ರಾಯಚೂರು: ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಹಿರೇಕೊಟ್ನೆಕಲ್ ಸುತ್ತಮುತ್ತ ಜಮೀನಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ.
ಗ್ರಾಮದ ಬಳಿ ನಿರುದ್ಯೋಗಿ ಮಹಿಳೆಯರಿಗೆ ಉದ್ಯೋಗ ನೀಡುವ ನೆಪದಲ್ಲಿ ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿದೆ. ಆಂಧ್ರಪ್ರದೇಶ, ತೆಲಂಗಾಣ, ಬೆಳಗಾವಿ, ಮಹಾರಾಷ್ಟ್ರದಿಂದ ಯುವತಿಯನ್ನು ಕರೆತಂದು ದಂಧೆ ನಡೆಸುತ್ತಿದ್ದ ಕಿಂಗ್ ಪಿನ್, ಮಾನ್ವಿ ಪಟ್ಟಣದ ಇಂದಿರಾ ನಗರದ ನಿವಾಸಿಯಾಗಿರುವ ತಾಯಪ್ಪ ಸೇರಿದಂತೆ 11 ಜನರನ್ನು ಬಂಧಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಮಾನ್ವಿ ಠಾಣೆಯ ಪೊಲೀಸರು ದಾಳಿ ಮಾಡಿದ್ದಾರೆ. ಕಿಂಗ್ ಪಿನ್ ತಾಯಪ್ಪ, ಅಮರೇಶ, ಹುಸೇನಪ್ಪ, ಪ್ರಕಾಶ, ಆದೇಶ್, ವಿಜಯ ಕುಮಾರ, ಶರಣಬಸವ, ಮಲ್ಲಿಕಾರ್ಜುನ ಸೇರಿದಂತೆ 11 ಜನರನ್ನು ಬಂಧಿಸಲಾಗಿದೆ, ದಾಳಿಯ ವೇಳೆ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ. ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

