HomeLatest NewsSHOCKING : ಚಲಿಸುವ ರೈಲಿನಡಿ ತನ್ನ ಮಕ್ಕಳನ್ನು ಎದೆಗೊತ್ತಿ ಕಾಪಾಡಿದ ತಾಯಿ ; ಮೈ ಜುಂ...

SHOCKING : ಚಲಿಸುವ ರೈಲಿನಡಿ ತನ್ನ ಮಕ್ಕಳನ್ನು ಎದೆಗೊತ್ತಿ ಕಾಪಾಡಿದ ತಾಯಿ ; ಮೈ ಜುಂ ಎನ್ನಿಸುವ ವಿಡಿಯೋ ವೈರಲ್ /WATCH VIDEO

ಅಮ್ಮ ಎಂದರೆ ಕೇವಲ ಪ್ರೀತಿಯಲ್ಲ, ಅನಿವಾರ್ಯವಾದರೆ ಸಾವಿನೊಂದಿಗೂ ಹೋರಾಡುವ ಧೈರ್ಯ ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ. ತನ್ನ ಕಣ್ಣೆದುರೇ ಸಾವು ರೈಲಿನ ರೂಪದಲ್ಲಿ ಧಾವಿಸಿ ಬಂದರೂ, ಕಿಂಚಿತ್ತೂ ಎದರದೆ ತನ್ನ ಮಕ್ಕಳನ್ನು ಎದೆಗೆ ಅಪ್ಪಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಮಾತೆ. ಮೈ ಜುಂ ಎನ್ನಿಸುವ ಈ ಹೃದಯವಿದ್ರಾವಕ ಘಟನೆ ಬಿಹಾರದ ಸಮಷ್ಟಿಪುರ ಜಿಲ್ಲೆಯಲ್ಲಿ ನಡೆದಿದೆ.

ನಡೆದದ್ದೇನು?

ಸಮಷ್ಟಿಪುರ ಜಿಲ್ಲೆಯ ಶಾಪುರ್ ಪಟೋರಿ ರೈಲ್ವೇ ನಿಲ್ದಾಣದಲ್ಲಿ ಮೂವರು ಮಹಿಳೆಯರು ಇಬ್ಬರು ಮಕ್ಕಳೊಂದಿಗೆ ರೈಲ್ವೇ ಟ್ರ್ಯಾಕ್ ದಾಟುತ್ತಿದ್ದರು. ಸರಿಯಾಗಿ ಅದೇ ಸಮಯದಲ್ಲಿ ಅತೀ ವೇಗವಾಗಿ ರೈಲೊಂದು ಅದೇ ಹಳಿಗೆ ಧಾವಿಸಿ ಬಂದಿದೆ. ಪ್ಲಾಟ್‌ಫಾರ್ಮ್ ಏರುವಷ್ಟರಲ್ಲಿ ರೈಲು ಹತ್ತಿರ ಬಂದಿದ್ದರಿಂದ ಗಾಬರಿಗೊಂಡ ಮಹಿಳೆಯರು, ಪ್ಲಾಟ್‌ಫಾರ್ಮ್ ಮತ್ತು ಹಳಿಯ ಪಕ್ಕದಲ್ಲಿದ್ದ ಕಿರಿದಾದ ಜಾಗದಲ್ಲಿ ನುಸುಳಿ ಮಲಗಿದ್ದಾರೆ.

ರೈಲು ಅತೀ ವೇಗವಾಗಿ ಚಲಿಸುತ್ತಿದ್ದರೂ, ಅದರ ಕಂಪನಕ್ಕೆ ಮಕ್ಕಳು ಹೆದರಿ ಹೊರಬರದಂತೆ ಒಬ್ಬ ತಾಯಿ ಅವರಿಬ್ಬರನ್ನು ತನ್ನ ಎದೆಗೆ ಹಪ್ಪಿಕೊಂಡು ಮಲಗಿದ್ದಾಳೆ. ರೈಲಿನ ಎಲ್ಲಾ ಬೋಗಿಗಳು ಹಾದುಹೋಗುವವರೆಗೆ ಅವಳು ತನ್ನ ಪ್ರಾಣವನ್ನು ಪಣಕ್ಕಿಟ್ಟು ಮಕ್ಕಳನ್ನು ರಕ್ಷಿಸಿದ್ದಾಳೆ. ಇದನ್ನು ನೋಡುತ್ತಿದ್ದ ಪ್ರಯಾಣಿಕರು ಒಂದು ಕ್ಷಣ ಸ್ತಬ್ಧರಾಗಿದ್ದರು. ರೈಲು ಹೋದ ನಂತರ ಮಕ್ಕಳು ಸೇರಿದಂತೆ ಎಲ್ಲರೂ ಸುರಕ್ಷಿತವಾಗಿ ಹೊರಬಂದಾಗ ಅಲ್ಲಿದ್ದವರೆಲ್ಲರೂ ನಿಟ್ಟುಸಿರು ಬಿಟ್ಟರು. ಈ ಘಟನೆಯಲ್ಲಿ ಒಬ್ಬ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೆಟ್ಟಿಗರ ಪ್ರಶಂಸೆ ಮತ್ತು ಆಕ್ರೋಶ:

ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ತಾಯಿಯ ಧೈರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. “ಅಮ್ಮನಿಗಿಂತ ದೊಡ್ಡ ಯೋಧ ಈ ಜಗತ್ತಿನಲ್ಲಿ ಯಾರೂ ಇಲ್ಲ” ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.

ಅದೇ ಸಮಯದಲ್ಲಿ, ರೈಲ್ವೇ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಳಿ ದಾಟಲು ಪಾದಚಾರಿ ಮೇಲ್ಸೇತುವೆ (Foot Over Bridge) ವ್ಯವಸ್ಥೆ ಇಲ್ಲದ ಕಾರಣ ಅನಿವಾರ್ಯವಾಗಿ ಪ್ರಾಣವನ್ನು ಕೈಯಲ್ಲಿ ಹಿಡಿದು ಹಳಿ ದಾಟಬೇಕಾದ ಸ್ಥಿತಿ ಇದೆ ಎಂದು ಕಿಡಿಕಾರಿದ್ದಾರೆ. ಏನೇ ಇರಲಿ, ರೈಲ್ವೇ ಹಳಿ ದಾಟುವಾಗ ಪ್ರಯಾಣಿಕರು ಸದಾ ಜಾಗರೂಕರಾಗಿರಬೇಕು ಎಂದು ಅಧಿಕಾರಿಗಳು ಈ ಮೂಲಕ ಮತ್ತೊಮ್ಮೆ ಎಚ್ಚರಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular