HomeKarnatakaರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ PG ಶುಲ್ಕ ಪರಿಷ್ಕರಣೆ..! 2027-28ರಿಂದ ಜಾರಿ

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ PG ಶುಲ್ಕ ಪರಿಷ್ಕರಣೆ..! 2027-28ರಿಂದ ಜಾರಿ

ಬೆಂಗಳೂರು: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನಡೆಯುತ್ತಿರುವ ವಿವಿಧ ಸ್ನಾತಕೋತ್ತರ (PG) ಕೋರ್ಸ್‌ಗಳ ಶುಲ್ಕವನ್ನು 2027-28ನೇ ಶೈಕ್ಷಣಿಕ ಸಾಲಿನಿಂದ ಪರಿಷ್ಕರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2026-27ನೇ ಸಾಲಿಗೆ 2025-26ರಲ್ಲಿ ನಿಗದಿಯಾಗಿದ್ದ ಶುಲ್ಕ ರಚನೆಯನ್ನೇ ಮುಂದುವರಿಸಲು ಸರ್ಕಾರ ನಿರ್ಧರಿಸಿದ್ದು, ಹೊಸ ಪರಿಷ್ಕೃತ ಶುಲ್ಕಗಳು 2027-28ನೇ ಸಾಲಿನಿಂದ ಅನ್ವಯವಾಗಲಿವೆ.

ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿವಿಧ ಸ್ನಾತಕೋತ್ತರ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಸರ್ಕಾರದ ಆದೇಶ ಸಂಖ್ಯೆ ಇಡಿ 297 ಯುಎನ್‌ಇ 2025, ದಿನಾಂಕ 22.09.2026ರ ಅನ್ವಯ ಶುಲ್ಕ ನಿಗದಿಪಡಿಸಲಾಗಿದೆ.

2027-28ರಿಂದ ಯಾವ ಶುಲ್ಕ ಎಷ್ಟು?

ಎಂ.ಬಿ.ಎ ಹೊರತುಪಡಿಸಿ ವಿವಿಧ ಸ್ನಾತಕೋತ್ತರ ಕೋರ್ಸ್‌ಗಳಿಗೆ ಅರ್ಜಿ ಶುಲ್ಕ ₹55, ಪ್ರವೇಶ ಶುಲ್ಕ ₹105, ಬೋಧನಾ ಶುಲ್ಕ ₹1,050, ಪ್ರಯೋಗಾಲಯ ಶುಲ್ಕ ₹315, ವೈದ್ಯಕೀಯ ತಪಾಸಣೆ ಶುಲ್ಕ ₹35, ವರ್ಗಾವಣೆ ಪತ್ರ ಶುಲ್ಕ ₹55 ಹಾಗೂ ವಿದ್ಯಾಭ್ಯಾಸ ಪ್ರಮಾಣ ಪತ್ರ ಶುಲ್ಕ ₹25 ನಿಗದಿಯಾಗಿದೆ.

ಗ್ರಂಥಾಲಯ ಶುಲ್ಕ (ಬೈಂಡಿಂಗ್ ಸೇರಿ) ₹115 ಹಾಗೂ ವಾಚನಾಲಯ ಶುಲ್ಕ ₹115 ಆಗಿರಲಿದೆ. ಕ್ರೀಡಾ ಶುಲ್ಕ ₹105, ಸಾಂಸ್ಕೃತಿಕ ಚಟುವಟಿಕೆಗಳ ಶುಲ್ಕ ₹200, ಕಾಲೇಜು ಮ್ಯಾಗಜಿನ್ ಶುಲ್ಕ ₹100, ಪರಿಚಯ ಪುಸ್ತಕ ಶುಲ್ಕ ₹50 ಮತ್ತು ಗುರುತಿನ ಚೀಟಿ ಶುಲ್ಕ ₹50 ನಿಗದಿಪಡಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇವುಗಳ ಪೈಕಿ ಅರ್ಜಿ, ಪ್ರವೇಶ, ಬೋಧನಾ, ಪ್ರಯೋಗಾಲಯ, ವೈದ್ಯಕೀಯ ತಪಾಸಣೆ, ವರ್ಗಾವಣೆ ಪತ್ರ, ವಿದ್ಯಾಭ್ಯಾಸ ಪ್ರಮಾಣ ಪತ್ರ ಮತ್ತು ಗ್ರಂಥಾಲಯ ಶುಲ್ಕಗಳ ಒಟ್ಟು ಮೊತ್ತ ₹1,755 ಆಗಲಿದೆ.

ಇತರೆ ಶುಲ್ಕಗಳ ವಿವರ

  • ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಶುಲ್ಕ – ₹50

  • ಕಾಲೇಜು ಅಭಿವೃದ್ಧಿ ಶುಲ್ಕ (CDF) – ₹200

  • ಸ್ನಾತಕೋತ್ತರ ವಿಭಾಗದ ಅಭಿವೃದ್ಧಿ ಶುಲ್ಕ – ₹1,050

  • ಶಿಕ್ಷಕರ ದಿನಾಚರಣೆಯ ಬಾವುಟ ಶುಲ್ಕ – ವಿದ್ಯಾರ್ಥಿಗಳಿಗೆ ₹40

  • ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ (KSTBF) – ₹25

  • ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ (KSSWF) – ₹25

  • ಶಿಕ್ಷಕರ ದಿನಾಚರಣೆಯ ಬಾವುಟ ಶುಲ್ಕ – ಶಿಕ್ಷಕರಿಗೆ ₹200

ಕೆಲವು ಕೋರ್ಸ್‌ಗಳಿಗೆ ಪ್ರತ್ಯೇಕ ಶುಲ್ಕ

ಎಂ.ಎಸ್ಸಿ (ಕಂಪ್ಯೂಟರ್ ಸೈನ್ಸ್, ಮೈಕ್ರೋ ಬಯಾಲಜಿ, ಬಯೋಟೆಕ್ನಾಲಜಿ ಮತ್ತು ಇನ್‌ಫಾರ್ಮೇಶನ್ ಸೈನ್ಸ್) ಕೋರ್ಸ್‌ಗೆ ₹3,000, ಎಂ.ಸಿ.ಎ (ಕಂಪ್ಯೂಟರ್ ಕೋರ್ ಸಬ್ಜೆಕ್ಟ್)ಗೆ ₹6,000 ಹಾಗೂ ಎಂ.ಎಸ್ಸಿ (ಕಂಪ್ಯೂಟರ್ ಸೈನ್ಸ್ ಮತ್ತು ಕಂಪ್ಯೂಟರ್ ಅಪ್ಲಿಕೇಶನ್)ಗೆ ₹1,000 ಶುಲ್ಕ ನಿಗದಿಪಡಿಸಲಾಗಿದೆ.

ಇನ್ನು ಪ್ರವೇಶ, ನೋಂದಣಿ, ಕ್ರೀಡಾ ಸೇರಿದಂತೆ ಕೆಲವು ಇತರೆ ಶುಲ್ಕಗಳು ಆಯಾ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಅನ್ವಯವಾಗಲಿವೆ.

MBA ವಿದ್ಯಾರ್ಥಿಗಳಿಗೆ ಶುಲ್ಕ ಎಷ್ಟು?

ಎಂ.ಬಿ.ಎ ಕೋರ್ಸ್‌ನ ಸಾಮಾನ್ಯ ವಿದ್ಯಾರ್ಥಿಗಳಿಗೆ ವಾರ್ಷಿಕ ₹20,000 ಶುಲ್ಕ ಮುಂದುವರಿಯಲಿದೆ. 2025-26ನೇ ಸಾಲಿನಲ್ಲಿ ನಿಗದಿಪಡಿಸಿದ್ದ ಈ ಶುಲ್ಕವನ್ನೇ 2026-27 ಹಾಗೂ 2027-28ನೇ ಶೈಕ್ಷಣಿಕ ಸಾಲಿಗೂ ಮುಂದುವರಿಸಲಾಗಿದೆ.

ಕಾಲೇಜು ಶಿಕ್ಷಣ ಇಲಾಖೆಯ ಮಾಹಿತಿಯಂತೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ 168 ಸ್ನಾತಕೋತ್ತರ ಕೋರ್ಸ್‌ಗಳಿಗೆ 2026ರ ಸೆಪ್ಟೆಂಬರ್ 1ರವರೆಗೆ 610 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು.

ಸರ್ಕಾರ ಹೊರಡಿಸಿರುವ ಆದೇಶದಂತೆ 2026-27ನೇ ಸಾಲಿಗೆ ಹಿಂದಿನ ಶುಲ್ಕ ರಚನೆಯೇ ಮುಂದುವರಿಯಲಿದ್ದು, ಪರಿಷ್ಕೃತ ಶುಲ್ಕಗಳು 2027-28ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರಲಿವೆ.

📄 Official Documents / Supporting Documents

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular