ನವದೆಹಲಿ: ಧ್ರುವ ಸರ್ಜಾ ಅಭಿನಯದ ಜೋಗಿ ಪ್ರೇಮ್ ನಿರ್ದೇಶನದ ‘ಕೆಡಿ -ದಿ ಡೆವಿಲ್’ ಚಿತ್ರದಲ್ಲಿನ ವಿವಾದಿತ ಹಾಡಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಸೋಮವಾರ ವಿಚಾರಣೆಗೆ ಹಾಜರಾದ ನಟ ಸಂಜಯ್ ದತ್ ಲಿಖಿತವಾಗಿ ಕ್ಷಮೆಯಾಚಿಸಿದ್ದಾರೆ.
ಉದ್ದೇಶಪೂರ್ವಕವಲ್ಲದ ತಪ್ಪಿನಿಂದ ಸಮಾಜಕ್ಕೆ ಆಗಿರುವ ಹಾನಿಗೆ ವಿಷಾದ ವ್ಯಕ್ತಪಡಿಸುವುದಾಗಿ ಸಂಜಯ್ ದತ್ ಹೇಳಿದ್ದು, ಬುಡಕಟ್ಟು ಜನಾಂಗದ 50 ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಒಪ್ಪಿಕೊಂಡಿದ್ದಾರೆ.
‘ಕೆಡಿ’ ಸಿನಿಮಾದ ಸರ್ಸೇ ಸೆರಗ ಸರ್ಸೆ ಹಾಡಿನ ಹಿಂದಿ ಅವತರಣಿಕೆ ವಿವಾದಕ್ಕೆ ಸಂಬಂಧಿಸಿದಂತೆ ಹಾಡಿಗೆ ಹೆಜ್ಜೆ ಹಾಕಿದ್ದ ನಟ ಸಂಜಯ್ ದತ್ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ವಿಚಾರಣೆಗೆ ಹಾಜರಾಗಿ ಕ್ಷಮೆಯಾಚಿಸಿದ್ದಾರೆ.
ಇನ್ನು ತಪ್ಪು ಮಾಡುವುದಿಲ್ಲ. ಪ್ರಾಯಶ್ಚಿತ್ತವಾಗಿ 50 ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುತ್ತೇನೆ ಎಂದು ಸಂಜಯ್ ದತ್ ತಿಳಿಸಿದ್ದಾರೆ ಭವಿಷ್ಯದಲ್ಲಿ ಸಿನಿಮಾ ಮತ್ತು ಸಂಬಂಧಿತ ಕಾರ್ಯಕ್ರಮಗಳಲ್ಲಿ ಮಹಿಳೆಯರು, ಮಕ್ಕಳ ಘನತೆಯನ್ನು ಖಚಿತಪಡಿಸಿಕೊಂಡು ಒಪ್ಪಂದ ಮಾಡಿಕೊಳ್ಳುವುದಾಗಿ ಸಂಜಯ್ ದತ್ ಹೇಳಿದ್ದಾರೆ.

