ಬೆಂಗಳೂರು: ಹಾಸನಂಬೆ ದರ್ಶನೋತ್ಸವ ಹಿನ್ನೆಲೆಯಲ್ಲಿ ದೇವಿಯ ದರ್ಶನಕ್ಕೆ ತೆರಳುವ ಭಕ್ತರಿಗೆ ನೈಋತ್ಯ ರೈಲ್ವೆ ಇಲಾಖೆ ಗುಡ್ ನ್ಯೂಸ್ ನೀಡಿದೆ. ಭಕ್ತರ ಅನುಕೂಲಕ್ಕಾಗಿ ಹಾಗೂ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಎರಡು ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ಅಕ್ಟೋಬರ್ 29ರಿಂದ ನವೆಂಬರ್ 11, 2026ರವರೆಗೆ ಈ ವಿಶೇಷ ರೈಲುಗಳು ಸಂಚರಿಸಲಿದ್ದು, ಹಾಸನಾಂಬೆ ದರ್ಶನಕ್ಕೆ ತೆರಳುವ ಭಕ್ತರಿಗೆ ಪ್ರಯಾಣದ ಅನುಕೂಲ ಕಲ್ಪಿಸಲಿವೆ.
ಪ್ರತಿ ವರ್ಷ ಹಾಸನಾಂಬೆ ದೇವಿಯ ದರ್ಶನಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳು, ಹೊರರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಕಳೆದ ವರ್ಷ 23 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನ ಪಡೆದಿದ್ದು, ಈ ಬಾರಿಯೂ ಹೆಚ್ಚಿನ ಸಂಖ್ಯೆಯ ಭಕ್ತರು ಬರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ.
1. ಕೆಎಸ್ಆರ್ ಬೆಂಗಳೂರು – ಹಾಸನ ವಿಶೇಷ ರೈಲು (ರೈಲು ಸಂ. 06573 / 06574)
ಸಂಚಾರದ ಅವಧಿ: ಅಕ್ಟೋಬರ್ 29 ರಿಂದ ನವೆಂಬರ್ 11ರವರೆಗೆ
ಒಟ್ಟು ಸಂಚಾರ:ಎರಡೂ ದಿಕ್ಕುಗಳಲ್ಲಿ ಒಟ್ಟು 14 ಟ್ರಿಪ್ಗಳು
ಒಟ್ಟು 21 ಬೋಗಿಗಳು: 1 ಎಸಿ ಪ್ರಥಮ ದರ್ಜೆ, 1 ಎಸಿ 2-ಟೈಯರ್, 4 ಎಸಿ 3-ಟೈಯರ್, 9 ಸ್ಲೀಪರ್ ಕ್ಲಾಸ್, 4 ಸಾಮಾನ್ಯ ದ್ವಿತೀಯ ದರ್ಜೆ (General), 1 ಲಗೇಜ್-ಕಮ್-ಬ್ರೇಕ್ ವ್ಯಾನ್ (ಜನರೇಟರ್ ಕಾರ್), 1 ದಿವ್ಯಾಂಗ ಸ್ನೇಹಿ ಕಂಪಾರ್ಟ್ಮೆಂಟ್ ಹೊಂದಿರುವ ಬ್ರೇಕ್ ವ್ಯಾನ್
ಮುಖ್ಯ ವೇಳಾಪಟ್ಟಿ ವಿವರಗಳು
ಕೆಎಸ್ಆರ್ ಬೆಂಗಳೂರು – ಹಾಸನ (ರೈಲು ಸಂ. 06573)
ಕೆಎಸ್ಆರ್ ಬೆಂಗಳೂರು ನಿರ್ಗಮನ: ಬೆಳಗ್ಗೆ 07:30
ಯಶವಂತಪುರ: 07:43ಕ್ಕೆ ಆಗಮನ, 07:45ಕ್ಕೆ ನಿರ್ಗಮನ
ನೆಲಮಂಗಲ: 08:15ಕ್ಕೆ ಆಗಮನ, 08:17ಕ್ಕೆ ನಿರ್ಗಮನ
ಕುಣಿಗಲ್: 08:48ಕ್ಕೆ ಆಗಮನ, 08:50ಕ್ಕೆ ನಿರ್ಗಮನ
ಯಡಿಯೂರು: 09:02ಕ್ಕೆ ಆಗಮನ, 09:04ಕ್ಕೆ ನಿರ್ಗಮನ
ಬಿ.ಜಿ. ನಗರ: 09:18ಕ್ಕೆ ಆಗಮನ, 09:20ಕ್ಕೆ ನಿರ್ಗಮನ
ಶ್ರವಣಬೆಳಗೊಳ: 09:50ಕ್ಕೆ ಆಗಮನ, 09:52ಕ್ಕೆ ನಿರ್ಗಮನ
ಚನ್ನರಾಯಪಟ್ಟಣ: 10:03ಕ್ಕೆ ಆಗಮನ, 10:05ಕ್ಕೆ ನಿರ್ಗಮನ
ಹಾಸನ ತಲುಪುವ ಸಮಯ: ಬೆಳಗ್ಗೆ 11:30
ಹಾಸನ – ಕೆಎಸ್ಆರ್ ಬೆಂಗಳೂರು (ರೈಲು ಸಂ. 06574)
ಹಾಸನದಿಂದ ನಿರ್ಗಮನ: ಮಧ್ಯಾಹ್ನ 03:15
ಚನ್ನರಾಯಪಟ್ಟಣ: 03:43ಕ್ಕೆ ಆಗಮನ, 03:45ಕ್ಕೆ ನಿರ್ಗಮನ
ಶ್ರವಣಬೆಳಗೊಳ: 03:55ಕ್ಕೆ ಆಗಮನ, 03:57ಕ್ಕೆ ನಿರ್ಗಮನ
ಬಿ.ಜಿ. ನಗರ: 04:23ಕ್ಕೆ ಆಗಮನ, 04:25ಕ್ಕೆ ನಿರ್ಗಮನ
ಯಡಿಯೂರು: 04:38ಕ್ಕೆ ಆಗಮನ, 04:40ಕ್ಕೆ ನಿರ್ಗಮನ
ಕುಣಿಗಲ್: 04:53ಕ್ಕೆ ಆಗಮನ, 04:55ಕ್ಕೆ ನಿರ್ಗಮನ
ನೆಲಮಂಗಲ: 05:30ಕ್ಕೆ ಆಗಮನ, 05:32ಕ್ಕೆ ನಿರ್ಗಮನ
ಯಶವಂತಪುರ: 06:30ಕ್ಕೆ ಆಗಮನ, 06:32ಕ್ಕೆ ನಿರ್ಗಮನ
ಕೆಎಸ್ಆರ್ ಬೆಂಗಳೂರು ತಲುಪುವ ಸಮಯ: ರಾತ್ರಿ 07:00
2. ಅರಸೀಕೆರೆ – ಹಾಸನ – ಅರಸೀಕೆರೆ ಕಾಯ್ದಿರಿಸದ ಮೆಮು ರೈಲು (ರೈಲು ಸಂ. 06291 / 06292)
ಸಂಚಾರದ ಅವಧಿ: ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ
ಸಂಚಾರ ದಿನಗಳು: ಭಾನುವಾರಗಳನ್ನು ಹೊರತುಪಡಿಸಿ ವಾರದ ಉಳಿದ ದಿನಗಳಲ್ಲಿ (ಎರಡೂ ದಿಕ್ಕುಗಳಲ್ಲಿ ತಲಾ 12 ಟ್ರಿಪ್ಗಳು).
ಬೋಗಿಗಳ ಸಂಯೋಜನೆ: 8 ಮೆಮು (MEMU) ಕಾರ್ ಬೋಗಿಗಳು
ಮುಖ್ಯ ವೇಳಾಪಟ್ಟಿ ವಿವರಗಳು
ಅರಸೀಕೆರೆ – ಹಾಸನ (ರೈಲು ಸಂ. 06291)
ಅರಸೀಕೆರೆಯಿಂದ ನಿರ್ಗಮನ: ಬೆಳಗ್ಗೆ 11:30
ಹಬ್ಬನಘಟ್ಟ: 11:44ಕ್ಕೆ ಆಗಮನ, 11:45ಕ್ಕೆ ನಿರ್ಗಮನ
ಬಾಗೇಶಪುರ: 11:59ಕ್ಕೆ ಆಗಮನ, 12:00ಕ್ಕೆ ನಿರ್ಗಮನ
ಹಾಸನ ತಲುಪುವ ಸಮಯ: ಮಧ್ಯಾಹ್ನ 12:30
ಹಾಸನ – ಅರಸೀಕೆರೆ (ರೈಲು ಸಂ. 06292)
ಹಾಸನ ನಿರ್ಗಮನ: ಮಧ್ಯಾಹ್ನ 12:45
ಬಾಗೇಶಪುರ: 01:09ಕ್ಕೆ ಆಗಮನ, 01:10ಕ್ಕೆ ನಿರ್ಗಮನ
ಹಬ್ಬನಘಟ್ಟ: 01:26ಕ್ಕೆ ಆಗಮನ, 01:27ಕ್ಕೆ ನಿರ್ಗಮನ
ಅರಸೀಕೆರೆ ತಲುಪುವ ಸಮಯ: ಮಧ್ಯಾಹ್ನ 02:00
ಟಿಕೆಟ್ ಕಾಯ್ದಿರಿಸಲು ಮನವಿ
ಹಾಸನಾಂಬೆ ಮಹೋತ್ಸವದ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಭಕ್ತರು ಸಾಧ್ಯವಾದಷ್ಟು ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಿಕೊಳ್ಳುವುದು ಉತ್ತಮ.

