HomeBusinessಎಸ್‌ಬಿಐ ವೀ ಕೇರ್ ಮ್ಯಾಜಿಕ್: ಹಿರಿಯ ನಾಗರಿಕರು 5 ಲಕ್ಷ ಇಟ್ಟರೆ 10 ವರ್ಷಕ್ಕೆ ಬಡ್ಡಿಯೇ...

ಎಸ್‌ಬಿಐ ವೀ ಕೇರ್ ಮ್ಯಾಜಿಕ್: ಹಿರಿಯ ನಾಗರಿಕರು 5 ಲಕ್ಷ ಇಟ್ಟರೆ 10 ವರ್ಷಕ್ಕೆ ಬಡ್ಡಿಯೇ ₹5 ಲಕ್ಷಕ್ಕೂ ಅಧಿಕ

ಬೆಂಗಳೂರು: ಷೇರು ಮಾರುಕಟ್ಟೆಯ ಏರಿಳಿತದ ನಡುವೆ ನನ್ನ ಹಣ ಸುರಕ್ಷಿತವಾಗಿರಬೇಕು ಎನ್ನುವವರಿಗೆ ಇಂದಿಗೂ ಬ್ಯಾಂಕ್ ಸ್ಥಿರ ಠೇವಣಿ (Fixed Deposit) ಮೊದಲ ಆಯ್ಕೆ. ಅದರಲ್ಲೂ ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI) ತನ್ನ ಗ್ರಾಹಕರಿಗೆ ನಿಶ್ಚಿತ ಆದಾಯದ ಭರವಸೆ ನೀಡುತ್ತಿದೆ. ನೀವು ಎಸ್‌ಬಿಐನಲ್ಲಿ ಹಣ ಹೂಡಿಕೆ ಮಾಡುವ ಪ್ಲಾನ್‌ನಲ್ಲಿದ್ದರೆ ಇಂದಿನ ಲೇಟೆಸ್ಟ್ ಬಡ್ಡಿ ದರಗಳು ಮತ್ತು 5 ಲಕ್ಷದ ಹೂಡಿಕೆ ಹೇಗೆ ಡಬಲ್ ಆಗುತ್ತದೆ ಎಂಬ ವಿವರ ಇಲ್ಲಿದೆ.

ಹಿರಿಯ ನಾಗರಿಕರಿಗೆ ವೀ ಕೇರ್ (SBI Wecare) ಬಂಪರ್

ಸಾಮಾನ್ಯ ಜನರಿಗಿಂತ ಹಿರಿಯ ನಾಗರಿಕರಿಗೆ ಎಸ್‌ಬಿಐ ಯಾವಾಗಲೂ ಹೆಚ್ಚಿನ ಆದಾಯ ನೀಡುತ್ತದೆ. ವಿಶೇಷವಾಗಿ 5 ರಿಂದ 10 ವರ್ಷಗಳ ಅವಧಿಯ ಎಫ್‌ಡಿ ಮೇಲೆ ಹಿರಿಯ ನಾಗರಿಕರಿಗೆ ಸಾಮಾನ್ಯರಿಗಿಂತ 1% (100 ಬೇಸಿಸ್ ಪಾಯಿಂಟ್ಸ್) ಹೆಚ್ಚುವರಿ ಬಡ್ಡಿ ಸಿಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

5 ಲಕ್ಷ ಹೂಡಿಕೆ: 10 ವರ್ಷಗಳ ನಂತರ ಸಿಗುವ ಲಾಭ ಎಷ್ಟು?

ನೀವು ಒಮ್ಮೆಗೆ ₹5 ಲಕ್ಷವನ್ನು 10 ವರ್ಷಗಳ ಅವಧಿಗೆ ಜಮೆ ಮಾಡಿದರೆ ಸಿಗುವ ಮೆಚ್ಯೂರಿಟಿ ಮೊತ್ತ ಹೀಗಿದೆ:

ವರ್ಗಬಡ್ಡಿ ದರ10 ವರ್ಷಗಳ ಬಡ್ಡಿಒಟ್ಟು ಮೆಚ್ಯೂರಿಟಿ ಮೊತ್ತ

ಸಾಮಾನ್ಯ ಜನರು6.05%₹4,11,488₹9,11,488

ಹಿರಿಯ ನಾಗರಿಕರು7.05%₹5,05,728₹10,05,728

ಎಸ್‌ಬಿಐ ಇಂದಿನ ಲೇಟೆಸ್ಟ್ ಬಡ್ಡಿ ದರಗಳು (SBI FD Rates):

ಬ್ಯಾಂಕ್ 7 ದಿನಗಳಿಂದ 10 ವರ್ಷಗಳವರೆಗೆ ವಿವಿಧ ಅವಧಿಯ ಹೂಡಿಕೆಗೆ ಅವಕಾಶ ನೀಡಿದೆ:

7 ರಿಂದ 45 ದಿನಗಳು: ಸಾಮಾನ್ಯ ಜನರಿಗೆ 3.05%, ಹಿರಿಯ ನಾಗರಿಕರಿಗೆ 3.55%.

46 ರಿಂದ 179 ದಿನಗಳು: ಸಾಮಾನ್ಯ ಜನರಿಗೆ 4.90%, ಹಿರಿಯ ನಾಗರಿಕರಿಗೆ 5.40%.

180 ರಿಂದ 210 ದಿನಗಳು: ಸಾಮಾನ್ಯ ಜನರಿಗೆ 5.65%, ಹಿರಿಯ ನಾಗರಿಕರಿಗೆ 6.15%.

211 ದಿನಗಳಿಂದ 1 ವರ್ಷದ ಒಳಗೆ: ಸಾಮಾನ್ಯ ಜನರಿಗೆ 5.90%, ಹಿರಿಯ ನಾಗರಿಕರಿಗೆ 6.40%.

1 ರಿಂದ 2 ವರ್ಷ: ಸಾಮಾನ್ಯರಿಗೆ 6.25%, ಹಿರಿಯ ನಾಗರಿಕರಿಗೆ 6.75%

2 ರಿಂದ 3 ವರ್ಷ: ಸಾಮಾನ್ಯರಿಗೆ 6.40%, ಹಿರಿಯ ನಾಗರಿಕರಿಗೆ 6.90%

3 ರಿಂದ 5 ವರ್ಷ: ಸಾಮಾನ್ಯರಿಗೆ 6.30%, ಹಿರಿಯ ನಾಗರಿಕರಿಗೆ 6.80%

5 ರಿಂದ 10 ವರ್ಷ: ಸಾಮಾನ್ಯರಿಗೆ 6.05%, ಹಿರಿಯ ನಾಗರಿಕರಿಗೆ 7.05%

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular