HomeLatest Newsಅಮೆರಿಕದಲ್ಲಿ ಭಾರತೀಯ ಮಾವಿನ ಹವಾ : ವಿದೇಶಗಳಲ್ಲಿ ಕೇಸರ್ ಮಾವಿಗೆ ಭರ್ಜರಿ ಡಿಮ್ಯಾಂಡ್ ಅಮೆರಿಕದಲ್ಲಿ 1...

ಅಮೆರಿಕದಲ್ಲಿ ಭಾರತೀಯ ಮಾವಿನ ಹವಾ : ವಿದೇಶಗಳಲ್ಲಿ ಕೇಸರ್ ಮಾವಿಗೆ ಭರ್ಜರಿ ಡಿಮ್ಯಾಂಡ್ ಅಮೆರಿಕದಲ್ಲಿ 1 ಕೆಜಿ ಹಣ್ಣಿನ ಬೆಲೆ ಎಷ್ಟು ಗೊತ್ತಾ?

ವಾಷಿಂಗ್ಟನ್ (ಸಿಯಾಟಲ್): ಭಾರತದಲ್ಲಿ ಬೇಸಿಗೆಯ ಕಾಲದಲ್ಲಿ ಜನರ ದೇಹ ಹಾಗೂ ಮನಸ್ಸಿಗೆ ತಂಪೆರೆಯುವ ಮಾವಿನ ಹಣ್ಣು ಈಗ ಏಳು ಸಮುದ್ರಗಳನ್ನು ದಾಟಿ ಅಮೆರಿಕ ತಲುಪಿದೆ. ಈ ವಾರ ಅಮೆರಿಕದ ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿ ಭಾರತೀಯ ಮಾವಿನ ಹಣ್ಣುಗಳ (Indian Mangoes) ಆಗಮನವು ಒಂದು ವಿಶಿಷ್ಟ ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ. ಭಾರತೀಯ ಮಾವಿನ ಮಾಧುರ್ಯ ಮತ್ತು ದೈವಿಕ ಸುವಾಸನೆಗೆ ವಿದೇಶಿ ಗ್ರಾಹಕರು ಈಗ ಫಿದಾ ಆಗಿದ್ದಾರೆ

ಕಾಸ್ಟ್‌ಕೋ ಮಾಲ್‌ಗಳಲ್ಲಿ ಭಾರತೀಯ ಮಾವು: ಬೆಲೆ ಎಷ್ಟು ಗೊತ್ತಾ?

ಗಮನಾರ್ಹ ಸಂಗತಿ ಎಂದರೆ, ಈ ಮಾವಿನ ಹಣ್ಣುಗಳು ಇನ್ನು ಮುಂದೆ ಕೇವಲ ಅಮೆರಿಕದಲ್ಲಿರುವ ಸಣ್ಣಪುಟ್ಟ ಭಾರತೀಯ ದಿನಸಿ ಅಂಗಡಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಅಮೆರಿಕದ ದೈತ್ಯ ರೀಟೇಲ್ ಸಂಸ್ಥೆಯಾದ ಕಾಸ್ಟ್‌ಕೋ (Costco) ನಂತಹ ಪ್ರಮುಖ ಚಿಲ್ಲರೆ ಮಾಲ್‌ಗಳಲ್ಲಿಯೂ ಬಹಿರಂಗವಾಗಿ ಮಾರಾಟವಾಗುತ್ತಿವೆ.

ಒಂದು ಕೆಜಿಗೆ ₹1,900 ರೇಟ್: ಅಮೆರಿಕದ ಸಿಯಾಟಲ್, ಲಿನ್ವುಡ್, ಎಡಿಸನ್ ಮತ್ತು ನಾರ್ತ್ ಬ್ರನ್ಸ್ವಿಕ್ ಸೇರಿದಂತೆ ಪ್ರಮುಖ ನಗರಗಳಲ್ಲಿ 1 ಕೆಜಿ ಕೇಸರ್ ಮಾವಿನ ಹಣ್ಣಿನ ಬೆಲೆ $20 ಡಾಲರ್ (ಅಂದಾಜು ₹1,919 ರೂಪಾಯಿ) ಗೆ ಮಾರಾಟವಾಗುತ್ತಿದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದೇ ಭಾರತದಲ್ಲಿ, ₹1,900 ರೂಪಾಯಿ ಖರ್ಚು ಮಾಡಿದರೆ ಒಂದು ಮಧ್ಯಮ ವರ್ಗದ ಇಡೀ ಕುಟುಂಬಕ್ಕೆ ಹಲವಾರು ದಿನಗಳವರೆಗೆ ಸಾಕಾಗುವಷ್ಟು ಮಾವಿನ ಹಣ್ಣುಗಳು ಸಿಗುತ್ತವೆ. ಆದರೂ ಅಮೆರಿಕದಲ್ಲಿ ಭಾರತೀಯ ಮಾವಿನ ಕ್ರೇಜ್ ಎಷ್ಟಿದೆಯೆಂದರೆ, ಅಲ್ಲಿನ ಗ್ರಾಹಕರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ.

ಸಿಯಾಟಲ್‌ನಲ್ಲಿ ಮಾವಿನ ರಾಜತಾಂತ್ರಿಕತೆ (Mango Diplomacy)

ಅಮೆರಿಕದ ಸಿಯಾಟಲ್‌ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ಪ್ರಕಾಶ್ ಗುಪ್ತಾ ಅವರು ಅಲ್ಲಿನ ಪ್ರಸಿದ್ಧ ಫಾಕ್ಸ್-13 ನ್ಯೂಸ್ (Fox-13 News) ವಾಹಿನಿಯಲ್ಲಿ ಭಾಗವಹಿಸಿ ಭಾರತೀಯ ಮಾವಿನ ಹಣ್ಣುಗಳ ಬಗ್ಗೆ ಭರ್ಜರಿ ಪ್ರಚಾರ ಮಾಡಿದರು.

ಕಳೆದ ವರ್ಷದಿಂದ ಭಾರತೀಯ ಮಾವಿನ ಹಣ್ಣುಗಳು ಅಮೆರಿಕದ ಪ್ರಮುಖ ಚಿಲ್ಲರೆ ಸೂಪರ್ ಮಾರ್ಕೆಟ್‌ಗಳನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರ ತೀವ್ರ ಪ್ರಯತ್ನ ನಡೆಸುತ್ತಿತ್ತು. ಅದರ ಫಲಿತಾಂಶವೇ ಇಂದು ಕಾಸ್ಟ್‌ಕೋ ಮಾಲ್‌ಗಳಲ್ಲಿ ಮಾವಿನ ಹಣ್ಣುಗಳು ರಾರಾಜಿಸುತ್ತಿವೆ. “ಭಾರತದಲ್ಲಿ ಮಾವು ಕೇವಲ ಒಂದು ಹಣ್ಣಲ್ಲ, ಅದು ಬೇಸಿಗೆಯ ಸಡಗರ ಮತ್ತು ಪ್ರತಿಯೊಂದು ಕುಟುಂಬದ ಭಾವನೆ” ಎಂದು ಪ್ರಕಾಶ್ ಗುಪ್ತಾ ಅವರು ಅಮೆರಿಕನ್ನರಿಗೆ ವಿವರಿಸಿದ್ದಾರೆ.

ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ಮಾವು ಏಕೆ ಸ್ಪೆಷಲ್?

ಭಾರತವು ವಿಶ್ವದ ಅತಿ ದೊಡ್ಡ ಮಾವಿನ ಹಣ್ಣು ಉತ್ಪಾದಕ ರಾಷ್ಟ್ರವಾಗಿದ್ದು, ಜಾಗತಿಕ ಉತ್ಪಾದನೆಯ ಸುಮಾರು ಅರ್ಧದಷ್ಟು (50%) ಪಾಲನ್ನು ಹೊಂದಿದೆ. ಭಾರತದ ಕೇಸರ್, ಅಲ್ಫೋನ್ಸೊ (ಹಾಫೂಸ್), ದುಸ್ಸೆಹ್ರಿ ಮತ್ತು ಲ್ಯಾಂಗ್ರಾ ಮುಂತಾದ ಮಾವಿನ ಪ್ರಭೇದಗಳು ತಮ್ಮ ವಿಶಿಷ್ಟ ಸಿಹಿ ಮತ್ತು ದಟ್ಟವಾದ ಸುವಾಸನೆಗಾಗಿ ಪ್ರಪಂಚದಾದ್ಯಂತ ಪ್ರಸಿದ್ಧಿ ಪಡೆದಿವೆ. ಪ್ರಸ್ತುತ, ಕೇಸರ್ ಮಾವಿನ ಹಣ್ಣುಗಳು ಸಿಯಾಟಲ್‌ಗೆ ಲಗ್ಗೆ ಇಟ್ಟಿದ್ದು, ಮುಂಬರುವ ವಾರಗಳಲ್ಲಿ ಉಳಿದ ಪ್ರಭೇದಗಳು ಅಮೆರಿಕ ಮಾರುಕಟ್ಟೆಯನ್ನು ಆಳಲಿವೆ.

ಇಲ್ಲಿಯವರೆಗೆ ವಿದೇಶಗಳಲ್ಲಿ ಭಾರತೀಯ ಮಾವು ಸಿಗುವುದು ತುಂಬಾ ಅಪರೂಪವಾಗಿತ್ತು, ಆದರೆ ಈಗ ವಿಸ್ತರಿಸುತ್ತಿರುವ ಇದರ ಮಾರುಕಟ್ಟೆ ಭಾರತೀಯ ಕೃಷಿ ಕ್ಷೇತ್ರಕ್ಕೆ ಜಾಗತಿಕ ಮಟ್ಟದಲ್ಲಿ ದೊಡ್ಡ ಗೆಲುವನ್ನು ತಂದುಕೊಟ್ಟಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular