HomeLatest NewsT20 World Cup 2026: ತವರಿನಲ್ಲಿ ಭಾರತಕ್ಕೆ ಭಾರೀ ಮುಖಭಂಗ; ದಕ್ಷಿಣ ಆಫ್ರಿಕಾ ಬೌಲಿಂಗ್‌ಗೆ ಟೀಮ್...

T20 World Cup 2026: ತವರಿನಲ್ಲಿ ಭಾರತಕ್ಕೆ ಭಾರೀ ಮುಖಭಂಗ; ದಕ್ಷಿಣ ಆಫ್ರಿಕಾ ಬೌಲಿಂಗ್‌ಗೆ ಟೀಮ್ ಇಂಡಿಯಾ ಧೂಳೀಪಟ

ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಸುತ್ತಿನ ಮೂರನೇ ಪಂದ್ಯ ಇಂದು ( ಫೆಬ್ರವರಿ 22 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದು, ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಭರ್ಜರಿ ಗೆಲುವನ್ನು ಸಾಧಿಸಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆರಿಸಿಕೊಂಡು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿ ದಕ್ಷಿಣ ಆಫ್ರಿಕಾಗೆ 188 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಭಾರತ 18.4 ಓವರ್‌ಗಳಲ್ಲಿ 111 ರನ್ ಕಲೆಹಾಕಿ ಆಲ್‌ಔಟ್ ಆಗಿದೆ.

ದಕ್ಷಿಣ ಆಫ್ರಿಕಾ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಕ್ವಿಂಟನ್ ಡಿ ಕಾಕ್ 6 ರನ್ ಕಲೆಹಾಕಿದರೆ, ಏಡನ್ ಮಾರ್ಕ್ರಮ್ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬೆನ್ನಲ್ಲೇ ರಯಾನ್ ರಿಕಲ್ಟನ್ 7 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಈ ಮೂಲಕ ದಕ್ಷಿಣ ಆಫ್ರಿಕಾ ಕೇವಲ 20 ರನ್‌ಗೆ ತನ್ನ ಮೂರು ವಿಕೆಟ್ ಕಳೆದುಕೊಂಡು ಕೆಟ್ಟ ಆರಂಭ ಪಡೆದುಕೊಂಡಿತು. ಹೀಗೆ ಹೀನಾಯ ಆರಂಭ ಪಡೆದುಕೊಂಡ ದಕ್ಷಿಣ ಆಫ್ರಿಕಾಗೆ ನಾಲ್ಕನೇ ವಿಕೆಟ್‌ಗೆ ಜತೆಯಾದ ಡಿವಾಲ್ಡ್ ಬ್ರೆವಿಸ್ ಹಾಗೂ ಡೇವಿಡ್ ಮಿಲ್ಲರ್ 50 ಎಸೆತಗಳಲ್ಲಿ 97 ರನ್‌ಗಳ ಜತೆಯಾಟವನ್ನಾಡಿ ತಂಡಕ್ಕೆ ದೊಡ್ಡ ಸುಧಾರಣೆ ನೀಡಿದರು. ಬ್ರೆವಿಸ್ 29 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 45 ರನ್ ಬಾರಿಸಿದರೆ, ಡೇವಿಡ್ ಮಿಲ್ಲರ್ 35 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 63 ರನ್ ಚಚ್ಚಿದರು. ಇನ್ನುಳಿದಂತೆ ಅಂತಿಮ ಹಂತದವರೆಗೂ ನಿಂತು ಕೊನೆಯಲ್ಲಿ ಅಬ್ಬರಿಸಿದ ಟ್ರಿಸ್ಟನ್ ಸ್ಟಬ್ಸ್ 24 ಎಸೆತಗಳಲ್ಲಿ 1 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 44 ರನ್ ಬಾರಿಸಿದರೆ, ಮಾರ್ಕೊ ಯಾನ್ಸೆನ್ 2, ಕಾರ್ಬಿನ್ ಬಾಷ್ 5 ರನ್ ಹಾಗೂ ಯಾವುದೇ ರನ್ ಗಳಿಸದ ಕಗಿಸೊ ರಬಾಡಾ ಅಜೇಯರಾಗಿ ಉಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತದ ಪರ ಜಸ್‌ಪ್ರೀತ್ ಬುಮ್ರಾ ಮೂರು ವಿಕೆಟ್, ಅರ್ಷ್‌ದೀಪ್ ಸಿಂಗ್ ಎರಡು ವಿಕೆಟ್, ವರುಣ್ ಚಕ್ರವರ್ತಿ ಹಾಗೂ ಶಿವಮ್ ದುಬೆ ತಲಾ ಒಂದೊಂದು ವಿಕೆಟ್ ಪಡೆದರು.

ಭಾರತ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಇಶಾನ್ ಕಿಶನ್ ಮಾರ್ಕ್ರಮ್ ಮಾಡಿದ ಮೊದಲ ಓವರ್‌ನಲ್ಲೇ ಡಕ್‌ಔಟ್ ಆದರು. ಈ ಮೂಲಕ ಭಾರತ ಯಾವುದೇ ರನ್ ಗಳಿಸದೇ ತನ್ನ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬೆನ್ನಲ್ಲೇ ಕಣಕ್ಕಿಳಿದ ತಿಲಕ್ ವರ್ಮಾ ಕೇವಲ 1 ರನ್‌ಗೆ ಪೆವಿಲಿಯನ್ ಸೇರಿಕೊಂಡರು. ನಂತರ ಮತ್ತೋರ್ವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 15 ರನ್ ಗಳಿಸಿ ಮತ್ತೊಮ್ಮೆ ನೆಲಕಚ್ಚಿದರು. ಅಲ್ಲಿಗೆ ಭಾರತ ಕೇವಲ 26 ರನ್‌ಗೆ ತನ್ನ ಮೊದಲ ಮೂರು ವಿಕೆಟ್ ಕಳೆದುಕೊಂಡು ತೀವ್ರ ಹಿನ್ನಡೆ ಅನುಭವಿಸಿತು. ಹೀಗೆ ಅಗ್ರ ಕ್ರಮಾಂಕ ಕೈಕೊಟ್ಟರೆ ನಂತರ ಕಣಕ್ಕಿಳಿದ ಮಧ್ಯಮ ಕ್ರಮಾಂಕದ ಆಟಗಾರರ ಪೈಕಿ ಶಿವಮ್ ದುಬೆ ಹೊರತುಪಡಿಸಿ ಉಳಿದೆಲ್ಲರೂ ವಿಫಲರಾದರು. ನಾಯಕ ಸೂರ್ಯಕುಮಾರ್ ಯಾದವ್ 18, ವಾಷಿಂಗ್ಟನ್ ಸುಂದರ್ 11, ಹಾರ್ದಿಕ್ ಪಾಂಡ್ಯ 18 ರನ್ ಹಾಗೂ ರಿಂಕು ಸಿಂಗ್ ಡಕ್‌ಔಟ್ ಆದರು. ಇನ್ನುಳಿದಂತೆ ಅರ್ಷ್‌ದೀಪ್ ಸಿಂಗ್ 1,, ಜಸ್‌ಪ್ರೀತ್ ಬುಮ್ರಾ ಡಕ್‌ಔಟ್, ಶಿವಮ್ ದುಬೆ 42 ಹಾಗೂ ಯಾವುದೇ ರನ್ ಗಳಿಸದ ವರುಣ್ ಚಕ್ರವರ್ತಿ ಅಜೇಯರಾಗಿ ಉಳಿದರು.

ದಕ್ಷಿಣ ಆಫ್ರಿಕಾ ಪರ ಮಾರ್ಕೊ ಯಾನ್ಸನ್ ನಾಲ್ಕು ವಿಕೆಟ್, ಕೇಶವ್ ಮಹಾರಾಜ್ ಮೂರು ವಿಕೆಟ್, ಕಾರ್ಬಿನ್ ಬಾಷ್ ಎರಡು ವಿಕೆಟ್ ಹಾಗೂ ಏಡನ್ ಮಾರ್ಕ್ರಮ್ ಒಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular