ಎಂಜಿನಿಯರಿಂಗ್ ಪದವೀಧರರಿಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ವೃತ್ತಿಜೀವನ ಆರಂಭಿಸಲು ಸುವರ್ಣಾವಕಾಶ ಒದಗಿಬಂದಿದೆ. ಭಾರತೀಯ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಪ್ರತಿಷ್ಠಿತ ನವರತ್ನ ಸಂಸ್ಥೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL), ಬೆಂಗಳೂರು ಘಟಕದಲ್ಲಿ ಖಾಲಿ ಇರುವ ಒಟ್ಟು 35 ಡೆಪ್ಯುಟಿ ಎಂಜಿನಿಯರ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಸಿವಿಲ್, ಆರ್ಕಿಟೆಕ್ಚರ್ ಮತ್ತು ಹಾರ್ಟಿಕಲ್ಚರ್ ವಿಭಾಗಗಳಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಆಯ್ಕೆಯಾದವರಿಗೆ ತಿಂಗಳಿಗೆ ಗರಿಷ್ಠ ₹1.40 ಲಕ್ಷದವರೆಗೆ ಆಕರ್ಷಕ ವೇತನ ಶ್ರೇಣಿ ದೊರೆಯಲಿದೆ.
ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಪ್ರಮುಖ ಸಾರ್ವಜನಿಕ ವಲಯದ ಸಂಸ್ಥೆಯಾದ ಭಾರತ್ ಎಲಕ್ಟ್ರಾನಿಕ್ಸ್ ಲಿಮಿಟೆಡ್ (BEL), ಬೆಂಗಳೂರಿನ ತನ್ನ ಘಟಕದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಎಂಜಿನಿಯರಿಂಗ್ ಪದವೀಧರರಿಗೆ ಇದು ಉತ್ತಮ ಅವಕಾಶವಾಗಿದೆ.
ಹುದ್ದೆಗಳ ವಿವರ
ಒಟ್ಟು 35 ಡೆಪ್ಯುಟಿ ಎಂಜಿನಿಯರ್ (Deputy Engineer) ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.ವಿಭಾಗಗಳು: ಸಿವಿಲ್ (Civil), ಆರ್ಕಿಟೆಕ್ಚರ್ (Architecture) ಮತ್ತು ಹಾರ್ಟಿಕಲ್ಚರ್ (Horticulture).
ವಿದ್ಯಾರ್ಹತೆ:
- ಸಿವಿಲ್: BE / B.Tech / B.Sc (Engineering).
- ಆರ್ಕಿಟೆಕ್ಚರ್: B.Arch.
- ಹಾರ್ಟಿಕಲ್ಚರ್: M.Sc (Horticulture).
- ಅಂಕಗಳು: ಜನರಲ್, OBC, EWS ಅಭ್ಯರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. SC, ST ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಕೇವಲ ಪಾಸ್ ಅಂಕಗಳಿದ್ದರೆ ಸಾಕು.
ವಯೋಮಿತಿ (ಮಾರ್ಚ್ 1, 2026ಕ್ಕೆ ಅನ್ವಯ):
- ಗರಿಷ್ಠ ವಯಸ್ಸು 28 ವರ್ಷಗಳು.
- ಸಡಿಲಿಕೆ: OBC ಅಭ್ಯರ್ಥಿಗಳಿಗೆ 3 ವರ್ಷ, SC/ST ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.
ವೇತನ ಮತ್ತು ಸೌಲಭ್ಯ:
- ತಿಂಗಳಿಗೆ ₹40,000 ರಿಂದ ₹1,40,000 ವರೆಗೆ ವೇತನ ಶ್ರೇಣಿ ಇರುತ್ತದೆ.
- ಇದರೊಂದಿಗೆ DA, HRA ಮತ್ತು PRP (ಕಾರ್ಯಕ್ಷಮತೆ ಆಧಾರಿತ ವೇತನ) ಸೌಲಭ್ಯಗಳು ದೊರೆಯಲಿವೆ.
- ಆರಂಭದಲ್ಲಿ 5 ವರ್ಷಗಳ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು (ಕಾರ್ಯಕ್ಷಮತೆ ಆಧಾರದ ಮೇಲೆ ಇನ್ನೂ 2 ವರ್ಷ ವಿಸ್ತರಿಸುವ ಅವಕಾಶವಿದೆ).
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ (Written Test).
- ಸಂದರ್ಶನ (Interview).
- ಗಮನಿಸಿ: ಲಿಖಿತ ಪರೀಕ್ಷೆಯು ಬೆಂಗಳೂರಿನಲ್ಲಿ ಮಾತ್ರ ನಡೆಯಲಿದೆ.
ಅರ್ಜಿ ಶುಲ್ಕ:
- ಜನರಲ್ / OBC / EWS ಅಭ್ಯರ್ಥಿಗಳಿಗೆ: ₹400 + 18% GST.
- SC, ST, PwBD ಮತ್ತು ಮಾಜಿ ಸೈನಿಕರಿಗೆ: ಶುಲ್ಕ ವಿನಾಯಿತಿ ಇದೆ.
ಅರ್ಜಿ ಸಲ್ಲಿಸುವ ವಿಧಾನ:
- ಅಭ್ಯರ್ಥಿಗಳು BEL ಅಧಿಕೃತ ವೆಬ್ಸೈಟ್ www.bel-india.in ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕು.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 1, 2026.

