ಚಿತ್ರದುರ್ಗ: ಪತ್ನಿ ಸೇರಿದಂತೆ ಕುಟುಂಬ ಸದಸ್ಯರ ಮೇಲೆ ವ್ಯಕ್ತಿಯೊಬ್ಬ ಆ್ಯಸಿಡ್ ದಾಳಿ ಮಾಡಿದ್ದಾನೆ. ಐದು ಜನರ ಮೇಲೆ ಆ್ಯಸಿಡ್ ದಾಳಿ ನಡೆಸಿ ನಂತರ ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ಚಿತ್ರದುರ್ಗ ಹೊರವಲಯದ ಮಾಳಪ್ಪನಹಟ್ಟಿಯಲ್ಲಿ ನಡೆದಿದೆ.
ಸುಹೇಲ್ ಬಾಷಾ ಎಂಬಾತನಿಂದ ಪತ್ನಿ ತಾಸಿನಾ ಬಾನು, ಪುತ್ರಿ ರೋಷನಿ ಮತ್ತು ಸಹೋದರಿ ನೇಹಾ, ನೇಹಾ ಪುತ್ರಿ ಇಖ್ರಾ, ನಗ್ಮಾ ಮೇಲೆ ಆ್ಯಸಿಡ್ ದಾಳಿ ನಡೆಸಲಾಗಿದೆ.
ಸುಹೇಲ್ ಬಾಷಾ ಮತ್ತು ತಾಸಿನಾ ಬಾನು ಪ್ರೀತಿಸಿ ಮದುವೆಯಾಗಿದ್ದು, ಕಿರುಕುಳ ನೀಡುತ್ತಿದ್ದ ಕಾರಣ ಕೆಲವು ತಿಂಗಳ ಹಿಂದೆ ಪತಿಯನ್ನು ತೊರೆದು ಬೆಂಗಳೂರಿಗೆ ಹೋಗಿದ್ದ ತಾಸಿನಾ ಬಾನು ಹಬ್ಬಕ್ಕೆಂದು ಚಿತ್ರದುರ್ಗದ ಸಹೋದರಿ ಮನೆಗೆ ಬಂದಿದ್ದರು.
ಸಹೋದರಿ ನಗ್ಮಾ ಮನೆಗೆ ತಾಸಿನಾ ಬಂದಾಗ ಆರೋಪಿ ಕೃತ್ಯ ಎಸಗಿದ್ದಾನೆ. ಪತ್ನಿ ತಾಸಿನಾ ಬಾನು ಮೇಲೆ ಮಚ್ಚಿನಿಂದ ಬಾಷಾ ಹಲ್ಲೆ ಮಾಡಿದ್ದಾನೆ. ಹಲ್ಲೆಯ ನಂತರ ಪತ್ನಿಯ ಕುಟುಂಬ ಸದಸ್ಯರ ಮೇಲೆ ಆ್ಯಸಿಡ್ ದಾಳಿ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಚಿತ್ರದುರ್ಗದ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

