HomeLatest NewsBIG NEWS : "ಗರ್ಭಪಾತ ಮಹಿಳೆಯ ಹಕ್ಕು, ಬಲವಂತ ಮಾಡುವಂತಿಲ್ಲ : 15 ವರ್ಷದ ಬಾಲಕಿಯ...

BIG NEWS : “ಗರ್ಭಪಾತ ಮಹಿಳೆಯ ಹಕ್ಕು, ಬಲವಂತ ಮಾಡುವಂತಿಲ್ಲ : 15 ವರ್ಷದ ಬಾಲಕಿಯ ಗರ್ಭಪಾತಕ್ಕೆ ಸುಪ್ರೀಂ ಗ್ರೀನ್ ಸಿಗ್ನಲ್ !

ನವದೆಹಲಿ: “ಗರ್ಭ ಧರಿಸುವುದು ಅಥವಾ ಮಗುವಿಗೆ ಜನ್ಮ ನೀಡುವುದು ಎನ್ನುವುದು ಒಬ್ಬ ಮಹಿಳೆಯ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯ. ಆಕೆಯ ಇಚ್ಛೆಗೆ ವಿರುದ್ಧವಾಗಿ ಗರ್ಭವನ್ನು ಮುಂದುವರಿಸುವಂತೆ ಬಲವಂತ ಮಾಡುವ ಹಕ್ಕು ಯಾವುದೇ ನ್ಯಾಯಾಲಯಕ್ಕಿಲ್ಲ” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಏಳು ತಿಂಗಳ ಗರ್ಭವನ್ನು ತೆಗೆದುಹಾಕಲು 15 ವರ್ಷದ ಬಾಲಕಿಗೆ ಅನುಮತಿ ನೀಡುತ್ತಾ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ಭುಯಾನ್ ಅವರ ಪೀಠವು ಈ ಮಹತ್ವದ ಹೇಳಿಕೆ ನೀಡಿದೆ.

ಜೀವಿಸುವ ಹಕ್ಕಿನ ಉಲ್ಲಂಘನೆ: “ಇಷ್ಟವಿಲ್ಲದ ಗರ್ಭವನ್ನು ಹೊರುವಂತೆ ಬಲವಂತ ಮಾಡುವುದು ಸಂವಿಧಾನದ 21ನೇ ವಿಧಿಯ (ಜೀವಿಸುವ ಹಕ್ಕು) ಉಲ್ಲಂಘನೆಯಾಗಿದೆ” ಎಂದು ಕೋರ್ಟ್ ಹೇಳಿದೆ. ಈ ಬಾಲಕಿ ಈಗಾಗಲೇ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿರುವುದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಗರ್ಭ ಮುಂದುವರಿಸುವುದರಿಂದ ಆಕೆಯ ಮಾನಸಿಕ ಆರೋಗ್ಯ ಮತ್ತು ಭವಿಷ್ಯಕ್ಕೆ ಧಕ್ಕೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದೆ.

ದತ್ತತ್ತು ಪರಿಹಾರವಲ್ಲ: ಸರ್ಕಾರಿ ಪರ ವಕೀಲರು, “ಏಳು ತಿಂಗಳ ಗರ್ಭಪಾತ ಅಪಾಯಕಾರಿ, ಮಗು ಹುಟ್ಟಿದ ನಂತರ ದತ್ತತ್ತು ನೀಡಲು ವ್ಯವಸ್ಥೆ ಮಾಡುತ್ತೇವೆ” ಎಂದು ಸಲಹೆ ನೀಡಿದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗರತ್ನ ಅವರು, “ಮಗುವನ್ನು ದತ್ತತ್ತು ನೀಡಬಹುದು ಎಂಬ ಕಾರಣಕ್ಕೆ ಮೈನರ್ ಬಾಲಕಿಯನ್ನು ಹೆರಿಗೆಗೆ ಒತ್ತಾಯಿಸುವುದು ಹೇಗೆ? ಇಲ್ಲಿ ಗರ್ಭಿಣಿಯ ಇಚ್ಛೆಯೇ ಮುಖ್ಯ. ಹುಟ್ಟಲಿರುವ ಮಗುವಿಗಿಂತ ನಮಗೆ ಆಕೆಯ ಕ್ಷೇಮವೇ ಮುಖ್ಯ” ಎಂದು ಸ್ಪಷ್ಟಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಕ್ರಮ ಕೇಂದ್ರಗಳ ಭಯ: ಒಂದು ವೇಳೆ ನ್ಯಾಯಾಲಯವು ಗರ್ಭಪಾತಕ್ಕೆ ಅನುಮತಿ ನಿರಾಕರಿಸಿದರೆ, ಸಂತ್ರಸ್ತೆಯರು ಪ್ರಾಣಕ್ಕೆ ಸಂಚಕಾರ ತರುವಂತಹ ಅಕ್ರಮ ಮತ್ತು ಅಸುರಕ್ಷಿತ ಗರ್ಭಪಾತ ಕೇಂದ್ರಗಳನ್ನು ಆಶ್ರಯಿಸಬಹುದು. ಇದು ಅವರ ಜೀವಕ್ಕೆ ಮತ್ತಷ್ಟು ಮುಪ್ಪು ತರಬಹುದು ಎಂದು ಪೀಠವು ಎಚ್ಚರಿಸಿದೆ.

ನ್ಯಾಯಾಲಯದ ನಿರ್ದೇಶನ

ವೈದ್ಯಕೀಯ ರಿಸ್ಕ್‌ಗಳಿಗಿಂತ ಸಂತ್ರಸ್ತೆಯ ಮಾನಸಿಕ ವೇದನೆಗೆ ಆದ್ಯತೆ ನೀಡಿದ ಸುಪ್ರೀಂ ಕೋರ್ಟ್, ದೆಹಲಿಯ ಏಮ್ಸ್ (AIIMS) ಆಸ್ಪತ್ರೆಯಲ್ಲಿ ಎಲ್ಲಾ ಮುನ್ನೆಚ್ಚರಿಕೆಗಳೊಂದಿಗೆ ಗರ್ಭಪಾತ ಪ್ರಕ್ರಿಯೆಯನ್ನು ನಡೆಸುವಂತೆ ಆದೇಶಿಸಿದೆ. “ಒಬ್ಬ ವ್ಯಕ್ತಿಯ ದೇಹದ ಮೇಲೆ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಹಕ್ಕು ಆ ವ್ಯಕ್ತಿಗೇ ಇರುತ್ತದೆ” ಎಂದು ನ್ಯಾಯಾಲಯ ಸಾರಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular