ಬೆಂಗಳೂರು: ರಾಜ್ಯದ ಎಲ್ಲಾ ಶಾಸಕರು, ಸಂಸದರಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಚಿತವಾಗಿ ಐಪಿಎಲ್ ಪಂದ್ಯ ವೀಕ್ಷಿಸುವ ಅವಕಾಶ ದೊರೆತಿದೆ.
ಜನಪ್ರತಿನಿಧಿಗಳಿಗೆ ತಲಾ ಐದು ಉಚಿತ ಟಿಕೇಟ್ ನೀಡಬೇಕೆಂದು ವಿಧಾನಸಭೆ ಅಧಿವೇಶನದಲ್ಲಿ ಶಾಸಕರು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಒಪ್ಪಿದ್ದು ಶನಿವಾರ ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಶಾಸಕರಿಗೆ ತಲಾ ಎರಡು ಟಿಕೆಟ್ ನೀಡಲು ಮತ್ತು ಮುಂದಿನ ಐಪಿಎಲ್ ಪಂದ್ಯಗಳಿಗೆ ತಲಾ ನಾಲ್ಕು ಉಚಿತ ಟಿಕೆಟುಗಳನ್ನು ವಿತರಿಸಲಾಗುವುದು.
ಕೆ.ಎಸ್.ಸಿ.ಎ. ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಶುಕ್ರವಾರ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು, ಶಾಸಕರ ಅಪೇಕ್ಷೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇಂದಿನ ಪಂದ್ಯಗಳಿಗೆ ಎರಡು, ಮುಂದಿನ ಪಂದ್ಯಗಳಿಗೆ 4 ಟಿಕೆಟ್ ನೀಡಲಾಗುವುದು ಎನ್ನಲಾಗಿದೆ.

