HomeBusinessಯುದ್ಧದ ನಡುವೆಯೂ ಚಿನ್ನದ ಬೆಲೆ ಕುಸಿತ: 4 ದಶಕದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ವಿದ್ಯಮಾನ...

ಯುದ್ಧದ ನಡುವೆಯೂ ಚಿನ್ನದ ಬೆಲೆ ಕುಸಿತ: 4 ದಶಕದ ಇತಿಹಾಸದಲ್ಲೇ ಮೊದಲ ಬಾರಿಗೆ ಇಂತಹ ವಿದ್ಯಮಾನ ಕಾರಣಗಳೇನು?

ಬೆಂಗಳೂರು: ಸಾಮಾನ್ಯವಾಗಿ ಜಗತ್ತಿನ ಯಾವುದಾದರೂ ಮೂಲೆಯಲ್ಲಿ ಯುದ್ಧದ ಕಾರ್ಮೋಡ ಕವಿದರೆ ಸಾಕು ಚಿನ್ನದ ಬೆಲೆ ರಾಕೆಟ್ ವೇಗದಲ್ಲಿ ಏರುತ್ತಿತ್ತು. ಆದರೆ, ಪ್ರಸ್ತುತ ಇರಾನ್ ಸಂಘರ್ಷದ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಅನಿರೀಕ್ಷಿತವಾಗಿ ಕುಸಿಯುವ ಮೂಲಕ ಇತಿಹಾಸವನ್ನೇ ತಿರುಗಿಬರೆದಿವೆ. ಹೂಡಿಕೆದಾರರ ಪಾಲಿನ ಸುರಕ್ಷಿತ ಸ್ವರ್ಗ ಎನ್ನಲಾಗುವ ಚಿನ್ನದ ಮೇಲೆ ಈಗ ಯುದ್ಧಕ್ಕಿಂತ ಹೆಚ್ಚಾಗಿ ಆರ್ಥಿಕ ಅಂಶಗಳು ಪ್ರಭಾವ ಬೀರುತ್ತಿವೆ.

ಇತಿಹಾಸದಲ್ಲಿ ಕಾಣದ ಕುಸಿತ

ಇರಾನ್ ಯುದ್ಧ ಆರಂಭವಾಗಿ 4 ವಾರಗಳಾಗಿದ್ದು, ಚಿನ್ನದ ಬೆಲೆ ಏರಿಕೆಯಾಗುತ್ತದೆ ಎಂದು ಭಾವಿಸಿದ್ದ ಎಲ್ಲರ ಲೆಕ್ಕಾಚಾರ ಉಲ್ಟಾ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ 25 ದಿನಗಳಲ್ಲಿ ಚಿನ್ನದ ಬೆಲೆ ಸುಮಾರು 2,500 ರಿಂದ 3,000 ರೂ. ಇಳಿಕೆಯಾಗಿದೆ.ಬೆಳ್ಳಿ ಕೂಡ ಕೆಜಿಗೆ ಸುಮಾರು 60,000 ರೂ. ಕುಸಿತ ಕಂಡಿದೆ.

ಇದು 1983ರ ನಂತರದ (ಸುಮಾರು 43 ವರ್ಷಗಳ ಬಳಿಕ) ದಾಖಲಾದ ಅತಿದೊಡ್ಡ ವಾರದ ಕುಸಿತವಾಗಿದೆ.ಹಿಂದಿನ ಯುದ್ಧಗಳಲ್ಲಿ ಬೆಲೆ ಏರಿಕೆಯಾಗಿತ್ತು

ಹಿಂದಿನ ಇತಿಹಾಸವನ್ನು ಗಮನಿಸಿದರೆ ಯುದ್ಧದ ಸಮಯದಲ್ಲಿ ಚಿನ್ನದ ಬೆಲೆ ಏರುತ್ತಲೇ ಬಂದಿದೆ ವಿಯೆಟ್ನಾಂ ಯುದ್ಧ ಬೆಲೆ ಸುಮಾರು 5 ಪಟ್ಟು ಏರಿಕೆಯಾಗಿತ್ತು.

ರಷ್ಯಾ-ಉಕ್ರೇನ್ ಯುದ್ಧ: ಬೆಲೆ ಸುಮಾರು 15% ರಷ್ಟು ಜಿಗಿದಿತ್ತು.ಇಸ್ರೇಲ್-ಹಮಾಸ್ ಯುದ್ಧ: 10 ಗ್ರಾಂ ಚಿನ್ನದ ಬೆಲೆ 58 ಸಾವಿರದಿಂದ 75 ಸಾವಿರದ ಗಡಿ ದಾಟಿತ್ತು.

ಈ ಬಾರಿ ಬೆಲೆ ಇಳಿಕೆಗೆ ಕಾರಣವೇನು?

ಯುದ್ಧದ ಬಿಸಿಯ ನಡುವೆಯೂ ಬಂಗಾರ ತಣ್ಣಗಾಗಲು ಪ್ರಮುಖ 4 ಕಾರಣಗಳಿವೆ:

ಡಾಲರ್ ಎದುರು ರೂಪಾಯಿ ಕುಸಿತ: ಡಾಲರ್ ಸೂಚ್ಯಂಕ ಬಲಗೊಂಡಿದೆ. ಹೂಡಿಕೆದಾರರು ಚಿನ್ನಕ್ಕಿಂತಲೂ ಅಮೆರಿಕನ್ ಡಾಲರ್ ಮೇಲೆ ಹೆಚ್ಚು ನಂಬಿಕೆ ಇಟ್ಟು ಹೂಡಿಕೆ ಮಾಡುತ್ತಿದ್ದಾರೆ.

ಅಮೆರಿಕದ ಫೆಡರಲ್ ರಿಸರ್ವ್ ನಿಲುವು: ಕಚ್ಚಾ ತೈಲ ಬೆಲೆ ಏರಿಕೆಯಿಂದ ಹಣದುಬ್ಬರ ಹೆಚ್ಚಿದೆ. ಹೀಗಾಗಿ ಅಮೆರಿಕ ಬಡ್ಡಿದರ ಇಳಿಸಲು ನಿರಾಕರಿಸಿದೆ. ಹೂಡಿಕೆದಾರರು 0% ಬಡ್ಡಿ ನೀಡುವ ಚಿನ್ನಕ್ಕಿಂತ, ಹೆಚ್ಚಿನ ಬಡ್ಡಿ ನೀಡುವ ಅಮೆರಿಕದ ಸರ್ಕಾರಿ ಬಾಂಡ್‌ಗಳತ್ತ ಆಕರ್ಷಿತರಾಗುತ್ತಿದ್ದಾರೆ.

ನಗದು ಲಭ್ಯತೆ (Liquidity): ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾದಾಗ ಹೂಡಿಕೆದಾರರು ನಷ್ಟ ಸರಿದೂಗಿಸಲು ಚಿನ್ನವನ್ನು ಮಾರಿ ನಗದು ಮಾಡಿಕೊಳ್ಳುತ್ತಿದ್ದಾರೆ.

ಪ್ರಾಫಿಟ್ ಬುಕ್ಕಿಂಗ್: ಕಳೆದ ವರ್ಷ ಚಿನ್ನ ಗರಿಷ್ಠ ಲಾಭ ನೀಡಿತ್ತು. ಈಗ ಬೆಲೆ ಇಳಿಯುವ ಮುನ್ಸೂಚನೆ ಸಿಗುತ್ತಿದ್ದಂತೆ ಹೂಡಿಕೆದಾರರು ತಮ್ಮ ಪಾಲಿನ ಚಿನ್ನವನ್ನು ಮಾರಿ ಲಾಭವನ್ನು ನಗದೀಕರಿಸುತ್ತಿದ್ದಾರೆ.

ಭವಿಷ್ಯದಲ್ಲಿ ಏನಾಗಬಹುದು?

ತಜ್ಞರ ಪ್ರಕಾರ, ಚಿನ್ನದ ದರ ಗ್ರಾಂಗೆ 10,000 ರೂ. ಅಥವಾ 10 ಗ್ರಾಂಗೆ ಒಂದು ಲಕ್ಷಕ್ಕಿಂತ ಕೆಳಗೆ ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗುತ್ತಿದೆ. ಆದರೆ ಈ ಬೆಲೆ ಇಳಿಕೆ ಕೇವಲ ತಾತ್ಕಾಲಿಕ ಎನ್ನುವುದು ಮಾರುಕಟ್ಟೆ ಪಂಡಿತರ ಅಭಿಪ್ರಾಯ. ಯುದ್ಧ ತೀವ್ರಗೊಂಡರೆ ಅಥವಾ ಡಾಲರ್ ಮೌಲ್ಯದಲ್ಲಿ ಬದಲಾವಣೆಯಾದರೆ ಮತ್ತೆ ಏರಿಳಿತ ಕಾಣಬಹುದು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular