ಬೆಂಗಳೂರು: ‘ಫಾರ್ಮ್-7’ ಅರ್ಜಿಗಳಿಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕರ್ತರ ವಿರುದ್ಧ ಎಫ್ಐಆರ್ (FIR) ದಾಖಲಿಸುವುದನ್ನು ಹಾಗೂ ಪರಿಶೀಲನೆಯನ್ನು ನಿಲ್ಲಿಸುವಂತೆ ಕೋರಿ ಕರ್ನಾಟಕ ಬಿಜೆಪಿಯ ಉನ್ನತ ಮಟ್ಟದ ನಿಯೋಗವು ಡಿಜಿ-ಐಜಿಪಿ ಎಂ.ಎ. ಸಲೀಂ ಅವರನ್ನು ಭೇಟಿ ಮಾಡಿದ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, “ಅವರು ಫಾರ್ಮ್-7 ಅನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರೆ, ನಾವೇನು ಅವರಿಗೆ ‘ಭಾರತ ರತ್ನ’ ನೀಡಬೇಕೇ?… ಎಂದು ಗರಂ ಆಗಿದ್ದಾರೆ.
ಈ ರೀತಿಯ ಬೃಹತ್ ಪ್ರಮಾಣದ ಮತ್ತು ಮೊದಲೇ ಮುದ್ರಿತವಾದ (pre-printed) ಫಾರ್ಮ್-7 ಅರ್ಜಿಗಳು ಕೇವಲ ಬಿಜೆಪಿಯಿಂದಲೇ ಏಕೆ ಬರುತ್ತಿವೆ?… ನೀವು ದೇಶದ ಕಾನೂನನ್ನು ಪಾಲಿಸದಿದ್ದರೆ, ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುವುದನ್ನು ನಾವು ಖಚಿತಪಡಿಸುತ್ತೇವೆ ಎಂದರು.
ಇದು ಗುಜರಾತ್, ದೆಹಲಿ ಅಥವಾ ಉತ್ತರ ಪ್ರದೇಶವಲ್ಲ, ಅಥವಾ ಇಂತಹ ಕೃತ್ಯಗಳನ್ನು ಎಸಗಿದರೂ ಸುಲಭವಾಗಿ ಪಾರಾಗಬಹುದು ಎಂದುಕೊಳ್ಳಲು ಬೇರೆ ರಾಜ್ಯವಲ್ಲ. ಮತದಾರರ ಗುರುತಿನ ಚೀಟಿ ಸಂಖ್ಯೆಗಳು (EPIC numbers), ಹೆಸರುಗಳು, ವಿಳಾಸಗಳು ಮತ್ತು ಲೋಪದೋಷಗಳ ವಿವರಗಳನ್ನು ಒಳಗೊಂಡಿರುವ 1,000 ಮೊದಲೇ ಮುದ್ರಿತ ಅರ್ಜಿಗಳು ಅವರಿಗೆ ಹೇಗೆ ಸಿಗುತ್ತಿವೆ? ಅವರು ಜೀವಂತವಾಗಿರುವವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸುತ್ತಿದ್ದಾರೆ. ಅಂದರೆ ಬಿಜೆಪಿಯವರು ಈಗ ಚುನಾವಣಾ ಆಯೋಗದ ಕೆಲಸವನ್ನು ಮಾಡುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಹಾಗಾದರೆ ಎಸ್ಐಆರ್ (SIR)ನ ಉದ್ದೇಶವೇನಿತ್ತು? ಫಾರ್ಮ್ -7 ದುರುಪಯೋಗಪಡಿಸಿಕೊಳ್ಳುತ್ತಿದ್ದರು ಸುಮ್ಮನೇ ಬಿಟ್ಟು ಬಿಡಲು ಎಸ್ಐಆರ್ ಆರಂಭಿಸಿದ್ದದರೂ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಕೆಆರ್ಎಸ್ ಬಳಿ ನಡೆಯಬೇಕಿದ್ದ ಕಾವೇರಿ ಆರತಿ ಕಾರ್ಯಕ್ರಮ ಮುಂದೂಡಿಕೆ
ಕೆ.ಆರ್.ಎಸ್ ಜಲಾಶಯದ ಬಳಿ ನಡೆಯಬೇಕಿದ್ದ ಕಾವೇರಿ ಆರತಿ ಕಾರ್ಯಕ್ರಮ ಮುಂದೂಡಿಕೆಯಾಗಿದೆ. ಕಾಶಿಯಲ್ಲಿ ಗಂಗಾ ಆರತಿ ನಡೆಯುವ ಮಾದರಿಯಲ್ಲಿಯೇ ಕೆ.ಆರ್.ಎಸ್ ಬಳಿ ಕಾವೇರಿ ಆರತಿ ಕಾರ್ಯಕ್ರಮ ನಡೆಯುತ್ತದೆ. ಆದರೆ ಈ ಬಾರಿ ಕಾರ್ಯಕ್ರಮದ ದಿನಾಂಕ ಮುಂದೂಡಲಾಗಿದೆ.
ಅಕ್ಟೋಬರ್ 11ರಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯ ಮುಂಭಾಗ ನಡೆಯಬೇಕಿದ್ದ ಕಾವೇರಿ ಆರತಿ ಮುಂದೂಡಿಕೆಯಾಗಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಬೇಕಿತ್ತು. ಆದರೆ ಅಂದು ಸಿಎಂಗೆ ಪೂರ್ವ ನಿಯೋಜಿತ ಕಾರ್ಯಕ್ರಮ ನಿಗದಿ ಹಿನ್ನೆಲೆಯಲ್ಲಿ, ಅಕ್ಟೋಬರ್ 18ರಿಂದ 23ರವರೆಗೆ ಕಾವೇರಿ ಆರತಿ ನಡೆಸಲು ನಿರ್ಧಾರಿಸಲಾಗಿದೆ.
ಉತ್ತರ ಭಾರತದ ಗಂಗಾ ಆರತಿಯ ಮಾದರಿಯಲ್ಲಿ ದಕ್ಷಿಣ ಭಾರತದ ಜೀವನದಿ ಕಾವೇರಿಗೆ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯಂತೆ ಆರತಿ ಮತ್ತು ಪೂಜೆ ಸಲ್ಲಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 18ರಿಂದ 23ರವರೆಗೆ ಕಾವೇರಿ ಆರತಿ ಕಾರ್ಯಕ್ರಮ ನಡೆಯಲಿದೆ.

