HomeIPL 2026IPL 2026: ಟಾಪ್ 2 ಸ್ಥಾನಕ್ಕಾಗಿ ಆರ್‌ಸಿಬಿ, ಹೈದರಾಬಾದ್ ಕಿತ್ತಾಟ; ಹೈದರಾಬಾದ್ ಏನಾದರೂ ಇಷ್ಟು ರನ್...

IPL 2026: ಟಾಪ್ 2 ಸ್ಥಾನಕ್ಕಾಗಿ ಆರ್‌ಸಿಬಿ, ಹೈದರಾಬಾದ್ ಕಿತ್ತಾಟ; ಹೈದರಾಬಾದ್ ಏನಾದರೂ ಇಷ್ಟು ರನ್ ಅಂತರದಿಂದ ಗೆದ್ದರೆ 2ನೇ ಸ್ಥಾನ, ಬೆಂಗಳೂರಿಗೆ 3ನೇ ಸ್ಥಾನ!

ಇಂದು ( ಮೇ 22 ) ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಲೀಗ್ ಹಂತದ 67ನೇ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.

ಈ ಎರಡೂ ತಂಡಗಳೂ ಸಹ ಪ್ಲೇಆಫ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದು, ಸದ್ಯ ಉಭಯ ತಂಡಗಳ ಚಿತ್ತ ಅಂಕಪಟ್ಟಿಯಲ್ಲಿ ಟಾಪ್ 2 ಸ್ಥಾನ ಪಡೆದು ಕ್ವಾಲಿಫಯರ್ 1 ಆಡುವ ಸವಲತ್ತು ಪಡೆಯುವತ್ತ ಇದೆ. ಹೌದು, ಟಾಪ್ 2 ಸ್ಥಾನಗಳನ್ನು ಪಡೆಯುವ ತಂಡಗಳಿಗೆ ಫೈನಲ್ ಪ್ರವೇಶಿಸಲು ಎರಡು ಪಂದ್ಯಗಳನ್ನು ಆಡುವ ಅವಕಾಶವಿರಲಿದ್ದು, ಸದ್ಯ ಸನ್ ರೈಸರ್ಸ್ ಆರ್‌ಸಿಬಿಯಿಂದ ಈ ಅವಕಾಶವನ್ನು ವಶಪಡಿಸಿಕೊಳ್ಳಲಿದೆಯಾ ಎಂಬ ಪ್ರಶ್ನೆ ಎದ್ದಿದೆ.

ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 13 ಪಂದ್ಯಗಳ್ನನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು 9 ಪಂದ್ಯಗಳಲ್ಲಿ ಗೆದ್ದು 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಒಂದನೇ ಸ್ಥಾನದಲ್ಲಿದ್ದು, 13 ಪಂದ್ಯಗಳನ್ನಾಡಿ 8 ಪಂದ್ಯಗಳಲ್ಲಿ ಗೆದ್ದು 16 ಅಂಕಗಳನ್ನು ಹೊಂದಿರುವ ಸನ್ ರೈಸರ್ಸ್ ಹೈದರಾಬಾದ್ ಮೂರನೇ ಸ್ಥಾನದಲ್ಲಿದೆ. ಆದರೆ ಇಂದು ನಡೆಯಲಿರುವ ಪಂದ್ಯದಲ್ಲಿ ಹೈದರಾಬಾದ್ ಗೆದ್ದರೆ ಎರಡೂ ತಂಡಗಳ ಅಂಕ 18 ಆಗಲಿದ್ದು, ನೆಟ್ ರನ್‌ರೇಟ್ ಆಧಾರದ ಮೇಲೆ ಅಂಕಪಟ್ಟಿಯ ಸ್ಥಾನ ಹಾಗೂ ಯಾವ ತಂಡ ಕ್ವಾಲಿಫಯರ್ ಒಂದರಲ್ಲಿ ಆಡಲಿದೆ ಎಂಬುದು ಬಹಿರಂಗವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚೆನ್ನೈ ವಿರುದ್ಧ ಬೃಹತ್ ಅಂತರದ ಗೆಲುವು ಕಂಡ ಗುಜರಾತ್ ಟೈಟನ್ಸ್ ಒಳ್ಳೆಯ ನೆಟ್ ರನ್‌ರೇಟ್ ಜತೆಗೆ ಎರಡನೇ ಸ್ಥಾನ ಭದ್ರಪಡಿಸಿಕೊಂಡಿದ್ದು, ಇಂದು ಹೈದರಾಬಾದ್ ಗೆದ್ದರೆ ಮೊದಲ ಸ್ಥಾನಕ್ಕೇರುವ ಸಾಧ್ಯತೆ ಇದೆ. ಇದೀಗ ಅದೇ ರೀತಿ ಹೈದರಾಬಾದ್ ಒಳ್ಳೆಯ ನೆಟ್ ರನ್‌ ರೇಟ್ ಸಂಪಾದಿಸಿ ಎರಡನೆ ಸ್ಥಾನಕ್ಕೇರಿ ಆರ್‌ಸಿಬಿಯನ್ನು ಮೂರನೇ ಸ್ಥಾನಕ್ಕೆ ತಳ್ಳಬೇಕೆಂದರೆ ಈ ಅಂತರದಲ್ಲೇ ಗೆಲ್ಲಬೇಕಿದೆ.

ಒಂದುವೇಳೆ ಸನ್ ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಮಾಡಿದರೆ ಈ ಅಂತರದಲ್ಲಿ ಗೆಲ್ಲಲೇಬೇಕು, ಆಗ ಮಾತ್ರ ಹೈದರಬಾದ್ ಎರಡನೇ ಸ್ಥಾನ ಪಡೆಯಲಿದೆ ಹಾಗೂ ಬೆಂಗಳೂರು ಮೂರನೇ ಸ್ಥಾನಕ್ಕೆ ಜಾರಲಿದೆ.

* ಸನ್ ರೈಸರ್ಸ್ ಮೊದಲು ಬ್ಯಾಟಿಂಗ್ ಮಾಡಿ 180 ರನ್ ಕಲೆಹಾಕಿದರೆ 87 ರನ್‌ಗಳ ಅಂತರದಿಂದ ಗೆಲ್ಲಬೇಕು. ಆಗ ಹೈದರಾಬಾದ್ ರನ್‌ ರೇಟ್ 0.645 ಆಗಲಿದೆ ಹಾಗೂ ಆರ್‌ಸಬಿ ರನ್ ರೇಟ್ 0.637 ಆಗಲಿದೆ.

* ಹೈದರಾಬಾದ್ ಮೊದಲು ಬ್ಯಾಟಿಂಗ್ ಮಾಡಿ 200 ರನ್ ಗಳಿಸಿದರೆ ಆಗಲೂ ಸಹ 87 ರನ್‌ಗಳಿಂದ ಆರ್‌ಸಿಬಿಯನ್ನು ಮಣಿಸಬೇಕು. ಆಗ ಹೈದರಾಬಾದ್ 0.644 ನೆಟ್‌ ರನ್‌ರೇಟ್ ಆಗಲಿದ್ದು, ಬೆಂಗಳೂರಿನದ್ದು 0.642 ಆಗಲಿದೆ.

* ಹೈದರಾಬಾದ್ 220 ರನ್ ಬಾರಿಸಿದರೆ, 88 ರನ್‌ಗಳಿಂದ ಗೆಲ್ಲಬೇಕು. ಆಗ ಹೈದರಾಬಾದ್ ನೆಟ್‌ ರನ್‌ರೇಟ್ 0.646 ಆಗಲಿದೆ ಹಾಗೂ ಬೆಂಗಳೂರು ರನ್‌ರೇಟ್ 0.644 ಆಗಲಿದೆ.

* ಹೈದರಾಬಾದ್ 240 ರನ್ ಬಾರಿಸಿದರೆ 89 ರನ್‌ಗಳಿಂದ ಗೆಲ್ಲಬೇಕು. ಆಗ ಹೈದರಾಬಾದ್ ನೆಟ್‌ ರನ್‌ರೇಟ್ 0.649 ಆಗಲಿದೆ ಹಾಗೂ ಬೆಂಗಳೂರು ನೆಟ್‌ ರನ್‌ರೇಟ್ 0.645 ಆಗಲಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular