HomeLatest NewsLPG Crisis : ಭಾರತಕ್ಕೆ ಗುಡ್ ನ್ಯೂಸ್ ;  ಹಾರ್ಮುಜ್ ಜಲಸಂಧಿ ಮೂಲಕ ಸಾಗಲು 'LPG'...

LPG Crisis : ಭಾರತಕ್ಕೆ ಗುಡ್ ನ್ಯೂಸ್ ;  ಹಾರ್ಮುಜ್ ಜಲಸಂಧಿ ಮೂಲಕ ಸಾಗಲು ‘LPG’  ಟ್ಯಾಂಕರ್‌’ಗಳಿಗೆ ಇರಾನ್‌ ಅನುಮತಿ.!

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿದ್ದ ಬಿಕ್ಕಟ್ಟು ತಿಳಿಯಾಗುತ್ತಿದ್ದು, ಭಾರತಕ್ಕೆ ದೊಡ್ಡ ಮಟ್ಟದ ಸಮಾಧಾನ ಸಿಕ್ಕಿದೆ.

ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇರಾನ್ ಸಚಿವರೊಂದಿಗೆ ನಡೆಸಿದ ಸತತ ರಾಜತಾಂತ್ರಿಕ ಮಾತುಕತೆಗಳ ನಂತರ, ಭಾರತೀಯ ಧ್ವಜ ಹೊತ್ತ ಎಲ್‌ಪಿಜಿ (LPG) ಟ್ಯಾಂಕರ್‌ಗಳಿಗೆ ಸುರಕ್ಷಿತವಾಗಿ ಜಲಸಂಧಿ ದಾಟಲು ಇರಾನ್ ಅನುಮತಿ ನೀಡಿದೆ. ಈ ಬೆಳವಣಿಗೆಯಿಂದಾಗಿ ದೇಶದಲ್ಲಿ ಎದುರಾಗಬಹುದಾಗಿದ್ದ ಅಡುಗೆ ಅನಿಲದ ಕೊರತೆಯ ಭೀತಿ ದೂರಾದಂತಾಗಿದೆ.

ಪಶ್ಚಿಮ ಏಷ್ಯಾ ಬಿಕ್ಕಟ್ಟು ಮುಂದುವರಿಯುತ್ತಿರುವ ಬೆನ್ನಲ್ಲೇ ಒಂದು ಪ್ರಮುಖ ರಾಜತಾಂತ್ರಿಕ ಪ್ರಗತಿ ಕಂಡುಬಂದಿದೆ. ಇರಾನ್ ಸರ್ಕಾರವು ಎರಡು ಭಾರತೀಯ ಎಲ್‌ಪಿಜಿ (LPG) ಟ್ಯಾಂಕರ್‌ಗಳಿಗೆ ‘ಹೋರ್ಮುಜ್ ಜಲಸಂಧಿ’ (Strait of Hormuz) ಮೂಲಕ ಪ್ರಯಾಣಿಸಲು ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾರು 40,000 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತ ‘ಶಿವಾಲಿಕ್’ ಎಂಬ ಬೃಹತ್ ಹಡಗು ಈಗಾಗಲೇ ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದೆ. ಇದರೊಂದಿಗೆ ‘ಪುಷ್ಪಕ್’ ಮತ್ತು ‘ಪರಿಮಳ್’ ಎಂಬ ಇತರ ಎರಡು ಟ್ಯಾಂಕರ್‌ಗಳಿಗೂ ಇರಾನ್ ಸುರಕ್ಷಿತ ಮಾರ್ಗವನ್ನು ಕಲ್ಪಿಸಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ ಅವರೊಂದಿಗೆ ದೂರವಾಣಿ ಮೂಲಕ ನಡೆಸಿದ ಮೂರ್ನಾಲ್ಕು ಸುತ್ತಿನ ಮಾತುಕತೆಗಳು ಈ ಯಶಸ್ಸಿಗೆ ಕಾರಣವಾಗಿವೆ. ಪ್ರಧಾನಿ ಮೋದಿಯವರು ಕೂಡ ಇರಾನ್ ಅಧ್ಯಕ್ಷರೊಂದಿಗೆ ಈ ಬಗ್ಗೆ ಚರ್ಚಿಸಿದ್ದರು.

ಇರಾನ್ ರಾಯಭಾರಿ ಹೇಳಿಕೆ: “ಭಾರತ ನಮ್ಮ ಆಪ್ತ ಮಿತ್ರ ರಾಷ್ಟ್ರವಾಗಿದ್ದು, ಎರಡೂ ದೇಶಗಳು ಈ ಪ್ರದೇಶದಲ್ಲಿ ಸಾಮಾನ್ಯ ಹಿತಾಸಕ್ತಿಗಳನ್ನು ಹೊಂದಿವೆ. ಆದ್ದರಿಂದ ಭಾರತೀಯ ಹಡಗುಗಳಿಗೆ ಸುರಕ್ಷಿತ ಮಾರ್ಗ ನೀಡಲು ನಾವು ಬದ್ಧರಿದ್ದೇವೆ” ಎಂದು ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ತಿಳಿಸಿದ್ದಾರೆ.

ಇಂಧನ ಪೂರೈಕೆಗೆ ನೆರವು: ಈ ಬೆಳವಣಿಗೆಯಿಂದಾಗಿ ಭಾರತಕ್ಕೆ ಆಗುತ್ತಿದ್ದ ಇಂಧನ ಪೂರೈಕೆಯ ಸಮಸ್ಯೆಯು ಸ್ವಲ್ಪಮಟ್ಟಿಗೆ ತಗ್ಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.ಈ ವಿಷಯಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದಿಂದ ಇನ್ನೂ ಅಧಿಕೃತ ದೃಢೀಕರಣ ಬರಬೇಕಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular