ಬೆಂಗಳೂರು: ಮಾರ್ಚ್ 22 ರಿಂದ 25 ರವರೆಗೆ ಬೆಸ್ಕಾಂ ವ್ಯಾಪ್ತಿಯ ವಿವಿಧೆಡೆಗಳಲ್ಲಿ ವಿದ್ಯುತ್ ವ್ಯತ್ಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ಬೆಸ್ಕಾಂ ವ್ಯಾಪ್ತಿಯ ಹಲವು ಕಡೆಗಳಲ್ಲಿ ಮಾರ್ಚ್ 22 ರಿಂದ 25 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಈ ಬಗ್ಗೆ ಬೆಸ್ಕಾಂ ಅಧಿಕೃತವಾಗಿ ಪ್ರಕಟಣೆ ಹೊರಡಿಸಿದೆ.
ಮಾರ್ಚ್ 22ರಂದು ಕೆಲವು ಪ್ರದೇಶಗಳಲ್ಲಿ ನಿರ್ವಹಣಾ ಮತ್ತು ಲೈನ್ ಅಪ್ಗ್ರೇಡ್ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಇರಲಿದೆ. ಇದರ ಪರಿಣಾಮವಾಗಿ ಅನೇಕ ಬಡಾವಣೆಗಳು ಮತ್ತು ಕೈಗಾರಿಕಾ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ.
ಇನ್ನು ಮಾರ್ಚ್ 23ರಿಂದ 25ರವರೆಗೆ ಹೆಚ್ಟಿ ರೀಕಂಡಕ್ಟರಿಂಗ್ ಕಾಮಗಾರಿಗಳ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಈ ದಿನಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಇರಲಿದೆ ಎಂದು ತಿಳಿಸಲಾಗಿದೆ.
ಮಾರ್ಚ್ 22ರಂದು ಚಿತ್ರದುರ್ಗ ವ್ಯಾಪ್ತಿಯ ಎಚ್.ಡಿ.ಪುರ, ತಾಳ್ಯ ಕಾವಲು, ಉಪ್ಪರಿಗೇನಹಳ್ಳಿ, ಬೂದಿಪುರ, ನಲ್ಲಿಕಟ್ಟೆ, ತಾಳ್ಯ, ಮತ್ತಿಘಟ್ಟ, ಕೆರೆಯಾಗಲಹಳ್ಳಿ, ಚೌಡಗೊಂಡನಹಳ್ಳಿ, ತೇಕಲವಟ್ಟಿ, ಬಿ.ಆರ್.ಗುಡಿ, ಚಾಮುಂಡೇಶ್ವರಿ, ಮಹದೇವನಕಟ್ಟೆ, ದೊಡ್ಡಾಪುರ, ಕಕ್ಕೇರು, ಹೋಸೂರು, ಜುಂಜಪ್ಪ ಮಾರ್ಗ, ಗೊಡಬನಹಾಳ್, ಅನ್ನೆಹಾಳು, ವಜ್ರ ಮಾರ್ಗ, ಈಚಘಟ್ಟ, ಟಿ.ನುಲೆನೂರು, ಬಿ.ಜಿಹಳ್ಳಿ, ಚಿತ್ರಹಳ್ಳಿ, ಮದ್ದೇರು, ಶಿವಗಂಗ, ಲಿಂಗದಹಳ್ಳಿ, ಕೇಶವಪುರ, ದಾಸಯ್ಯನಹಟ್ಟಿ, ಕೊಂಡಾಪುರ, ಆ೦ನೇಯ ದೇವಸ್ಥಾನ ಪ್ರದೇಶ, ಬಸವೇಶ್ವರ ದೇವಸ್ಥಾನ ಪ್ರದೇಶ, ಮೇಕೇನಹಟ್ಟಿ, ಕಾಟಯ್ಯನಕೆರೆ ಪ್ರದೇಶ, ನರಸಿಂಹಸ್ವಾಮಿ ದೇವಸ್ಥಾನ(ಗರಗ), ಅರಸನಘಟ್ಟ, ಗರಗ ಕಾವಲು, ಸಾದರಹಳ್ಳಿ, ಚಿಕ್ಕಂದವಾಡಿ, ಕರೀಮಟ್ಟಿ, ಚಿಕ್ಕನಕಟ್ಟೆ, ಚಿಕ್ಕಹೆಮ್ಮಿಗನೂರು, ಕೆ.ಎನ್.ಹಳ್ಳಿ, ತನಿಗೆಹಳ್ಳಿ, ಹರೇಕಂದವಾಡಿ, ಗುಂಜಿಗನೂರು, ರಂಗವ್ವನಹಳ್ಳಿ, ಬಿ.ದುರ್ಗ, ಐಯನಹಳ್ಳಿ, ಕಡೂರು, ಕೋಟೇಹಾಳು, ಎಸ್.ಹೆಚ್.ಹಳ್ಳಿ, ಚಿಕ್ಕಂದವಾಡಿ, ಚಿಕ್ಕಜಾಜೂರು, ಕವಲಹಟ್ಟಿ, ಹೋಸಹಳ್ಳಿ, ಸಾವೇರಮ್ಮ, ಗುಂಜಿಗನೂರು, ಗಾಳಿಮಾರಮ್ಮ ದೇವಸ್ಥಾನ ಪ್ರದೇಶ, ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಮಾರ್ಚ್ 23 ರಿಂದ 25 ರ ವರೆಗೆ ಕೋಲಾರ ವ್ಯಾಪ್ತಿಯ ಕ್ಯಾಸಂಬಳ್ಳಿ 2-02, 2-0325-04, 2-11 ಮತ್ತು ಎಫ್-12 ಫೀಡರ್ಗಳಿಗೆ ಸೇರಿರುವ ಗ್ರಾಮಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ.
ವಿವಿಧ ಫೀಡರ್ಗಳು ಮತ್ತು ಎಲೆಕ್ಟ್ರಿಕಲ್ ಸೆಕ್ಷನ್ಗಳ ವ್ಯಾಪ್ತಿಯಲ್ಲಿರುವ ಪ್ರದೇಶಗಳು ಈ ವಿದ್ಯುತ್ ವ್ಯತ್ಯಯಕ್ಕೆ ಒಳಪಡಲಿವೆ. ನಿರ್ವಹಣಾ ಕಾಮಗಾರಿಗಳು ಪೂರ್ಣಗೊಂಡ ನಂತರ ವಿದ್ಯುತ್ ಸರಬರಾಜು ಪುನಃಸ್ಥಾಪನೆಗೊಳ್ಳಲಿವೆ.
ಸಾರ್ವಜನಿಕರು ಮುಂಚಿತವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಬೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದಾರೆ. ವಿಶೇಷವಾಗಿ ವ್ಯಾಪಾರಿಗಳು, ಐಟಿ ಕಂಪನಿಗಳು ಮತ್ತು ಗೃಹ ಬಳಕೆದಾರರು ವಿದ್ಯುತ್ ವ್ಯತ್ಯಯ ಸಮಯದಲ್ಲಿ ತೊಂದರೆ ತಪ್ಪಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ವಿದ್ಯುತ್ ವ್ಯತ್ಯಯಕ್ಕೆ ಒಳಪಡುವ ಪ್ರದೇಶಗಳ ಹೆಚ್ಚಿನ ವಿವರಗಳನ್ನು ಬೆಸ್ಕಾಂ ವೆಬ್ಸೈಟ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿಯೂ ಪ್ರಕಟಿಸಲಾಗಿದೆ.

