HomeIndiaರೈಲು ತಡವಾದರೆ ಟೆನ್ಷನ್ ಬೇಡ..! ₹100ರಿಂದಲೇ ರೈಲ್ವೆ ನಿಲ್ದಾಣದಲ್ಲಿ ಲಗ್ಜರಿ ರೂಮ್, ಬುಕ್ಕಿಂಗ್ ಹೇಗೆ ಗೊತ್ತಾ?

ರೈಲು ತಡವಾದರೆ ಟೆನ್ಷನ್ ಬೇಡ..! ₹100ರಿಂದಲೇ ರೈಲ್ವೆ ನಿಲ್ದಾಣದಲ್ಲಿ ಲಗ್ಜರಿ ರೂಮ್, ಬುಕ್ಕಿಂಗ್ ಹೇಗೆ ಗೊತ್ತಾ?

ದೇಶದಲ್ಲಿ ಪ್ರತಿದಿನ ಲಕ್ಷಾಂತರ ಮಂದಿ ರೈಲುಗಳಲ್ಲಿ ಪ್ರಯಾಣಿಸುತ್ತಾರೆ. ಕಡಿಮೆ ವೆಚ್ಚದಲ್ಲಿ ಆರಾಮದಾಯಕ ಪ್ರಯಾಣ ಮಾಡಬಹುದಾದ ಕಾರಣ, ದೂರದ ಪ್ರದೇಶಗಳಿಗೆ ತೆರಳುವವರು ರೈಲು ಪ್ರಯಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ.

ಮುಂಗಡವಾಗಿ ಟಿಕೆಟ್ ಬುಕ್ ಮಾಡಿಕೊಂಡು ಯಾವುದೇ ಟೆನ್ಷನ್ ಇಲ್ಲದೆ ಪ್ರಯಾಣಿಸಲು ಮುಂದಾಗುತ್ತಾರೆ. ಆದರೆ ಕೆಲವೊಮ್ಮೆ ರೈಲುಗಳು ನಿಗದಿತ ಸಮಯಕ್ಕೆ ಬಾರದೆ ವಿಳಂಬವಾಗುವುದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.

ಕೆಲವೊಮ್ಮೆ ರೈಲುಗಳು ಗಂಟೆಗಟ್ಟಲೆ ತಡವಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಪ್ರಯಾಣಿಕರು ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾಯುತ್ತಾ ಸಮಯ ಕಳೆಯಬೇಕಾಗುತ್ತದೆ. ಕೆಲವರು ವಿಶ್ರಾಂತಿ ಪಡೆಯಲು ಹೊರಗಡೆ ಹೋಟೆಲ್‌ಗಳನ್ನು ಹುಡುಕುತ್ತಾರೆ. ಆದರೆ ರೈಲ್ವೆ ಇಲಾಖೆ ಒದಗಿಸುವ ಹಲವು ಸೌಲಭ್ಯಗಳ ಬಗ್ಗೆ ಬಹುತೇಕ ಪ್ರಯಾಣಿಕರಿಗೆ ಮಾಹಿತಿ ಇರುವುದಿಲ್ಲ. ರೈಲ್ವೆ ನಿಲ್ದಾಣಗಳಲ್ಲೇ ಅತ್ಯಂತ ಕಡಿಮೆ ದರದಲ್ಲಿ ರೂಮ್ ಪಡೆಯುವ ಸೌಲಭ್ಯವಿದೆ. ಆನ್‌ಲೈನ್ ಮೂಲಕವೂ ಈ ರೂಮ್‌ಗಳನ್ನು ಬುಕ್ ಮಾಡಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೈಲು ತಡವಾದಾಗ ಅಥವಾ ಇತರ ಕಾರಣಗಳಿಂದ ರೈಲ್ವೆ ನಿಲ್ದಾಣದಲ್ಲಿ ಹೆಚ್ಚು ಸಮಯ ಉಳಿಯಬೇಕಾದ ಪರಿಸ್ಥಿತಿ ಬಂದರೆ, ಅಲ್ಲಿಯೇ ರೂಮ್ ಪಡೆಯಬಹುದು. ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ರಿಟೈರಿಂಗ್ ರೂಮ್‌ಗಳು (Retiring Rooms) ಲಭ್ಯವಿರುತ್ತವೆ. ಇವುಗಳಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇದರ ದರವೂ ಸಾಮಾನ್ಯ ಹೋಟೆಲ್‌ಗಳಿಗೆ ಹೋಲಿಸಿದರೆ ಕಡಿಮೆ ಇರುತ್ತದೆ.

ರಿಟೈರಿಂಗ್ ರೂಮ್‌ಗಳಲ್ಲಿ ಎಸಿ, ನಾನ್-ಎಸಿ, ಸಿಂಗಲ್, ಡಬಲ್, ಬೆಡ್ ಹಾಗೂ ಸೂಟ್ ರೂಮ್‌ಗಳು ಸೇರಿದಂತೆ ವಿವಿಧ ಆಯ್ಕೆಗಳು ಲಭ್ಯವಿರುತ್ತವೆ.

ನಿಮಗೆ ಬೇಕಾದ ವಿಭಾಗದ ರೂಮ್ ಅನ್ನು ಆನ್‌ಲೈನ್ ಮೂಲಕ ಸುಲಭವಾಗಿ ಬುಕ್ ಮಾಡಬಹುದು. ರೈಲ್ವೆ ನಿಲ್ದಾಣ ಹಾಗೂ ಬೇಡಿಕೆಗೆ ಅನುಗುಣವಾಗಿ ರೂಮ್‌ಗಳ ದರದಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು. ಸಾಮಾನ್ಯವಾಗಿ ₹100ರಿಂದ ₹3,000ವರೆಗೆ ದರ ಇರಬಹುದು. ಈ ರೂಮ್‌ಗಳನ್ನು ಬುಕ್ ಮಾಡಲು ಪ್ರಯಾಣದ ಟಿಕೆಟ್ ಹೊಂದಿರುವುದು ಕಡ್ಡಾಯವಾಗಿದೆ. IRCTC ಅಧಿಕೃತ ವೆಬ್‌ಸೈಟ್‌ ಮೂಲಕ ಸುಲಭವಾಗಿ ಬುಕ್ಕಿಂಗ್ ಮಾಡಬಹುದು.

IRCTC ಪೋರ್ಟಲ್‌ನಲ್ಲಿ ‘My Bookings’ ವಿಭಾಗಕ್ಕೆ ಹೋದಾಗ ಕೆಳಭಾಗದಲ್ಲಿ ‘Retiring Rooms’ ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಆಯ್ಕೆ ಮಾಡಿಕೊಂಡು ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿ ಮೂಲಕ ಲಾಗಿನ್ ಆಗಬೇಕು. ಬಳಿಕ ನಿಮ್ಮ PNR ನಂಬರ್ ನಮೂದಿಸಬೇಕು.

ನಂತರ ನೀವು ತಂಗಲು ಬಯಸುವ ರೈಲ್ವೆ ನಿಲ್ದಾಣವನ್ನು ಆಯ್ಕೆ ಮಾಡಬೇಕು. ಆ ನಿಲ್ದಾಣದಲ್ಲಿ ಲಭ್ಯವಿರುವ ರೂಮ್‌ಗಳ ವಿವರಗಳು ಕಾಣಿಸುತ್ತವೆ. ಇಲ್ಲಿ Rooms ಅಥವಾ Dormitories ಆಯ್ಕೆಗಳಲ್ಲಿ ಒಂದನ್ನು ಆರಿಸಿಕೊಳ್ಳಬಹುದು.

ಮುಂದೆ ಎಸಿ ಅಥವಾ ನಾನ್-ಎಸಿ, ಬೆಡ್ ಪ್ರಕಾರ, ಚೆಕ್-ಇನ್, ಚೆಕ್-ಔಟ್ ಮತ್ತು ಪ್ರಯಾಣದ ಸಮಯ ಸೇರಿದಂತೆ ಅಗತ್ಯ ವಿವರಗಳನ್ನು ನಮೂದಿಸಬೇಕು. ನಂತರ ಲಭ್ಯವಿರುವ ರೂಮ್‌ಗಳ ಪಟ್ಟಿ ಕಾಣಿಸುತ್ತದೆ.

ಅದಾದ ಬಳಿಕ ಅಗತ್ಯವಿರುವ ಗುರುತಿನ ದಾಖಲೆ ಮತ್ತು ಅದರ ಸಂಖ್ಯೆಯನ್ನು ನಮೂದಿಸಬೇಕು. ಆನ್‌ಲೈನ್ ಮೂಲಕವೇ ರೂಮ್ ಶುಲ್ಕವನ್ನು ಪಾವತಿಸಬಹುದು. ಬುಕ್ಕಿಂಗ್ ಪೂರ್ಣಗೊಂಡ ತಕ್ಷಣ ನಿಮ್ಮ ಮೊಬೈಲ್ ನಂಬರ್‌ಗೆ ದೃಢೀಕರಣ ಸಂದೇಶ ಬರುತ್ತದೆ.

ಹೀಗಾಗಿ ರೈಲು ಗಂಟೆಗಟ್ಟಲೆ ತಡವಾದಾಗ ಪ್ಲಾಟ್‌ಫಾರ್ಮ್‌ನಲ್ಲಿ ಕಾಯುವ ಬದಲು, ಲಭ್ಯವಿದ್ದರೆ ರೈಲ್ವೆ ನಿಲ್ದಾಣದಲ್ಲಿರುವ ರಿಟೈರಿಂಗ್ ರೂಮ್ ಅಥವಾ ಡಾರ್ಮಿಟರಿಯನ್ನು ಬಳಸಿಕೊಳ್ಳಬಹುದು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular