HomeEntertainmentಪ್ರೀತಿ ಜಿಂಟಾಗೆ ಕಡಕ್ ಸಂದೇಶ ರವಾನಿಸಿದ ಎಫ್‌ಡಿಎ ಅಧಿಕಾರಿ: 'ಟೀಮ್ ತುಕಾರಾಂ ಮುಂಧೆ' ಟಿ-ಷರ್ಟ್ ಧರಿಸಿದರೆ...

ಪ್ರೀತಿ ಜಿಂಟಾಗೆ ಕಡಕ್ ಸಂದೇಶ ರವಾನಿಸಿದ ಎಫ್‌ಡಿಎ ಅಧಿಕಾರಿ: ‘ಟೀಮ್ ತುಕಾರಾಂ ಮುಂಧೆ’ ಟಿ-ಷರ್ಟ್ ಧರಿಸಿದರೆ ಸಾಲದು ಎಂದ ಕಮಿಷನರ್!

ಮಹಾರಾಷ್ಟ್ರದಲ್ಲಿ ಆಹಾರ ಸುರಕ್ಷತೆ ಕಾಯ್ದೆಯನ್ನು ಬಿಗಿಗೊಳಿಸಿ ಸುದ್ದಿಯಲ್ಲಿರುವ ಎಫ್‌ಡಿಎ (FDA) ಆಯುಕ್ತ ತುಕಾರಾಂ ಮುಂಧೆ ಅವರಿಗೆ ಬಾಲಿವುಡ್ ನಟಿ ಪ್ರೀತಿ ಜಿಂಟಾ ಬೆಂಬಲ ಸೂಚಿಸಿದ್ದರು. ಇತ್ತೀಚೆಗೆ ಪ್ರೀತಿ ಜಿಂಟಾ ‘ಟೀಮ್ ತುಕಾರಾಂ ಮುಂಧೆ’ ಎಂದು ಬರೆದಿದ್ದ ಕಪ್ಪು ಬಣ್ಣದ ಟಿ-ಷರ್ಟ್ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡು ಅಧಿಕಾರಿಯ ಕಾರ್ಯವೈಖರಿಯನ್ನು ಶ್ಲಾಘಿಸಿದ್ದರು. ಈ ವಿಡಿಯೋ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಇದೀಗ ಸ್ವತಃ ತುಕಾರಾಂ ಮುಂಧೆ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಪಿಟಿಐ ಜೊತೆ ಮಾತನಾಡಿದ ಕಮಿಷನರ್ ತುಕಾರಾಂ ಮುಂಧೆ, “ನಾನು ಅವರೊಂದಿಗೆ ವೈಯಕ್ತಿಕವಾಗಿ ಅಥವಾ ದೂರವಾಣಿ ಮೂಲಕ ಮಾತನಾಡಿಲ್ಲ. ಆದರೆ ಅವರು ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳು” ಎಂದು ಹೇಳಿದ್ದಾರೆ. ಮುಂದುವರಿದು ಮಾತನಾಡಿದ ಅವರು, “ಕೇವಲ ‘ಟೀಮ್ ತುಕಾರಾಂ ಮುಂಧೆ’ ಎಂಬ ಟಿ-ಷರ್ಟ್ ಧರಿಸಿದರೆ ಅಥವಾ ಬೆಂಬಲದ ಬರಹ ಪ್ರದರ್ಶಿಸಿದರೆ ಸಾಲದು. ಒಳ್ಳೆಯ ಆಲೋಚನೆಗಳು ಮತ್ತು ನೈಜ ಕೆಲಸಗಳು ಸಮಾಜದಲ್ಲಿ ಕಾರ್ಯರೂಪಕ್ಕೆ ಬರಬೇಕು. ಆಹಾರ ನೈರ್ಮಲ್ಯದ ಬಗ್ಗೆ ಸರಿಯಾದ ಮನಸ್ಥಿತಿ ಮತ್ತು ಜಾಗೃತಿ ಪ್ರತಿಯೊಬ್ಬರಲ್ಲೂ ಬರಬೇಕು” ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.

ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆಯ (FDA) ಮುಖ್ಯಸ್ಥರಾಗಿರುವ ತುಕಾರಾಂ ಮುಂಧೆ, ಪ್ರಸ್ತುತ ರಾಜ್ಯಾದ್ಯಂತ ಅಸಲಿ ಆಹಾರ ನೈರ್ಮಲ್ಯ ಪಾಲನೆಯಾಗುತ್ತಿದೆಯೇ ಎಂದು ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದಾರೆ. ನಿಯಮ ಉಲ್ಲಂಘಿಸುವ ಆಹಾರ ಮಳಿಗೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಇವರ ಕಾರ್ಯವೈಖರಿ ಬಾಲಿವುಡ್‌ನಲ್ಲೂ ಭಾರೀ ಚರ್ಚೆಯಾಗುತ್ತಿದೆ. ಪ್ರೀತಿ ಜಿಂಟಾ ಮಾತ್ರವಲ್ಲದೆ ನಟಿ ಟ್ವಿಂಕಲ್ ಖನ್ನಾ ಹಾಗೂ ನಟ ಸಲ್ಮಾನ್ ಖಾನ್ ಕೂಡ ಮುಂಧೆ ಅವರ ಈ ಅಭಿಯಾನವನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular