HomeEntertainmentಕೆಡಿ ಸಿನಿಮಾ ಅಲ್ಲ ಎರಡೂವರೆ ಗಂಟೆ ಟ್ರೈಲರ್, ಅದನ್ನು ನೋಡಿ ಸಿನಿಮಾನ ನೀವೇ ಮಾಡ್ಕೊಬೇಕು; ತಲೆಗೆ...

ಕೆಡಿ ಸಿನಿಮಾ ಅಲ್ಲ ಎರಡೂವರೆ ಗಂಟೆ ಟ್ರೈಲರ್, ಅದನ್ನು ನೋಡಿ ಸಿನಿಮಾನ ನೀವೇ ಮಾಡ್ಕೊಬೇಕು; ತಲೆಗೆ ಹುಳಬಿಟ್ಟ ಪ್ರೇಮ್ಸ್

ಜೋಗಿ ಪ್ರೇಮ್ ನಿರ್ದೇಶನದ ಮತ್ತೊಂದು ಚಿತ್ರ ಕೆಡಿ ದಿ ಡೆವಿಲ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇದೇ ತಿಂಗಳ ಕೊನೆಯ ದಿನದಂದು ( ಏಪ್ರಿಲ್ 30 ) ಕೆಡಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ.

ಇದೇ ಮೊದಲ ಬಾರಿಗೆ ಧ್ರುವ ಸರ್ಜಾ ಜತೆ ಕೈ ಜೋಡಿಸಿರುವ ಪ್ರೇಮ್ ಕೆಲ ಹಾಡುಗಳಲ್ಲಿ ಹಾಗೂ ಟ್ರೈಲರ್‌ಗಳಲ್ಲಿ ತಮ್ಮ ವಿಂಟೇಜ್ ನಿರ್ದೇಶನವನ್ನು ಮತ್ತೆ ತರುವ ಪ್ರಯತ್ನ ಮಾಡಿರುವುದು ಕಂಡುಬಂದಿದ್ದು, ಚಿತ್ರ ಯಾವ ರೀತಿ ಮೂಡಿಬರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಚಿತ್ರದಲ್ಲಿ ದೊಡ್ಡ ತಾರಾಗಣವೇ ಇದ್ದು, ಧ್ರುವ ಸರ್ಜಾಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದರೆ, ಹಿರಿಯ ಕಲಾವಿದರಾದ ರಮೇಶ್ ಅರವಿಂದ್, ರವಿಚಂದ್ರನ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಸಹ ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಕಿಚ್ಚ ಸುದೀಪ್ ಸಹ ವಿಶೇಷ ಪಾತ್ರದಲ್ಲಿ ನಟಿಸಿರುವುದು ಚಿತ್ರದ ಮೇಲೆ ಸಾಮಾನ್ಯ ಪ್ರೇಕ್ಷಕರಿಗೂ ಗಮನಹರಿಯುವಂತೆ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಸದ್ಯ ಚಂದನವನದಲ್ಲಿ ಸದ್ದು ಮಾಡುತ್ತಿರುವ ಕೆಡಿ ಚಿತ್ರದ ಪ್ರಚಾರದಲ್ಲಿ ನಿರತರಾಗಿರುವ ಪ್ರೇಮ್ ಕೈರಾಮ್ ವಾಶಿ ಸಂದರ್ಶನದಲ್ಲಿ ಭಾಗಿಯಾಗಿ ಕೆಡಿ ತಾರಾಗಣದ ಬಗ್ಗೆ ಮಾತನಾಡುವಾಗ ಪ್ರೇಕ್ಷಕರ ತಲೆಗೆ ಹುಳ ಬಿಟ್ಟಿದ್ದಾರೆ.

ಚಿತ್ರದಲ್ಲಿ ಹಿರಿಯ ಕಲಾವಿದರ ಎಲ್ಲ ಪಾತ್ರಗಳಿಗೂ ಸಮಯವಿದೆ, ಸುಮ್ಮನೆ ಬಂದು ಹೋಗುವ ಪಾತ್ರಗಳಲ್ಲ ಎಂದ ಜೋಗಿ ಪ್ರೇಮ್ ಎಲ್ಲ ಪಾತ್ರಗಳಿಗೂ ಸಮರ್ಥನೆ ಇರಲಿದೆ ಎಂದರು.

ಜತೆಗೆ ಈ ಚಿತ್ರ ಕೇವಲ ಚಿತ್ರದ ಹಾಗಲ್ಲ, ಇದೊಂದು ಟ್ರೈಲರ್ ರೀತಿ, ಇಡೀ ಚಿತ್ರವೇ ಒಂದು ಟ್ರೈಲರ್, ಇವಾಗ ನೀವು ಟ್ರೈಲರ್ ನೋಡಿದ್ದೀರಲ್ಲ ಅದು ಎರಡೂವರೆ ನಿಮಿಷದ ಟ್ರೈಲರ್, ಇದು ಎರಡೂವರೆ ಗಂಟೆಯ ಟ್ರೈಲರ್. ಆದರೆ ಪ್ರತಿ ಪಾತ್ರಕ್ಕೂ ಸಮರ್ಥನೆ ಹೋಗುತ್ತೆ. ಚಿತ್ರ ನೋಡಿ ಚಿತ್ರಮಂದಿರದಿಂದ ಹೊರಬರಬೇಕಾದರೆ ಸಿನಿಮಾ ನೀವೇ ಮಾಡಿಕೊಳ್ಳಬೇಕು, ನಾನು ಕಥೆ ಹೇಳುವುದಿಲ್ಲ ಎಂದರು. ಎರಡೂವರೆ ಗಂಟೆ ಟ್ರೈಲರ್ ನೋಡಿ ಅದರಲ್ಲಿ ಪಾತ್ರಗಳು ಕನೆಕ್ಟ್ ಆಗುತ್ತಿರುತ್ತವೆ, ಅದನ್ನು ನೋಡಿ ನೀವೇ ನಿಮಗಿಷ್ಟದ ಹಾಗೆ ಸಿನಿಮಾ ಮಾಡಿಕೊಳ್ಳಬೇಕು ಎಂದು ಪ್ರೇಮ್ ಹೇಳಿಕೊಂಡಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular