HomeKarnatakaಅತ್ತೆ ಮಗಳೊಂದಿಗೆ ನಿಶ್ಚಿತಾರ್ಥ; ದೈಹಿಕ ಸಂಪರ್ಕವನ್ನೂ ಬೆಳೆಸಿ ಕೈಕೊಟ್ಟು ಬೇರೊಂದು ಯುವತಿಯನ್ನು ಮದುವೆಯಾದ ಸರ್ಕಾರಿ ಶಾಲೆ...

ಅತ್ತೆ ಮಗಳೊಂದಿಗೆ ನಿಶ್ಚಿತಾರ್ಥ; ದೈಹಿಕ ಸಂಪರ್ಕವನ್ನೂ ಬೆಳೆಸಿ ಕೈಕೊಟ್ಟು ಬೇರೊಂದು ಯುವತಿಯನ್ನು ಮದುವೆಯಾದ ಸರ್ಕಾರಿ ಶಾಲೆ ಶಿಕ್ಷಕ

ಕೊಪ್ಪಳ: ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಅಡಿಪಾಯ ಹಾಕಿ, ಮಾರ್ಗದರ್ಶನ ನೀಡಿ ಮುನ್ನಡೆಸಬೇಕಾದ ಶಿಕ್ಷಕನೇ ದಾರಿ ತಪ್ಪಿದರೆ ಹೇಗೆ? ಇಲ್ಲೋರ್ವ ಸರ್ಕಾರಿ ಶಾಲೆಯ ಶಿಕ್ಷಕ ತನ್ನ ಅತ್ತೆಯ ಮಗಳಿಗೇ ಮೋಸ ಮಾಡಿ ಕೈಕೊಟ್ಟು, ಬೇರೊಂದು ಯುವತಿಯನ್ನು ಮದುವೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಕನ್ನೇರಮಡುವಿನಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕ ಬಸವರಾಜ್ ಎಂಬಾತ ತನ್ನ ಅತ್ತೆಯ ಮಗಳನ್ನು ಪ್ರೀತಿಸಿ, ನಿಶ್ಚಿತಾರ್ಥ ಮಾಡಿಕೊಂಡು ದೈಹಿಕ ಸಂಪರ್ಕ ಬೆಳೆಸಿ ಬಳಿಕ ಬೇರೊಂದು ಯುವತಿಯನ್ನು ವಿವಾಹವಾಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ವಂತ ಅತ್ತೆ ಮಗಳನ್ನೇ ಐದು ವರ್ಷಗಳಿಂದ ಪ್ರೀತಿಸಿ, ದೈಹಿಕವಾಗಿ ಬಳಸಿಕೊಂಡು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥವನ್ನೂ ಮಾಡಿಕೊಂಡು ಈಗ ಕೈಕೊಟ್ಟಿದ್ದಾನೆ. ಅಲ್ಲದೇ ಮತ್ತೊಬ್ಬಳ ಜೊತೆ ಮದುವೆಯಾಗಿದ್ದಾನೆ. ವಿವಾಹದ ಬಳಿಕ ವಿವಾಹ ನೋಂದಣಿ ಪತ್ರವನ್ನು ಅತ್ತೆ ಮಗಳಿಗೆ ಕಳುಹಿಸಿದ್ದಾನೆ. ಇದರಿಂದ ನೊಂದ ಯುವತಿ, ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಹುಲಸನಟ್ಟಿ ಮೂಲದ ಯುವತಿ ಕರೆಮ್ಮಾ ಕೊಪ್ಪಳದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎಸ್ಸಿ ಓದುತ್ತಿದ್ದಾಗಿನಿಂದಲೂ ಬಸವರಾಜನ ಜೊತೆ ಸಂಪರ್ಕವಿತ್ತು. ಸ್ವಂತ ಅತ್ತೆ ಮಗ ಎನ್ನುವ ಕಾರಣಕ್ಕೆ ಯುವತಿ ಆತನ ಪ್ರೀತಿಯನ್ನು ನಂಬಿದ್ದಳು. ಸರ್ಕಾಅರಿ ನೌಕರಿ ಸಿಕ್ಕ ತಕ್ಷಣ ಮದುವೆಯಾಗುವುದಾಗಿ ನಂಬಿಸಿದ್ದ ಬಸವರಾಜ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದನಂತೆ. ಇಷ್ಟೇ ಅಲ್ಲದೆ, ಕನಕಗಿರಿ ತಾಲೂಕಿನ ಕನ್ನೇರಮಡುವಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದ. ಆದರೆ, ಈಗ ಸರಕಾರಿ ಶಿಕ್ಷಕನ ನೌಕರಿ ಸಿಗುತ್ತಿದ್ದಂತೆ ಪ್ರೀತಿಸಿದ ಅತ್ತೆ ಮಗಳನ್ನು ಬಿಟ್ಟು, ರತ್ನವ್ವ ಎಂಬ ಯುವತಿಯೊಂದಿಗೆ ರಹಸ್ಯವಾಗಿ ವಿವಾಹವಾಗಿದ್ದಾನೆ.

ಅಲ್ಲದೇ ಮದುವೆ ರಿಜಿಸ್ಟರ್ ಆಗಿದ್ದಾಗಿ ಅತ್ತೆ ಮಗಳು ಹಾಗೂ ಆಕೆಯ ಪೋಷಕರಿಗೆ ಪತ್ರ ಕಳುಹಿಸಿದ್ದಾನೆ. ಇದರಿಂದ ಆಘಾತಕ್ಕೊಳಗಾಗಿರುವ ಯುವತಿ ಹಾಗೂ ಕುಟುಂಬದವರು ನ್ಯಾಯಕ್ಕಾಗಿ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಬಸವರಾಜ್ ಗೆ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular