ರಾಮನಗರ: ಸರ್ಕಾರಿ ಶಾಲೆ ಆವರಣದಲ್ಲಿ ಕುಡಿದು ಇಸ್ಪೀಟ್ ಆಡುತ್ತಿದ್ದ ನಾಲ್ವರನ್ನು ರಾಮನಗರ ಗ್ರಾಮಾಂತರ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಹನುಮ, ಕೌಶಿಕ್, ಭಾನುಪ್ರಕಾಶ್ ಮತ್ತು ಅನುಕುಮಾರ್ ಬಂಧಿತ ಆರೋಪಿಗಳು. ಬೆಂಗಳೂರು ದಕ್ಷಿಣ ಜಿಲ್ಲೆ ರಾಮನಗರ ತಾಲೂಕಿನ ಲಕ್ಕೋಜನಹಳ್ಳಿಯಲ್ಲಿ ಘಟನೆ ನಡೆದಿತ್ತು. ಲಕ್ಕೋಜನಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಮದ್ಯಪಾನ ಮಾಡಿ ಇಸ್ಪೀಟ್ ಆಡಿದ್ದರು.
ಬಹಿರಂಗವಾಗಿಯೇ ಶಾಲಾ ಆವರಣದಲ್ಲಿ ಪುಂಡರು ಇಸ್ಪೀಟ್ ಆಡಿದ್ದರು. ಜೊತೆಗೆ ಕುಡುಕರ ಹಾವಳಿಗೆ ಸಿಸಿ ಕ್ಯಾಮೆರಾ, ಮತ್ತು ಪಾಟ್ ಗಳು ಹಾನಿಯಾಗಿವೆ. ಶಾಲೆಗೆ ರಜೆ ಹಿನ್ನೆಲೆಯಲ್ಲಿ ಶಾಲಾ ಆವರಣ ಪುಂಡರ ಅಡ್ಡೆಯಾಗಿತ್ತು. ಸದ್ಯ ನಾಲ್ವರನ್ನು ಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

