ಕಾರವಾರ: ಆರೋಗ್ಯ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕಾರವಾರದಲ್ಲಿ ಭಾನುವಾರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ 10ನೇ ಗ್ಯಾರಂಟಿಯಾಗಿ ಎಲ್ಲರಿಗೂ ಉಚಿತ ಆರೋಗ್ಯ ಸೇವೆ ನೀಡುವ ಸಂಕಲ್ಪ ಮಾಡಿದೆ ಎಂದು ಘೋಷಿಸಿದ್ದಾರೆ.
ಶಕ್ತಿ, ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯ, ಗೃಹಲಕ್ಷ್ಮಿಯಂತಹ ಐದು ಗ್ಯಾರಂಟಿಗಳನ್ನು ನೀಡಿದ್ದೇವೆ. ನಮ್ಮ ಆರನೇ ಗ್ಯಾರಂಟಿ ಬಡವರಿಗೆ ಭೂಮಿ ಕೊಡುವುದಾಗಿದೆ. ಏಳನೇ ಗ್ಯಾರಂಟಿ ನೀರು, ನೀರಾವರಿ ಸೌಲಭ್ಯ ಒದಗಿಸುವುದು, ಎಂಟನೇ ಗ್ಯಾರಂಟಿ ಎಲ್ಲ ಬಡವರಿಗೆ ಮನೆ ನೀಡುವುದು, 9ನೇ ಗ್ಯಾರಂಟಿ ಇ-ಖಾತಾ ಬಳಿಕ 10ನೇ ಗ್ಯಾರಂಟಿಯಾಗಿ ಎಲ್ಲರಿಗೂ ಆರೋಗ್ಯ ಗ್ಯಾರಂಟಿ ನೀಡುತ್ತೇವೆ ಎಂದು ಹೇಳಿದ್ದಾರೆ.

