆಯಲ್ಲಿ ಮೈಮನ ಸೆಳೆದ...

ಜಾಗತಿಕ ವೇದಿಕೆಯಲ್ಲಿ ಸದ್ದು ಮಾಡ್ತಿದೆ ಭಾರತೀಯ ದುಪಟ್ಟಾ ಶೈಲಿ: ಬ್ಲೂ ಚಿಫಾನ್ ಸೀರೆಯಲ್ಲಿ ಮೈಮನ ಸೆಳೆದ ಜಾನ್ವಿ ಕಪೂರ್

ಫ್ಯಾಶನ್ ಜಗತ್ತಿನಲ್ಲಿ ಟ್ರೆಂಡ್‌ಗಳು ಬದಲಾಗುತ್ತಿರುತ್ತವೆ. ಆದರೆ ಕೆಲವು ಸಾಂಪ್ರದಾಯಿಕ ಶೈಲಿಗಳು ಹೊಸ ರೂಪದಲ್ಲಿ ಮರಳಿ ಬಂದಾಗ ಸೃಷ್ಟಿಸುವ ಸಂಚಲನವೇ ಬೇರೆ. ಪ್ರಸ್ತುತ ಭಾರತೀಯ ಸಂಸ್ಕೃತಿಯ ಹೆಮ್ಮೆಯ ‘ದುಪಟ್ಟಾ’ ಜಾಗತಿಕ ಮಟ್ಟದಲ್ಲಿ ಭಾರಿ ಸೌಂಡ್ ಮಾಡುತ್ತಿದೆ. ಕೇವಲ ಭಾರತದಲ್ಲಷ್ಟೇ ಅಲ್ಲದೆ ಹೈಲಿ ಬೈಬರ್, ಕೆಂಡಲ್ ಜೆನ್ನರ್ ಅವರಂತಹ ಅಂತರರಾಷ್ಟ್ರಿಯ ಸೆಲೆಬ್ರಿಟಿಗಳು ಕೂಡ ವೆಸ್ಟರ್ನ್ ಉಡುಪುಗಳ ಜೊತೆ ದುಪಟ್ಟಾ ಶೈಲಿಯನ್ನು ಅಪ್ಪಿಕೊಳ್ಳುತ್ತಿದ್ದಾರೆ. ಈಗ ಬಾಲಿವುಡ್ ಸುಂದರಿ ಜಾನ್ವಿ ಕಪೂರ್ ಕೂಡ ಇದೇ ಟ್ರೆಂಡ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಬುಧವಾರ ನಡೆದ ತಮ್ಮ ಮುಂಬರುವ ಬಹುನಿರೀಕ್ಷಿತ ‘ಪೆದ್ದಿ’ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಜಾನ್ವಿ ಕಪೂರ್ ವಿಶಿಷ್ಟ ದುಪಟ್ಟಾ ಶೈಲಿಯ ಸೀರೆಯುಟ್ಟು ಮಿಂಚಿದ್ದಾರೆ.

ಮನ ಸೆಳೆದ ನೀಲಿ ಬಣ್ಣದ ಚಿಫಾನ್ ಸೀರೆ ಟಾಲಿವುಡ್ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ ‘ಪೆದ್ದಿ’ ಚಿತ್ರದ ಕಾರ್ಯಕ್ರಮಕ್ಕಾಗಿ ಜಾನ್ವಿ ಕಪೂರ್ ಪ್ರಸಿದ್ಧ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಶಾಂತ ನೀಲಿ ಬಣ್ಣದ ಫ್ರೆಂಚ್ ಚಿಫಾನ್ ಸೀರೆಯನ್ನು ಆಯ್ದುಕೊಂಡಿದ್ದರು. ಇದಕ್ಕೆ ಮ್ಯಾಚ್ ಆಗುವಂತೆ ಅವರು ಧರಿಸಿದ್ದ ಹ್ಯಾಂಡ್ ಪೇಂಟೆಡ್ ಟೆಕ್ಸ್ಚರ್ಡ್ ಬ್ಯಾಂಡೋ ಬ್ಲೌಸ್ ಅವರ ಲುಕ್‌ಗೆ ರಾಯಲ್ ಟಚ್ ನೀಡಿತ್ತು. ಒನ್ ಶೋಲ್ಡರ್ ಶೈಲಿಯ ಸೀರೆ ಉಡುವ ವಿಧಾನ ಜಾನ್ವಿ ಅವರ ಅಂದವನ್ನು ಮತ್ತಷ್ಟು ಹೆಚ್ಚಿಸಿತ್ತು.

ಗ್ಲೋಬಲ್ ಟ್ರೆಂಡ್ ಆದ ದುಪಟ್ಟಾ ಟ್ವಿಸ್ಟ್ ಈ ಇಡೀ ಉಡುಪಿನ ಪ್ರಮುಖ ಆಕರ್ಷಣೆಯಾಗಿದ್ದುದು ಸೀರೆಗೆ ಮ್ಯಾಚ್ ಆಗುವಂತೆ ಕತ್ತಿನ ಸುತ್ತ ಧರಿಸಿ ಹಿಂಭಾಗದಲ್ಲಿ ಹರಡಿಕೊಂಡಿದ್ದ ಟಾಸೆಲ್ಸ್ ಹೊಂದಿದ ದುಪಟ್ಟಾ. ಪ್ರಸ್ತುತ ಅಂತರರಾಷ್ಟ್ರಿಯ ರೆಡ್ ಕಾರ್ಪೆಟ್‌ಗಳಲ್ಲಿ ಸಖತ್ ಟ್ರೆಂಡ್ ಆಗಿರುವ ಸ್ಕಾರ್ಫ್ ಮಾದರಿಯ ದುಪಟ್ಟಾ ಧರಿಸುವ ಶೈಲಿಯನ್ನು ಜಾನ್ವಿ ಇಲ್ಲಿ ಅತ್ಯಂತ ಸುಂದರವಾಗಿ ಪ್ರದರ್ಶಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಡಿಸೈನರ್ ಮನೀಶ್ ಮಲ್ಹೋತ್ರಾ, ಭಾರತೀಯ ದುಪಟ್ಟಾದಿಂದ ಪ್ರೇರಿತವಾಗಿರುವ ಈ ವಿಶಿಷ್ಟ ಶೈಲಿಯೇ ಪ್ರಸಕ್ತ ಸಾಲಿನ ಜಾಗತಿಕ ಫ್ಯಾಶನ್ ವರ್ಷದ ಟ್ರೆಂಡ್ ಆಗಿದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇತ್ತೀಚೆಗಷ್ಟೇ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಆಲಿಯಾ ಭಟ್ ತಮ್ಮ ಗೌನ್ ಜೊತೆ ದುಪಟ್ಟಾ ಧರಿಸಿ ಮಿಂಚಿದ್ದರು. ಮೆಟ್ ಗಾಲಾ ಕಾರ್ಯಕ್ರಮದಲ್ಲೂ ಜಾಗತಿಕ ತಾರೆಯರು ಈ ಶೈಲಿಯನ್ನು ಕಾಪಿ ಮಾಡಿದ್ದರು. ಸದ್ಯ ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ಜೋಡಿಯ ‘ಪೆದ್ದಿ’ ಚಿತ್ರದ ಟ್ರೈಲರ್ ಲಾಂಚ್‌ನಲ್ಲಿ ಜಾನ್ವಿ ಅವರ ಈ ಫ್ಯಾಶನ್ ಮಂತ್ರ ಸೋಷಿಯಲ್… ಮೀಡಿಯಾದಲ್ಲಿ ಹೊಸ ಸಂಚಲನ ಮೂಡಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular