HomeEntertainmentಬೈಕ್ ರೀಲ್ಸ್ ಗಾಗಿ ಪೆಟ್ರೋಲ್ ಬಾಂಬ್ ಮಾದರಿ ಬ್ಲಾಸ್ಟ್ ಮಾಡಿ ವಿವಾದ ಪ್ರಕರಣ: ಕ್ಷಮೆ ಕೇಳಿದ...

ಬೈಕ್ ರೀಲ್ಸ್ ಗಾಗಿ ಪೆಟ್ರೋಲ್ ಬಾಂಬ್ ಮಾದರಿ ಬ್ಲಾಸ್ಟ್ ಮಾಡಿ ವಿವಾದ ಪ್ರಕರಣ: ಕ್ಷಮೆ ಕೇಳಿದ ರಜತ್

ಬೆಂಗಳೂರು: ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ, ನಟ ರಜತ್ ಅವರ ಹೊಸ ರೀಲ್ಸ್ ವಿಡಿಯೋ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಬೈಕ್ ನಲ್ಲಿ ಬಂದು ಪೆಟ್ರೋಲ್ ಬಾಂಬ್ ಮಾದರಿಯಲ್ಲಿ ಬ್ಲಾಸ್ಟ್ ಮಾಡಿ ಪೋಸ್ ಕೊಟ್ಟ ವಿಡಿಯೋ ಭಾರಿ ಚರ್ಚೆಗೆ ಕಾರಣವಾಗಿದೆ.

ತಮ್ಮ ರೀಲ್ಸ್ ವಿಡಿಯೋ ಹೊಸ ವಿವಾದ ಸೃಷ್ಟಿಸುತ್ತಿದ್ದಂತೆ ಎಚ್ಚೆತ್ತ ರಜತ್ ಈ ಬಗ್ಗೆ ಕ್ಷಮೆ ಕೇಳಿದ್ದಾರೆ. ಅಲ್ಲದೇ ವಿಡಿಯೋ ಮಾಡಿದ್ದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇದು ಬೈಕ್ ಒಂದರ ಪ್ರಚಾರಕ್ಕಾಗಿ ಮಾಡಿದ್ದ ಸಣ್ಣ ವಿಡಿಯೋ. ಇದರಲ್ಲಿ ಎಲ್ಲಾ ಸುರಕ್ಷಿತ ಕ್ರಮಗಳನ್ನು ಕೈಗೊಂಡೇ ಬೆಂಕಿ ಹಾಗೂ ಬ್ಲಾಸ್ಟ್ ವಿಡಿಯೋ ಚಿತ್ರೀಕರಿಸಲಾಗಿತ್ತು. ಪ್ರಮೋಷನ್ ಗಾಗಿ ಮಾಡಿದ ಒಂದು ವಿಡಿಯೋ ಇದು ಅಷ್ಟೇ. ಯಾವುದೇ ವಿವಾದಕ್ಕಾಗಿ ಮಾಡಿದ್ದಲ್ಲ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಡಿಯೋ ವಿವಾದವಾಗುತ್ತಿದ್ದಂತೆ ವಿಡಿಯೋವನ್ನು ತಕ್ಷಣ ಡಿಲಿಟ್ ಮಾಡಿಸಿದ್ದೇನೆ. ಒಬ್ಬ ನಟನಾಗಿ ಯಾವತರ ವಿಡಿಯೋ ಮಾಡಬೇಕು ಎಂದು ಹೇಳಿಕೊಟ್ಟಂತೆ ಮಾಡಿದ್ದು ಬಿಟ್ಟರೆ ಯಾರನ್ನೂ ಹರ್ಟ್ ಮಾಡುವ ಉದ್ದೇಶಕ್ಕೆ ಈ ವಿಡಿಯೋ ಮಾಡಿಲ್ಲ. ಇದೊಂದು ಬೈಕ್ ಪ್ರಚಾರದ ವಿಡಿಯೋ ಅಷ್ಟೇ. ಚಿತ್ರೀಕರಣದ ವೇಳೆ ಸ್ಥಳದಲ್ಲಿ ಎಲ್ಲಾ ಸುರಕ್ಷಿತ ಕ್ರಮ ಅನುಸರಿಸಿ, ಯಾರಿಗೂ ತೊಂದರೆ ಆಗದಂತೆ ಒಂದು ಕಾರ್ನರ್ ರೋಡ್ ನಲ್ಲಿ ವಿಡಿಯೋ ಚಿತ್ರೀಕರಿಸಲಾಗಿದೆ. ಈ ರೀತಿ ಪ್ರಮೋಷನಲ್ ವಿಡಿಯೋ ಹಾಕಬಾರದು ಎಂಬುದು ನನಗೆ ಗೊತ್ತಿಲ್ಲ. ವಿಡಿಯೋ ಅಪ್ ಲೋಡ್ ಆಗಿದ್ದೂ ನನಗೆ ಗೊತ್ತಿರಲಿಲ್ಲ. ವಿಷಯ ಗೊತ್ತಾಗುತ್ತಿದ್ದಂತೆ ವಿಡಿಯೋವನ್ನು ಡಿಲಿಟ್ ಮಾಡಿಸಿದ್ದೇನೆ. ನಮ್ಮಿಂದ ತಪ್ಪಾಗಿದ್ದರೆ ಕ್ಷಮೆ ಇರಲಿ. ಈ ವಿಡಿಯೋ ವಿಚಾರ ದೊಡ್ಡ ವಿಷಯವಾಗುವುದು ಬೇಡ. ಇಲ್ಲಿಗೆ ನಿಲ್ಲಲಿ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular