ಬೆಂಗಳೂರು: ಷೇರು ಮಾರುಕಟ್ಟೆಯ ಏರಿಳಿತದ ನಡುವೆ ನನ್ನ ಹಣ ಸುರಕ್ಷಿತವಾಗಿರಬೇಕು ಎನ್ನುವವರಿಗೆ ಇಂದಿಗೂ ಬ್ಯಾಂಕ್ ಸ್ಥಿರ ಠೇವಣಿ (Fixed Deposit) ಮೊದಲ ಆಯ್ಕೆ. ಅದರಲ್ಲೂ ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ನಿಶ್ಚಿತ ಆದಾಯದ ಭರವಸೆ ನೀಡುತ್ತಿದೆ. ನೀವು ಎಸ್ಬಿಐನಲ್ಲಿ ಹಣ ಹೂಡಿಕೆ ಮಾಡುವ ಪ್ಲಾನ್ನಲ್ಲಿದ್ದರೆ ಇಂದಿನ ಲೇಟೆಸ್ಟ್ ಬಡ್ಡಿ ದರಗಳು ಮತ್ತು 5 ಲಕ್ಷದ ಹೂಡಿಕೆ ಹೇಗೆ ಡಬಲ್ ಆಗುತ್ತದೆ ಎಂಬ ವಿವರ ಇಲ್ಲಿದೆ.
ಹಿರಿಯ ನಾಗರಿಕರಿಗೆ ವೀ ಕೇರ್ (SBI Wecare) ಬಂಪರ್
ಸಾಮಾನ್ಯ ಜನರಿಗಿಂತ ಹಿರಿಯ ನಾಗರಿಕರಿಗೆ ಎಸ್ಬಿಐ ಯಾವಾಗಲೂ ಹೆಚ್ಚಿನ ಆದಾಯ ನೀಡುತ್ತದೆ. ವಿಶೇಷವಾಗಿ 5 ರಿಂದ 10 ವರ್ಷಗಳ ಅವಧಿಯ ಎಫ್ಡಿ ಮೇಲೆ ಹಿರಿಯ ನಾಗರಿಕರಿಗೆ ಸಾಮಾನ್ಯರಿಗಿಂತ 1% (100 ಬೇಸಿಸ್ ಪಾಯಿಂಟ್ಸ್) ಹೆಚ್ಚುವರಿ ಬಡ್ಡಿ ಸಿಗಲಿದೆ.
5 ಲಕ್ಷ ಹೂಡಿಕೆ: 10 ವರ್ಷಗಳ ನಂತರ ಸಿಗುವ ಲಾಭ ಎಷ್ಟು?
ನೀವು ಒಮ್ಮೆಗೆ ₹5 ಲಕ್ಷವನ್ನು 10 ವರ್ಷಗಳ ಅವಧಿಗೆ ಜಮೆ ಮಾಡಿದರೆ ಸಿಗುವ ಮೆಚ್ಯೂರಿಟಿ ಮೊತ್ತ ಹೀಗಿದೆ:
ವರ್ಗಬಡ್ಡಿ ದರ10 ವರ್ಷಗಳ ಬಡ್ಡಿಒಟ್ಟು ಮೆಚ್ಯೂರಿಟಿ ಮೊತ್ತ
ಸಾಮಾನ್ಯ ಜನರು6.05%₹4,11,488₹9,11,488
ಹಿರಿಯ ನಾಗರಿಕರು7.05%₹5,05,728₹10,05,728
ಎಸ್ಬಿಐ ಇಂದಿನ ಲೇಟೆಸ್ಟ್ ಬಡ್ಡಿ ದರಗಳು (SBI FD Rates):
ಬ್ಯಾಂಕ್ 7 ದಿನಗಳಿಂದ 10 ವರ್ಷಗಳವರೆಗೆ ವಿವಿಧ ಅವಧಿಯ ಹೂಡಿಕೆಗೆ ಅವಕಾಶ ನೀಡಿದೆ:
7 ರಿಂದ 45 ದಿನಗಳು: ಸಾಮಾನ್ಯ ಜನರಿಗೆ 3.05%, ಹಿರಿಯ ನಾಗರಿಕರಿಗೆ 3.55%.
46 ರಿಂದ 179 ದಿನಗಳು: ಸಾಮಾನ್ಯ ಜನರಿಗೆ 4.90%, ಹಿರಿಯ ನಾಗರಿಕರಿಗೆ 5.40%.
180 ರಿಂದ 210 ದಿನಗಳು: ಸಾಮಾನ್ಯ ಜನರಿಗೆ 5.65%, ಹಿರಿಯ ನಾಗರಿಕರಿಗೆ 6.15%.
211 ದಿನಗಳಿಂದ 1 ವರ್ಷದ ಒಳಗೆ: ಸಾಮಾನ್ಯ ಜನರಿಗೆ 5.90%, ಹಿರಿಯ ನಾಗರಿಕರಿಗೆ 6.40%.
1 ರಿಂದ 2 ವರ್ಷ: ಸಾಮಾನ್ಯರಿಗೆ 6.25%, ಹಿರಿಯ ನಾಗರಿಕರಿಗೆ 6.75%
2 ರಿಂದ 3 ವರ್ಷ: ಸಾಮಾನ್ಯರಿಗೆ 6.40%, ಹಿರಿಯ ನಾಗರಿಕರಿಗೆ 6.90%
3 ರಿಂದ 5 ವರ್ಷ: ಸಾಮಾನ್ಯರಿಗೆ 6.30%, ಹಿರಿಯ ನಾಗರಿಕರಿಗೆ 6.80%
5 ರಿಂದ 10 ವರ್ಷ: ಸಾಮಾನ್ಯರಿಗೆ 6.05%, ಹಿರಿಯ ನಾಗರಿಕರಿಗೆ 7.05%

