ಬೆಂಗಳೂರು : ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 19ನೇ ಆವೃತ್ತಿಯ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳನ್ನು 28.03.2026 ಮತ್ತು 05.04.2026 ರಂದು ಆಯೋಜಿಸಿರುವ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆ ನಿರ್ಬಂಧ ಹೇರಲಾಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 19ನೇ ಆವೃತ್ತಿಯ ಐಪಿಎಲ್ (IPL) ಕ್ರಿಕೆಟ್ ಪಂದ್ಯಾವಳಿಗಳು ಆರಂಭವಾಗುತ್ತಿದ್ದು, ಮಾರ್ಚ್ 28, 2026 ಮತ್ತು ಏಪ್ರಿಲ್ 05, 2026 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಪ್ರೇಕ್ಷಕರ ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಬೆಂಗಳೂರು ಸಂಚಾರಿ ಪೊಲೀಸರು ವಿಶೇಷ ಮಾರ್ಗಸೂಚಿ ಪ್ರಕಟಿಸಿದ್ದಾರೆ.ಆದ್ದರಿಂದ, ಸಂಚಾರಕ್ಕೆ ಬರುವ ಸಾರ್ವಜನಿಕರು ತಮ್ಮ ಪ್ರಯಾಣವನ್ನು ಮುಂಚಿತವಾಗಿಯೇ ಯೋಜಿಸಲು ಮತ್ತು ಪರ್ಯಾಯ ಮಾರ್ಗಗಳು ಹಾಗೂ ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳನ್ನು ಬಳಸುವ ಮೂಲಕ ಸುಗಮ ಸಂಚಾರಕ್ಕೆ ಸಹಕರಿಸಲು ಕೋರಲಾಗಿದೆ.
- ವಾಹನ ನಿಲುಗಡೆ ನಿಷೇಧಿಸಿರುವ ರಸ್ತೆಗಳು (No Parking Zones):
ಪಂದ್ಯ ನಡೆಯುವ ದಿನಗಳಂದು ಈ ಕೆಳಗಿನ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ:
• ಕ್ವೀನ್ಸ್ ರಸ್ತೆ, ಎಂ.ಜಿ. ರಸ್ತೆ ಮತ್ತು ಲಿಂಕ್ ರಸ್ತೆ.
• ರಾಜಭವನ ರಸ್ತೆ, ಟಿ.ಚೌಡಯ್ಯ ರಸ್ತೆ ಮತ್ತು ರೇಸ್ ಕೋರ್ಸ್ ರಸ್ತೆ.
• ಕಬ್ಬನ್ ರಸ್ತೆ, ಸೆಂಟ್ರಲ್ ಸ್ಟ್ರೀಟ್ ಮತ್ತು ಸೇಂಟ್ ಮಾರ್ಕ್ಸ್ ರಸ್ತೆ.
• ಮ್ಯೂಸಿಯಂ ರಸ್ತೆ, ಕಸ್ತೂರಬಾ ರಸ್ತೆ ಮತ್ತು ಲ್ಯಾವೆಲ್ಲಿ ರಸ್ತೆ.
• ವಿಠಲ್ ಮಲ್ಯ ರಸ್ತೆ ಮತ್ತು ಕಬ್ಬನ್ ಪಾರ್ಕ್ ಒಳಗಿನ ರಸ್ತೆಗಳು. - ವಾಹನ ನಿಲುಗಡೆಗೆ ಅವಕಾಶವಿರುವ ಸ್ಥಳಗಳು (Parking Available At):
ವಾಹನ ಸವಾರರು ತಮ್ಮ ವಾಹನಗಳನ್ನು ಈ ಕೆಳಗಿನ ನಿಗದಿತ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಬಹುದು:
• ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ.
• ಸೇಂಟ್ ಜೋಸೆಫ್ ಯುರೋಪಿಯನ್ ಸ್ಕೂಲ್ ಮೈದಾನ (ಮ್ಯೂಸಿಯಂ ರಸ್ತೆ).
• ಫ್ರೀಡಂ ಪಾರ್ಕ್ ಮತ್ತು ಗರುಡಾ ಮಾಲ್ ಪಾರ್ಕಿಂಗ್ ಸ್ಥಳ.
• ಶಿವಾಜಿನಗರ ಬಸ್ ನಿಲ್ದಾಣದ 1ನೇ ಮಹಡಿ. - ಸ್ಟೇಡಿಯಂ ಪ್ರವೇಶಕ್ಕೆ ಸೂಚನೆಗಳು:
• ಗೇಟ್ ನಂ. 1 ರಿಂದ 3 ಮತ್ತು 18 ರಿಂದ 23: ಕಬ್ಬನ್ ರಸ್ತೆ ಮೂಲಕ ಪ್ರವೇಶಿಸಬಹುದು.
• ಗೇಟ್ ನಂ. 11 ರಿಂದ 17: ಲಿಂಕ್ ರಸ್ತೆ ಮೂಲಕ ಪ್ರವೇಶಿಸಲು ಅವಕಾಶವಿದೆ.
• ಕ್ಯಾಬ್/ಆಟೋ ಪಿಕ್-ಅಪ್ ಮತ್ತು ಡ್ರಾಪ್: ಬಿಆರ್ ವಿ ಮೈದಾನ (BRV Ground) ಅಥವಾ ಮಾಣಿಕ್ ಶಾ ಪರೇಡ್ ಮೈದಾನದ ಬಳಿ ನಿಗದಿಪಡಿಸಲಾಗಿದೆ.
ಪೊಲೀಸರ ವಿಶೇಷ ಮನವಿ
ಕ್ರೀಡಾಂಗಣಕ್ಕೆ ಬರುವ ಪ್ರೇಕ್ಷಕರು ಸಂಚಾರ ದಟ್ಟಣೆಯನ್ನು ತಪ್ಪಿಸಲು ಸಾಧ್ಯವಾದಷ್ಟು ಬಿಎಂಟಿಸಿ (BMTC) ಬಸ್ ಅಥವಾ ಮೆಟ್ರೋ (Metro) ಸೇವೆಗಳನ್ನು ಬಳಸುವಂತೆ ಬೆಂಗಳೂರು ಸಂಚಾರಿ ಪೊಲೀಸರು ವಿನಂತಿಸಿದ್ದಾರೆ.

