HomeUncategorizedಭಾರತದ ಸೈನಿಕರ ಚಲನವಲನಗಳ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ISI ನಡೆಸುತ್ತಿದ್ದ ಹೈಟೆಕ್ ಬೇಹುಗಾರಿಕೆ ಜಾಲ ಭೇದಿಸಿದ...

ಭಾರತದ ಸೈನಿಕರ ಚಲನವಲನಗಳ ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ISI ನಡೆಸುತ್ತಿದ್ದ ಹೈಟೆಕ್ ಬೇಹುಗಾರಿಕೆ ಜಾಲ ಭೇದಿಸಿದ ಪಂಜಾಬ್ ಪೊಲೀಸರು: ಓರ್ವ ಅರೆಸ್ಟ್​

ಪಠಾಣ್ ಕೋಟ್: ಪಾಕಿಸ್ತಾನದ ಗುಪ್ತಚರ ಸಂಸ್ಥೆ (ISI) ನಡೆಸುತ್ತಿದ್ದ ಹೈಟೆಕ್ ಬೇಹುಗಾರಿಕೆ ಜಾಲವನ್ನು ಪಂಜಾಬ್ ಪೊಲೀಸರು ಭೇದಿಸಿದ್ದಾರೆ. ಭಾರತೀಯ ಸೇನೆ ಮತ್ತು ಅರೆಸೈನಿಕ ಪಡೆಗಳ ರಹಸ್ಯ ಚಲನವಲನಗಳ ಬಗ್ಗೆ ಪಾಕಿಸ್ತಾನಕ್ಕೆ ಮಾಹಿತಿ ನೀಡುತ್ತಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಲ್ಜಿತ್ ಸಿಂಗ್ ಅಲಿಯಾಸ್ ಬಿಟ್ಟು ಬಂಧಿತ ಆರೋಪಿ. ಪಠಾಣ್‌ಕೋಟ್ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಚಕ್ ಧಾರಿವಾಲ್ ಗ್ರಾಮದ ನಿವಾಸಿಯಾದ ಬಲ್ಜಿತ್ ಸಿಂಗ್, ರಾಷ್ಟ್ರೀಯ ಹೆದ್ದಾರಿ-44ರ ಪಠಾಣ್‌ಕೋಟ್-ಜಮ್ಮು ರಸ್ತೆಯ ಸೇತುವೆಯ ಬಳಿಯ ಅಂಗಡಿಯೊಂದರಲ್ಲಿ ಇಂಟರ್ನೆಟ್ ಆಧಾರಿತ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹೆದ್ದಾರಿಯಲ್ಲಿ ಹಾದುಹೋಗುವ ಸೇನೆ ಮತ್ತು ಅರೆಸೈನಿಕ ಪಡೆಗಳ ಚಲನವಲನಗಳನ್ನು ಲೈವ್ ಆಗಿ ಮೇಲ್ವಿಚಾರಣೆ ಮಾಡಿ, ಮಾಹಿತಿಯನ್ನು ಪಾಕಿಸ್ತಾನ ಮತ್ತು ವಿದೇಶಿ ಏಜೆಂಟ್‌ಗಳಿಗೆ ಎಲೆಕ್ಟ್ರಾನಿಕ್ ರೂಪದಲ್ಲಿ ಕಳುಹಿಸುತ್ತಿದ್ದ.

ಈ ಕೆಲಸಕ್ಕಾಗಿ ದುಬೈನಲ್ಲಿರುವ ಅಪರಿಚಿತ ವ್ಯಕ್ತಿಯಿಂದ ಈತನಿಗೆ ನಿರ್ದೇಶನಗಳು ಬರುತ್ತಿದ್ದವು ಮತ್ತು ಅದಕ್ಕಾಗಿ 40,000 ರೂ. ಹಣವನ್ನೂ ನೀಡಲಾಗಿತ್ತು. ಸದ್ಯ ಪೊಲೀಸರು ಈತನಿಂದ ಕ್ಯಾಮೆರಾ ಮತ್ತು ವೈಫೈ ರೂಟರ್ ವಶಪಡಿಸಿಕೊಂಡಿದ್ದು, ಜಾಲದಲ್ಲಿದ್ದ ಉಳಿದ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈ ಮೊದಲು ಪಂಜಾಬ್ ಪೊಲೀಸರು ಜಲಂಧರ್ ಮತ್ತು ಕಪುರ್ತಲಾದಲ್ಲಿ ಇಂತದೇ ಎರಡು ಪ್ರಮುಖ ಬೇಹುಗಾರಿಕೆ ಜಾಲಗಳನ್ನು ಧ್ವಂಸಗೊಳಿಸಿದ್ದರು. ಪಾಕಿಸ್ತಾನದ ಹ್ಯಾಂಡ್ಲರ್‌ಗಳು ಮಿಲಿಟರಿ ನೆಲೆಗಳ ಬಳಿ ಕಣ್ಣಿಡಲು ಅತ್ಯಾಧುನಿಕ, ಚೀನಾ ನಿರ್ಮಿತ ಮತ್ತು ಸೌರಶಕ್ತಿ ಚಾಲಿತ ಸಿಸಿಟಿವಿ ಕ್ಯಾಮೆರಾಗಳನ್ನು ಬಳಸುತ್ತಿದ್ದರು. ಈ ಹೈಟೆಕ್ ಕ್ಯಾಮೆರಾಗಳಿಗೆ ಯಾವುದೇ ವೈರಿಂಗ್ ಅಗತ್ಯವಿರಲಿಲ್ಲ. ಇವು 4G ಸಿಮ್ ಕಾರ್ಡ್ ಮತ್ತು ಸೋಲಾರ್ ಪ್ಲೇಟ್ ಸಹಾಯದಿಂದ ಆಫ್-ಗ್ರಿಡ್ ಆಗಿ ಸ್ವತಂತ್ರವಾಗಿ ಕೆಲಸ ಮಾಡುತ್ತಿದ್ದವು. ಮೊಬೈಲ್ ಆಪ್‌ಗಳ ಮೂಲಕ ಪಾಕಿಸ್ತಾನಿ ಹ್ಯಾಂಡ್ಲರ್‌ಗಳು ಭಾರತೀಯ ಸೇನೆಯ ನೇರ ದೃಶ್ಯಗಳನ್ನು ವೀಕ್ಷಿಸುತ್ತಿದ್ದರು ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular