HomeKarnatakaಮಾವಿನ ಇಳುವರಿ ಹೆಚ್ಚಿಸಲು ಪ್ಲ್ಯಾನ್ : ರೈತರಿಗೆ ಉಚಿತ ಲಘು ಪೋಷಕಾಂಶ ವಿತರಣೆ.!

ಮಾವಿನ ಇಳುವರಿ ಹೆಚ್ಚಿಸಲು ಪ್ಲ್ಯಾನ್ : ರೈತರಿಗೆ ಉಚಿತ ಲಘು ಪೋಷಕಾಂಶ ವಿತರಣೆ.!

ಧಾರವಾಡ :   ಮಾವಿನ ಹೂ ಸಂಪೂರ್ಣ ಅರಳಿದ ಮತ್ತು ಪರಾಗಸ್ಪರ್ಷ ಹಾಗೂ ಕಾಯಿ ಕಚ್ಚುವ ಹಂತದಲ್ಲಿದ್ದು, ಮಾವು ಬೆಳೆಗೆ ಜಿಗಿ ಹುಳು, ಹೂ ಗೂಡುಕಟ್ಟುವ ಹುಳು, ಹೂ ಒಣಗುವ ರೋಗ, ಚಿಬ್ಬು ರೋಗ, ಬೂದಿ ರೋಗ, ಕಾಡಿಗೆ ರೋಗ ಕಂಡು ಬಂದಲ್ಲಿ ರೈತರು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಂಡಳಿಯ ಶಿಫಾರಸ್ಸಿನಂತೆ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು ಎಂದು ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿರ್ವಹಣಾ ಕ್ರಮ: ಲಾಬ್ಡಾಸೈಹ್ಯಾಲೋಥ್ರಿನ್ 5 ಇಅ: 0.6 ಮಿ.ಲಿ/ಲೀ + ಕಾರ್ಬನ್‍ಡೈಜಿಂ ಶೇ. 12+ ಮ್ಯಾಂಕೋಜೆಬ್ ಶೇ. 63 WP: 2.0 ಗ್ರಾಂ/ಲೀ. ಔಷಧಿಯನ್ನು ಸಿಂಪರಿಸಬೇಕು. ಅಥವಾ ಡೆಲ್ಟಾಮೆಥ್ರಿನ್ 2.8 5 ಇಅ: 1.0 ಮಿ.ಲಿ/ಲೀ + ಟೆಬೂಕೋನಜಾಲ್ ಶೇ. 50 + ಟ್ರೈಫ್ಲಾಕ್ಸಿಸಟ್ರೋಬಿನ್ ಶೇ. 25: Wಉ 0.5 ಮಿ.ಲಿ/ಲೀ ಔಷಧಿಯನ್ನು ಸಿಂಪರಿಸಬೇಕು.

ಪ್ರಸ್ತುತ ಮಾವು ಬೆಳೆಗೆ ಕಲಘಟಗಿ ತಾಲ್ಲೂಕು ತೋಟಗಾರಿಕೆ ಇಲಾಖೆಯಿಂದ ಕಲಘಟಗಿ ತಾಲ್ಲೂಕಿನ ಮಾವು ಬೆಳೆಗಾರರಿಗೆ ಮಾವು ಸ್ಪೇಷಲ್ (ಲಘು ಪೋಷಕಾಂಶ ಮಿಶ್ರಣವನ್ನು) ಜೇಷ್ಠತಾ ಆಧಾರದಲ್ಲಿ ನೀಡಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದ್ದರಿಂದ ಮಾವು ಬೆಳೆಗಾರರು ತಮ್ಮ ಪಹಣಿ ಪತ್ರಿಕೆ ಮತ್ತು ಆಧಾರ ಕಾರ್ಡ ಝರಾಕ್ಸ್ ಪ್ರತಿಯೊಂದಿಗೆ ಕಲಘಟಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ ಸಂಪರ್ಕಿಸಿ, ಪಡೆದುಕೊಳ್ಳಬೇಕು ಎಂದು ಕಲಘಟಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೇಷ್ಮೆ  ಕೃಷಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

ಧಾರವಾಡ : ರೇಷ್ಮೆ ಇಲಾಖೆಯಿಂದ 2023-24 ಮತ್ತು 2024-25 ನೇ ಸಾಲಿನ  ರೇಷ್ಮೆ ಕೃಷಿ ಪ್ರಶಸ್ತಿಗಾಗಿ ಉತ್ತಮ ಪ್ರಗತಿ ಸಾಧಿಸಿರುವ  ರೇಷ್ಮೆ ಬೆಳೆಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರಶಸ್ತಿಗಾಗಿ : ರೇಷ್ಮೆ ಬೆಳೆಗಾರರು 1 ಎಕರೆ ಹಿಪ್ಪುನೇರಳೆ ತೋಟ ಹಾಗೂ ಪ್ರತ್ಯೇಕ ಹುಳು ಸಾಕಾಣಿಕಾ ಮನೆ ಹೊಂದಿರಬೇಕು. 100 ಮೊಟ್ಟೆಗೆ ಸರಾಸರಿ : ರೇಷ್ಮೆ  ಗೂಡಿನ ಇಳುವರಿ 65 ಕೆ.ಜಿ ಹಾಗೂ ಒಂದು ಎಕರೆಗೆ : ರೇಷ್ಮೆ ಗೂಡಿನ ಉತ್ಪಾದನೆ 500 ಕೆ.ಜಿ.ಗಿಂತ ಕಡಿಮೆ ಇರಬಾರದು. ರೇಷ್ಮೆ ಬೆಳೆಗಾರರು ಪಾಸ್ ಬುಕ್, ರೇಷ್ಮೆ ಮೊಟ್ಟೆ, ಚಾಕಿ ಖರೀದಿಸಿರುವ ಬಗ್ಗೆ ಹಾಗೂ ರೇಷ್ಮೆ ಗೂಡು ಮಾರಾಟ ಮಾಡಿರುವ ಬಗ್ಗೆ ದಾಖಲಾತಿಗಳನ್ನು ಹೊಂದಿರಬೇಕು.

ಅರ್ಹ ರೇಷ್ಮೆ ಬೆಳೆಗಾರರು ಸ್ಥಳೀಯ ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿಯ ರೇಷ್ಮೆ ಮ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಿ, ಅರ್ಜಿ ಪಡೆದು, ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಫೆಬ್ರವರಿ 14, 2026 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0836-2957382 ಗೆ ಸಂಪರ್ಕಿಸಬಹುದು ಎಂದು ರೇಷ್ಮೆ ಕೃಷಿ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular